ಶರಾವತಿ ಹಿನ್ನೀರಿನಲ್ಲಿ ಲಾಂಜ್ ಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಪಾರು

ಶರಾವತಿ ಹಿನ್ನೀರಿನಲ್ಲಿ ಲಾಂಜ್ ಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಪಾರು

ಶಿವಮೊಗ್ಗ : ಜಿಲ್ಲೆಯ ಶರಾವತಿ ಹಿನ್ನೀರಿನಲ್ಲಿ ಸಂಚರಿಸುತ್ತಿದ್ದ ಎರಡು ಲಾಂಜ್ ಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು,  ಅದರಲ್ಲಿದ್ದ ಸುಮಾರು 200 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶರಾವತಿ ದಡದ ಮೇಲಿರುವ ಅಂಬಾರಗೊಡ್ಲುದಿಂದ ಮತ್ತೊಂದು ದಡಕ್ಕಿರುವ ಸಿಗಂಧೂರೇಶ್ವರಿ ದೇವಾಲಯ ಮಧ್ಯೆ ಈ ಲಾಂಜ್ ಗಳು ಸಂಚರಿಸುತ್ತಿದ್ದವು.

ನದಿಯ ಮಧ್ಯೆ ಡಿಕ್ಕಿ ಹೊಡೆದಿದ್ದರೂ ಪ್ರಯಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಲಾಂಜ್ ಗಳು ಜಖಂಗೊಂಡಿವೆ. ಈ ದುರಂತಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.