ಗಾಯದಿಂದ ಬಳಲುತ್ತಿರುವ ಶಿಖರ್ ಧವನ್ 3 ವಾರ ವಿಶ್ವಕಪ್ ಟೂರ್ನಿಯಿಂದ ಹೊರಗೆ

ಗಾಯದಿಂದ ಬಳಲುತ್ತಿರುವ ಶಿಖರ್ ಧವನ್ 3 ವಾರ ವಿಶ್ವಕಪ್ ಟೂರ್ನಿಯಿಂದ ಹೊರಗೆ

ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‍ ಶಿಖರ್‍ ಧವನ್‍ ಹೆಬ್ಬೆರಳಿನ ಗಾಯದ ಕಾರಣಕ್ಕೆ ವಿಶ್ವಕಪ್‍ ಟೂರ್ನಿಯಲ್ಲಿ ಮೂರು ವಾರಗಳ ಕಾಲ ಭಾಗವಹಿಸದೆ ವಿಶ್ರಾಂತಿ ಪಡೆಯಬೇಕಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ನಥನ್‍ ಗೋಲ್ಟರ್‍ ಎಸೆತವನ್ನು ಎದುರಿಸುವಾಗ ಶಿಖರ್‍ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಆ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ಧವನ್‍ ಗಂಭೀರ ಗಾಯಕ್ಕೊಳಗಾಗಿರುವುದರಿಂದ 3 ವಾರಗಳ ಕಾಲ ವಿಶ್ವಕಪ್‍ ಟೂರ್ನಿಯಿಂದ ಹೊರಗಿರಬೇಕಾಗಿದೆ.

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಿಖರ್‍ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಮೂರು ವಾರಗಳ ಕಾಲ ಟೂರ್ನಿಯಿಂದ ಹೊರಗಿರಬೇಕಾಗಿರುವುದರಿಂದ ನ್ಯೂಜಿಲ್ಯಾಂಡ್‍, ಪಾಕಿಸ್ತಾನ, ವೆಸ್ಟ್‍ ಇಂಡೀಸ್‍ ಮತ್ತು ಇಂಗ್ಲೆಂಡ್‍ ವಿರುದ್ಧದ ಪಂದ್ಯದಲ್ಲಿ ಶಿಖರ್‍ಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಧವನ್‍ ಅನುಪಸ್ಥಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‍ಮನ್‍ಗಳಾಗಿ ರೋಹಿತ್‍ ಶರ್ಮಾ ಮತ್ತು ಕೆ.ಎಲ್‍ ರಾಹುಲ್‍ ಆಡುವ ಸಾಧ‍್ಯತೆ ಇದೆ.