ಗುಲಾಮಗಿರಿ...

ಮನುಷ್ಯ ತನ್ನ ಸುತ್ತಲೊಂದು ವ್ಯೂಹ ರಚಿಸಿಕೊಂಡಿದ್ದಾನೆ. ಆ ವ್ಯೂಹ ದೈಹಿಕˌ ಮಾನಸಿಕ ಗುಲಾಮಗಿರಿಯದು...( ಪರಸ್ಪರವಲಾಂಬನೆ ಬೇರೆˌ ಗುಲಾಮಗಿರಿ ಬೇರೆ). ತನ್ನ ಸ್ವಹಿತದ ರಕ್ಪಣೆಗಾಗಿ ರಚಿಸಿಕೊಂಡ ಚಕ್ರವ್ಯೂಹದಿಂದ ಹೋರಬರದೇ ತಾನೇ ಗುಲಾಮನಾಗಿ ನರಳುತ್ತಿದ್ದಾನೆ. ಆದರೆˌ ಈ ಗುಲಾಮಗಿರಿ ದೇವರ ಗುಲಾಮಗಿರಿˌ ಧರ್ಮˌ ಜಾತಿˌ ಗುರುˌ ರಾಜಕೀಯˌ ದೇಶˌ ಭಾಷೆˌ ನಾಯಕರುಗಳ ಗುಲಾಮಗಿರಿˌ ತತ್ವ ಸಿದ್ದಾಂತ...ಹೀಗೆ ಸಾವಿರಾರು ಮಾನಸಿಕ ಗುಲಾಮಗಿರಿಗಳಿವೆ.

ಗುಲಾಮಗಿರಿ...

 

ಮನುಷ್ಯ ತನ್ನ ಸುತ್ತಲೊಂದು ವ್ಯೂಹ ರಚಿಸಿಕೊಂಡಿದ್ದಾನೆ. ಆ ವ್ಯೂಹ ದೈಹಿಕˌ ಮಾನಸಿಕ ಗುಲಾಮಗಿರಿಯದು...( ಪರಸ್ಪರವಲಾಂಬನೆ ಬೇರೆˌ ಗುಲಾಮಗಿರಿ ಬೇರೆ). ತನ್ನ ಸ್ವಹಿತದ ರಕ್ಪಣೆಗಾಗಿ ರಚಿಸಿಕೊಂಡ ಚಕ್ರವ್ಯೂಹದಿಂದ ಹೋರಬರದೇ ತಾನೇ ಗುಲಾಮನಾಗಿ ನರಳುತ್ತಿದ್ದಾನೆ. ಆದರೆˌ ಈ ಗುಲಾಮಗಿರಿ ದೇವರ ಗುಲಾಮಗಿರಿˌ ಧರ್ಮˌ ಜಾತಿˌ ಗುರುˌ ರಾಜಕೀಯˌ ದೇಶˌ ಭಾಷೆˌ ನಾಯಕರುಗಳ ಗುಲಾಮಗಿರಿˌ ತತ್ವ ಸಿದ್ದಾಂತ...ಹೀಗೆ ಸಾವಿರಾರು ಮಾನಸಿಕ ಗುಲಾಮಗಿರಿಗಳಿವೆ. ಇವುಗಳನ್ನೆಲ್ಲಾ ಮನುಷ್ಯ ಯಾಕೇ ನಿರ್ಮಿಸಿಕೊಂಡ? ತನ್ನ ಜವಾಬ್ದಾರಿಗಳಿಂದ ಪಲಾಯನ ಹೊಂದಲು. ಗುಲಾಮಗಿರಿ ಮನುಷ್ಯನಿಗೆ ಸುಲಭವಾದದುˌ ಮನಸ್ಸಿನ ಕಂಫರ್ಟ್  ಝೋನ್ ˌ ಗುಲಾಮಗಿರಿಗೆ ಯಾವ ಬುದ್ದಿವಂತಿಕೆಯೂ ಬೇಕಾಗಿಲ್ಲ. ಅದಕ್ಕಾಗಿ ಜನರು ಸಾಮಾನ್ಯವಾಗಿ ಗುಲಾಮಗಿರಿಯನ್ನು  ಒಪ್ಪಿಕೊಂಡು ಬಿಡುತ್ತಾರೆ. ಹಾಗದರೆ ಗುಲಾಮಗಿರಿ ಎಂದರೆ ಏನು? ಪ್ರಶ್ನಿಸದೇ,ˌ ಸತ್ಯವನ್ನು ಶೋಧಿಸದೆ ಒಪ್ಪಿಕೊಳ್ಳುವದೆಲ್ಲ ಗುಲಾಮಗಿರಿಯಾಗಿದೆ.

 

ನಿಜವಾದ ಬೌದ್ದಿಕ ಜೀವಿˌ ತಾನು ಗುಲಾಮಗಿರಿಯಿಂದ ಮುಕ್ತನಾಗುತ್ತ ˌ ಮತ್ತೊಬ್ಬರನ್ನು ಅದರಿಂದ ಮುಕ್ತಗೊಳ್ಳಿಸಲು ನೋಡುತ್ತಾನೆ. ಈಗ ನಮ್ಮ ಸುತ್ತಲೂ ಇರುವ ಶೈಕ್ಪಣಿಕ ವ್ಯವಸ್ಥೆ ˌ ಧಾರ್ಮಿಕ ವ್ಯವಸ್ಥೆ ˌ ಅರ್ಥ ವ್ಯವಸ್ಥೆ ˌ ರಾಜಕೀಯ ವ್ಯವಸ್ಥೆಗಳೆಲ್ಲಾ ಸತತವಾಗಿ ನಮ್ಮೊಳಗೆ ಗುಲಾಮಗಿರಿಯನ್ನು ಆಳವಾಗಿ ಹೇರಿವೆ ಮತ್ತು ಪೋಷಿಸುತ್ತವೆ. ಸ್ವತಂತ್ರರಾಗಲು ನಮ್ಮೊಳಗೆ ಆಳವಾದ ಬುದ್ದಿವಂತಿಕೆ ಬೇಕು. 

 

ನಾವು ಇಲ್ಲಿಯವರೆಗೆ ಎಷ್ಟೊಂದು ರಾಜಕೀಯ ನಾಯಕರನ್ನು ತಲೆ ಮೇಲೆ ಹೊತ್ತುಕೊಂಡು ಕುಣಿದಾಡಿದ್ದೇವೆ. ಅಷ್ಟೇ ಬೇಗನೆ ಕೆಳಗೆ ತುಳಿದಿದ್ದೇವೆ. ಈ ಅನುಭವದಿಂದ ನಾವು ಕಲಿಯಬೇಕಾಗಿದ್ದ ಪಾಠವೆಂದರೆ  ಯಾರನ್ನೂ ತಲೆಮೇಲೆ ಹೋತ್ತುಕೊಂಡು ಕುಣಿಯಬಾರದುˌ ಯಾರ ಗುಲಾಮರೂ ಆಗಬಾರದು...ಆದರೆ  ನಾವು ಮಾಡುತ್ತಿರುವದು ಏನು? ಅವನ್ನ ಬಿಟ್ಟು ಇವನ್ನ ˌ ಇವನ್ನ ಬಿಟ್ಟು ಅವನ್ನ ಅದೇ ತಲೆಯ ಮೇಲಿಟ್ಟು ಕುಣಿಯುತ್ತಿದ್ದೇವೆ. ನಮ್ಮ ಗುಲಾಮಗಿರಿ ಮನಸ್ಥಿತಿ ಬದಲಾಗಿಲ್ಲ...ಇದು ಬರೀ ರಾಜಕೀಯ ಕ್ಪೇತ್ರದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಒಂದಿಲ್ಲ ಒಂದನ್ನು ಮೂರ್ಖತನದಿಂದ ತಲೆಮೇಲೆ ಹೋತ್ತುಕೊಂಡು ಮೆರೆಯುತ್ತಿದ್ದೇವೆ...ಇದನ್ನೆಲ್ಲಾ ಕಿತ್ತು ಒಗೆದು ಮುಕ್ತರಾಗಿˌ ಸ್ವತಂತ್ರರಾಗಿ..

 

ಕೆಲ ವರ್ಷಗಳ ಹಿಂದೆ ನಾನೊಂದು ಗುರುವೊಬ್ಬರ ಆಶ್ರಮಕ್ಕೆ ಹೋಗಿದ್ದೆˌ ಅವರ ಆಶ್ರಮದಲ್ಲಿ ಹಲವಾರು ಸ್ವಯಂ ಸೇವಕರು "ಸೇವೆ"ಯ ಹೆಸರಲ್ಲಿ ಗುರುವಿನ ಗುಲಾಮಗಿರಿ ಮಾಡುತ್ತಿದರು. ಅಲ್ಲಿಯ ಸ್ವಯಂ ಸೇವಕರೆಲ್ಲಾ ಮುಕ್ತಿ ಬಯಸಿ ಆಶ್ರಮಕ್ಕೆ ಬಂದವರುˌ ಆದರೆ  ಇನ್ನೊಂದು ರೀತಿಯಲ್ಲಿ ಗುರುವಿನ ಗುಲಾಮಗಿರಿಯಲ್ಲಿ ಸಿಕ್ಕಿಕೊಂಡಿರುವ ಸೂಕ್ಪ್ಮ ಅವರಿಗೆ ಗೊತ್ತಿರಲಿಲ್ಲ. ಆ ಗುರು ತನ್ನ ಪ್ರವಚನಗಳಲ್ಲಿ ಅಂತಿಮ ಸ್ವಾತಂತ್ರ್ಯದ ಬಗ್ಗೆˌ ಮೋಕ್ಷದ  ಬಗ್ಗೆ ಮಾತನಾಡುತ್ತಿದ್ದ. ತನ್ನ ಶಿಷ್ಯರು ಮತ್ತು ಆಶ್ರಮದಲ್ಲಿ ಸೇವೆ ಹೆಸರಲ್ಲಿ ಕೆಲಸ ಮಾಡುತ್ತಿದ್ದವರನ್ನು ಅದೆಲ್ಲ "ಭಕ್ತಿ" ಎಂದು ನಂಬಿಸಿˌ ತನ್ನ ಸ್ವಾರ್ಥದ ಕೆಲಸಗಳನ್ನು ಉಚಿತವಾಗಿ ಪಡೆಯುತ್ತಿದ್ದ. ಇದೆಲ್ಲ ಅತಿಸೂಕ್ಪ್ಮವಾದ ಗುಲಾಮಗಿರಿ. ನಾನು ಅಲ್ಲಿಗೆ ಹೋದಾಗˌ ಕೈಯಲ್ಲಿ ಕಸಬರಿಗೆ ಕೊಟ್ಟು ಆಶ್ರಮ ಕಸಗುಡಿಸಲು ಹೇಳಿದರು.  ನಾನೇಕೆ ಕಸಗುಡಿಸಬೇಕು, ನಿಮ್ಮ ಆಶ್ರಮ ಕಸಗುಡಿಸಿದ್ರೆ ನನಗೆ ಮೋಕ್ಪ ಸಿಗುವುದೇ ಎಂದು ಅಲ್ಲಿಯ ಗುರುವಿಗೆ ಕೇಳಿದೆˌ ಆ ಗುರು ಕೋಪ ಮಾಡಿಕೊಂಡು "ನಿನ್ನಂತ ಕರ್ಮಠˌ ಲಂಪಟನಿಗೆ ಎಲ್ಲಿಯೂ ಮೋಕ್ಪ ಸಿಗುವುದಿಲ್ಲ...ನೀನು ಇಲ್ಲಿಂದ ಹೊರಡು" ಎಂದರು. ನಾನು ಹೇಳಿದೆ "ಸೋ ಕಾಲ್ಡ್ ಗುರುಗಳೇˌ ನೀವು ಮೋಕ್ಪ ಹೊಂದಿರುವಿರಾ? ಮೊದಲು ನಿಮ್ಮನ್ನ ಪ್ರಶ್ನಿಸಿಕೊಳ್ಳಿˌ ಶೋಧಿಸಿಕೊಳ್ಳಿ... ನಿಮ್ಮಿಂದ ನನಗ್ಯಾವ ಮೋಕ್ಪವು ಬೇಡ. ನಿಮ್ಮಂತವರಿಂದ ಸಿಗುವದುˌ ಮೋಕ್ಪವಲ್ಲ ಗುಲಾಮಗಿರಿಯಷ್ಟೆ. ಎಂದು ಅಲ್ಲಿಂದ ಹೊರ ಬಂದು ಒಂದು ದೀರ್ಘವಾದ ಉಸಿರು ಬಿಟ್ಟೆ. ಗುಲಾಮಗಿರಿ ಕೆಲವೊಂದಿಷ್ಟು ಕಣ್ಣಿಗೆ ಕಾಣದಂತೆ ಬಹಳಷ್ಟು ಸೂಕ್ಪ್ಮ ರೂಪದಲ್ಲಿ ಇವೆ. ಒಟ್ಟಾರೇˌ ಅಂತಿಮ ಸ್ವಾತಂತ್ರದ ಉದ್ದೇಶ ಎಲ್ಲ ರೀತಿಯ ಗುಲಾಮಗಿರಿˌ ಅಥಾರಿಟಿ ಮತ್ತು ಅಥಾರಿಟಿಯನ್ ಗಳಿಂದ ಸ್ವಾತಂತ್ರ್ಯವಾಗುವದಾಗಿದೆ.