ಮತ್ತೆ ಬರ್ತಿದೆ “ಸಿಲ್ಲಿ ಲಲ್ಲಿ”: ಇನ್ಮೇಲೆ ನಗುವಿನ ಹಬ್ಬ

ಮತ್ತೆ ಬರ್ತಿದೆ “ಸಿಲ್ಲಿ ಲಲ್ಲಿ”: ಇನ್ಮೇಲೆ ನಗುವಿನ ಹಬ್ಬ

ಸಿಲ್ಲಿ ಲಲ್ಲಿ, ಪಾಪ ಪಾಂಡು ಧಾರವಾಹಿಯನ್ನ ನೋಡದವರು ಬಹಳ ಕಡಿಮೆ. ಕನ್ನಡ ಧಾರವಾಹಿಗಳ ಪೈಕಿ ಒಂದು ಹೊಸ ರೂಪು ರೇಷೆಗಳನ್ನು ತಂದು ನಕ್ಕು ನಗಿಸುವಂತೆ ಮಾಡಿರುವ ಕ್ರೆಡಿಟ್‌ ಈ ಎರಡು ಧಾರಾವಾಹಿಗೆ ಸಲ್ಲಲೇಬೇಕು. ಇವುಗಳಿಗೆ ಸಿಕ್ಕ ಜನಮನ್ನಣೆಯನ್ನು ನೋಡಿ ಈ ಧಾರಾವಾಹಿಗಳನ್ನು ಮತ್ತೊಮ್ಮೆ ತೆರೆ ಮೇಲೆ ತರುವಂಥಹ ಪ್ರಯತ್ನ ನಡೆಯುತ್ತಿದೆ ಮತ್ತು ನಡೆದಿದೆ.

ಪಾಪಾ ಪಾಂಡು ಧಾರಾವಾಹಿಯ ಎರಡನೇ ಸರಣಿ ಈಗಾಗಲೇ ಆರಂಭವಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಸಿಲ್ಲಿ ಲಲ್ಲಿಯ ಸರದಿ. “ಐ ಆಮ್‌ ಡಾಕ್ಟರ್‌ ವಿಠಲ್‌ ರಾವ್‌, ವೆರಿ ಫೇಮಸ್‌ ಇನ್‌ ಸರ್ಜರಿ ಅಂಡ್‌ ಭರ್ಜರಿ” ಎನ್ನುತ್ತಾ ಡಾಕ್ಟರ್‌ ವಿಠಲ್‌ ರಾವ್‌ ಬಂದರೆ ಅವರ ಜೊತೆ ಸಮಾಜ ಸೇವಕಿ ಲಲಿತಾಂಬ ಕೂಡ ಬರಲಿದ್ದಾರೆ. ಕಳೆದ ಸೀಸನ್‌ನಲ್ಲಿ ಈ ಎರಡು ಪಾತ್ರಗಳನ್ನು ರವಿಶಂಕರ್‌ ಗೌಡ ಮತ್ತು ಮಂಜುಳಾ ನಿಭಾಯಿಸಿದ್ದರು. ಆದರೆ ಈ ಬಾರಿ ಇವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಸಿಹಿ ಕಹಿ ಚಂದ್ರು ನಿರ್ದೇಶನದ ಈ ಎರಡೂ ಧಾರಾವಾಹಿಗಳಲ್ಲಿ ದೈನಂದಿನ ಕಥೆಗಳನ್ನೇ ಆಧಾರವನ್ನಾಗಿಟ್ಟುಕೊಳ್ಳಲಾಗಿತ್ತು. ಎರಡನೇ ಸರಣಿಯೂ ಸಹ ಹಾಗೇ ಇರಲಿದೆಯಾ? ಯಾರ್ಯಾರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ? ಯಾವಾಗ ಆರಂಭವಾಗುತ್ತದೆ ಎನ್ನುವ ಕುತೂಹಲ ಸದ್ಯ ಜನರಲ್ಲಿದೆ. ಸಿಲ್ಲಿ ಲಲ್ಲಿ 1ರಂತೆ ಸಿಲ್ಲಿ ಲಲ್ಲಿ 2 ಸಹ ಜನರನ್ನು ಹಿಡಿದಿಟ್ಟುಕೊಳ್ಳುತ್ತದಾ ಎನ್ನುವುದನ್ನು ಕಾದು ನೋಡಬೇಕು.