‘ಸೈಮಾ-2019’ ಪ್ರಶಸ್ತಿ ಪ್ರದಾನ ಶೀಘ್ರ

‘ಸೈಮಾ-2019’ ಪ್ರಶಸ್ತಿ ಪ್ರದಾನ ಶೀಘ್ರ

ದಕ್ಷಿಣ ಭಾರತ ಸಿನಿಮಾ ರಂಗದ ಅತ್ಯಂತ ಪ್ರತಿ‍‍ಷ್ಠಿತ ‘ಸೈಮಾ-2019 ಪ್ರಶಸ್ತಿ’ ಸದ್ಯದಲ್ಲೇ ಪ್ರದಾನವಾಗಲಿದೆ. ಕನ್ನಡದಿಂದ ನಾಮಿನೇಟ್ ಆಗಿರೋ ಸಿನಿಮಾ ಹಾಗೂ ಕಲಾವಿದರ ಪಟ್ಟಿ ಹೊರಬಿದ್ದಿದೆ. ಸೈಮಾ ಪ್ರಶಸ್ತಿಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರರಂಗಕ್ಕೆ ನೀಡಲಾಗುತ್ತದೆ.

ಸೈಮಾ ಅವಾರ್ಡ್ಸ್ ಗೆ ನಾಮಿನೇಟ್ ಆಗಿರೋ ಕನ್ನಡ ಸಿನಿಮಾಗಳು ಯಾವವು ಅಂತ ನೋಡೋದಾದ್ರೆ, ಟಗರು, ರಾಂಬೋ-2, ಕೆಜಿಎಫ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಹಾಗೂ ಅಯೋಗ್ಯ ಸಿನಿಮಾಗಳು.

ಉತ್ತಮ ನಿರ್ದೇಶಕ ಅವಾರ್ಡ್ ಗೆ, ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್, ರಾಂಬೋ-2 ನಿರ್ದೇಶಕ ಅನಿಲ್ ಕುಮಾರ್, ಆ ಕರಾಳ ರಾತ್ರಿ ಸಿನಿಮಾ ನಿರ್ದೇಶನಕ್ಕಾಗಿ ದಯಾಳ್ ಪದ್ಮನಾಭನ್, ಟಗರು ಸಿನಿಮಾ ನಿರ್ದೇಶಕ ಸೂರಿ, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ದೇಶನಕ್ಕಾಗಿ ರಿಷಭ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಉತ್ತಮ ನಾಯಕ ನಟ ಪ್ರಶಸ್ತಿಗೆ,  ಅನಂತ್ ನಾಗ್ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು), ಶಿವರಾಜ್‌ಕುಮಾರ್ (ಟಗರು), ಶರಣ್ (ರಾಂಬೋ 2), ಯಶ್ (ಕೆಜಿಎಫ್-ಚಾಪ್ಟರ್), ಸತೀಶ್ ನೀನಾಸಂ (ಅಯೋಗ್ಯ) ಆಯ್ಕೆಯಾಗಿದ್ದಾರೆ.

ಉತ್ತಮ ನಾಯಕ ನಟಿ  ಪ್ರಶಸ್ತಿ ವಿಭಾಗದಲ್ಲಿ, ಶ್ರುತಿ ಹರಿಹರನ್ (ನಾತಿಚರಾಮಿ), ಸೋನು ಗೌಡ (ಗುಲ್ಟು) 
ಆಶಿಕಾ ರಂಗನಾಥ್ (ರಾಂಬೋ 2), ಮಾನ್ವಿತಾ ಹರೀಶ್(ಟಗರು), ರಚಿತಾ ರಾಮ್ (ಅಯೋಗ್ಯ) ನಾಮಿನೇಟ್ ಆಗಿದ್ದಾರೆ.

ಉತ್ತಮ ಪೋಷಕ ನಟ ಪ್ರಶಸ್ತಿ ಕೆಟಗರಿಯಲ್ಲಿ,  ಅಚ್ಯುತ್ ಕುಮಾರ್, ರಾಧಾಕೃಷ್ಣ ಉರಾಲಾ,  ಕಾರ್ತಿಕ್ ಜಯರಾಂ, ರೋಜರ್ ನಾರಾಯಣ, ವಸಿಷ್ಠ ಸಿಂಹ ಆಯ್ಕೆಯಾಗಿದ್ದಾರೆ.

ಉತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನಾಮಿನೇಷನ್ ಲಿಸ್ಟ್ ನಲ್ಲಿ ಭಾವನಾ, ಅಶ್ವಿತಿ ಶೆಟ್ಟಿ, ಕಾವ್ಯಾ ಶಾ, ಅರ್ಚನಾ ಜೋಯಿಸ್, ಶ್ರೇಯಾ ಅಂಚನ್ ಇದ್ದಾರೆ.

ಉತ್ತಮ ಹಾಸ್ಯನಟ ಪ್ರಶಸ್ತಿ ವಿಭಾಗದಲ್ಲಿ ಸಾಧು ಕೋಕಿಲಾ, ಕುರಿ ಪ್ರತಾಪ್, ಪ್ರಕಾಶ್ ತುಮಿನಾಡ್, ವಿಜಯ್ ಚಂಡೂರ್, ಚಿಕ್ಕಣ್ಣ ಅವರ ಹೆಸರು ನಾಮಿನೇಟ್ ಆಗಿವೆ.