ಮಂಗಳವಾರ ದೇಶದಾದ್ಯಂತ 75,809 ಹೊಸ ಕೊರೋನಾ ಕೇಸು ಪತ್ತೆ

ಮಂಗಳವಾರ ದೇಶದಾದ್ಯಂತ 75,809 ಹೊಸ ಕೊರೋನಾ ಕೇಸು ಪತ್ತೆ

ದೆಹಲಿ: ಮಂಗಳವಾರ ದೇಶದಾದ್ಯಂತ 75,809 ಹೊಸ ಕೊರೋನಾ ಕೇಸು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 42,80,423ಕ್ಕೆ ಏರಿಕೆಯಾಗಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ 1,133 ಜನರು ಸಾವನ್ನಪ್ಪಿದ್ದು, ಈ ವರೆಗೆ ಬಲಿಯಾದವರ ಸಂಖ್ಯೆ 72,775ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನು 42,80,423 ಮಂದಿ ಸೋಂಕಿತರ ಪೈಕಿ 33,23,951 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,83,697 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನು ನಿನ್ನೆ ಮಹಾರಾಷ್ಟ್ರದಲ್ಲಿ ಮತ್ತೆ 16,429 ಮಂದಿಗೆ ಸೋಂಕು ತಗುಲಿದ್ದು, ಕೊರೋನಾ ಸೋಂಕಿಗೆ 423 ಮಂದಿ ಬಲಿಯಾಗಿದ್ದಾರೆ.