ದುಬೈ ಜನರ ಪರ ಶಾರುಖ್‌ ಖಾನ್‌ ಕಾಳಜಿ : ವಿವಾದ ಸೃಷ್ಟಿಸಿದ ವಿಡಿಯೋ ವೈರಲ್

ದುಬೈ ಜನರ ಪರ ಶಾರುಖ್‌ ಖಾನ್‌ ಕಾಳಜಿ : ವಿವಾದ ಸೃಷ್ಟಿಸಿದ ವಿಡಿಯೋ ವೈರಲ್

ದೇಶದಲ್ಲಿ ಕೊರೋನಾ ಆತಂಕ ಜನರನ್ನು ತಲ್ಲಣಗೊಳಿಸಿದೆ ಈ ಹಿನ್ನಲೆ ಸ್ಯಾಂಡಲ್‌ ವುಡ್‌ ನಿಂದ ಹಿಡಿದು ಬಾಲಿವುಡ್‌ ವರೆಗೂ ಎಲ್ಲಾ ನಟ ನಟಿಯರು ಸಹ ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಸುರಕ್ಷಿತವಾಗಿ ಇರಿ ಎಂದು ಸಂದೇಶ ರವಾನಿಸುತ್ತಿದ್ದಾರೆ ಹಾಗೇ ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ಸಹ ಅಪಾರ ಅಭಿಮಾನಿಗಳಿದ್ದಾರೆ ಅವರು ಸಹ ಕೊರೋನಾ ಸಂಬಂದಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಮಾತನ್ನು ಆಡಿದ್ದಾರೆ. ಆದರೆ ಅದು ದುಬೈನಲ್ಲಿರುವ ಜನರಿಗೆ ಮಾತ್ರ ಎಂಬುದು ಮಾತ್ರ ಎಲ್ಲರಿಗೂ ಬೇಸರ ತರಿಸಿದೆ.

ಹೌದು ಶಾರುಖ್‌ ಖಾನ್‌ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ದುಬೈ ನಲ್ಲಿರುವ ಜನರು ಸುರಕ್ಷಿತವಾಗಿರಿ ಮನೆಗಳಲ್ಲೇ ಇರಿ ಬೀಚ್‌ ಗೆ ಹೋಗಬೇಡಿ ಪಕ್ಕದ ಮನೆಯವರೊಂದಿಗೆ ಬೆರೆಯಬೇಡಿ ಎಂದು ಮನವಿ ಮಾಡಿರುವ ವಿಡಿಯೋ ಈಗ ಸಣ್ಣದಾಗಿ ವಿವಾದ ಸೃಷ್ಟಿಸಿದೆ.

ಈ ವಿಡಿಯೋ ಗೆ ವೀಕ್ಷಿಸಿದ ಕೆಲವರು ಭಾರತದಲ್ಲಿ ವಾಸವಿರುವ ಶಾರುಖ್‌ ಖಾನ್‌ ಭಾರತದ ಜನರ ಸುರಕ್ಷತೆ ಕುರಿತು ಒಂದು ವಿಡಿಯೋ ಹಾಕಿಲ್ಲ ಕೊರೋನಾ ವಿರುದ್ದ ಹೋರಾಡಲು ಹಣಕಾಸಿನ ನೆರವು ನೀಡಿಲ್ಲ ಆದರೂ ದುಬೈ ಜನಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಅಕ್ರೋಶ ಹೊರಹಾಕಿದ್ದಾರೆ.

ಇನ್ನು ಕೆಲವರು ಈ ವಿಡಿಯೋಗೆ ಧರ್ಮದ ನಂಟನ್ನು ಕಲ್ಪಿಸಿದ್ದು, ಮುಸ್ಲಿಂ ಧರ್ಮದವರಾದ ಶಾರುಖ್‌ ದುಬೈ ಮುಸ್ಲಿಂ ರಾಷ್ಟ್ರವಲ್ಲವೇ ಅದಕ್ಕೆ ಅಲ್ಲಿಯ ಜನರ ಕಾಳಜಿ ತೋರಿದ್ದಾರೆ. ಹಿಂದೂ ರಾಷ್ಟ್ರ ಭಾರತದ ಬಗ್ಗೆ ಅವರಿಗೆ  ಪ್ರೀತಿಯಿಲ್ಲ ಎಂದು ದೊಡ್ಡ ಕೋಮು ವಿವಾದವನ್ನೇ ಸೃಷ್ಟಿಸಿದ್ದಾರೆ.

ಬಾಲಿವುಡ್‌ ನ ಕೆಲ ತಾರೆಯರು ಕೊರೋನಾ ವಿರುದ್ದ ಹೋರಾಡಲು ಧನಸಹಾಯ ಮಾಡುತ್ತಿದ್ದಾರೆ ಆದರೆ ಶಾರುಖ್‌ ಇದುವರೆಗೂ ಯಾವುದೇ ಧನಸಹಾಯ ಮಾಡಿಲ್ಲ ಮತ್ತು ಅದರ ಬಗ್ಗೆ ಮಾತಾನಾಡಿಲ್ಲ ಎಂದು ಕೆಲವರು ದೂಷಿಸುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಶಾರುಖ್‌ ಖಾನ್‌ ಗೆ ಇಂತಹ ಅಪಾದನೆಗಳು ಸುತ್ತುವರೆಯುತ್ತಲೇ ಇರುತ್ತವೆ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ ಆದರೆ ಅದಕ್ಕೆ ಸರಿಯಾದ ಸಾಕ್ಷಧಾರಗಳು ಇಲ್ಲ ಶಾರುಖ್‌ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.