ನೆಟ್ ಫ್ಲಿಕ್ಸ್ ನಲ್ಲಿ 'ಕೃಷ್ಣ ಆಂಡ್ ಹಿಸ್ ಲೀಲಾ' ಹೆಚ್ಚು ವೀಕ್ಷಣೆ: ಶ್ರದ್ಧಾ ಶ್ರೀನಾಥ್

ನೆಟ್ ಫ್ಲಿಕ್ಸ್ ನಲ್ಲಿ 'ಕೃಷ್ಣ ಆಂಡ್ ಹಿಸ್ ಲೀಲಾ' ಹೆಚ್ಚು ವೀಕ್ಷಣೆ: ಶ್ರದ್ಧಾ ಶ್ರೀನಾಥ್

ಶ್ರದ್ಧಾ ಶ್ರೀನಾಥ್ ಅಭಿನಯದ ಬಹು ನಿರೀಕ್ಷಿತ ತೆಲುಗು ಚಿತ್ರ 'ಕೃಷ್ಣ ಆಂಡ್ ಹಿಸ್ ಲೀಲಾ' ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ನಂತರ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

'ಸಿನೆಮಾ, ಅದು ಯಾವುದೇ ರೂಪದಲ್ಲಿರಲಿ, ಎದುರುನೋಡಬೇಕಾದ ವಿಷಯ. ನಾವು ಸಮಯಕ್ಕೆ ಹೊಂದಿಕೊಳ್ಳುತ್ತಿದ್ದೇವೆ,
ಇದು ಎಲ್ಲರಿಗೂ ಒಳ್ಳೆಯದು. 'ಕೃಷ್ಣ ಆಂಡ್ ಹಿಸ್ ಲೀಲಾ'  ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಅನ್ನಿಸುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಥಿಯೇಟರ್ ಗೆ ಹೋದಾಗ ಆಗುವ ಥ್ರಿಲ್ಲಿಂಗ್ ಕಳೆದುಕೊಂಡಿದ್ದೇನೆ. ಆದರೆ, ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ವೀಕ್ಷಣೆ ತನ್ನದೇ ಆದ ಮೋಡಿ ಮಾಡಿದೆ ಎಂದು ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.

ಕೃಷ್ಣಾ ಆಂಡ್ ಹಿಸ್ ಲೀಲಾದಂತಹ ಹಾಸ್ಯಮಯ ಚಿತ್ರಗಳು ತೆಲುಗಿನಲ್ಲಿ ಅಪರೂಪ. ಮೂರು ವರ್ಷಗಳ ವಿಳಂಬವಾದರೂ ಒಟಿಟಿ ಬ್ಲಾಕ್ ಬೂಸ್ಟರ್ ಎಂದು ಬಣ್ಣಿಸಲಾಗುತ್ತಿದೆ.ಜನರಿಗೆ ಸಿನಿಮಾ ಹಿಡಿಸುತ್ತದೆ ಎಂದು ಊಹಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.