ಶುಕ್ರವಾರದಿಂದ ಅಧಿವೇಶನ : ಶಾಸಕರಿಗೆ ವಿಪ್ ಜಾರಿ

ಶುಕ್ರವಾರದಿಂದ ಅಧಿವೇಶನ : ಶಾಸಕರಿಗೆ ವಿಪ್ ಜಾರಿ

ಬೆಂಗಳೂರು:  ರಾಜ್ಯದಲ್ಲಿ ಶುಕ್ರವಾರದಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು ಎಲ್ಲಾ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವಂತೆ ವಿಪ್‌ ಜಾರಿ ಮಾಡಿದೆ.

ಹಾಜರಾಗದ ಶಾಸಕರಿಗೆ ಅನರ್ಹತೆಯ ಭೀತಿ!

ವಿಧಾನಸೌಧದಲ್ಲಿ ಜುಲೈ 12 ರಿಂದ ಜುಲೈ 26 ರ ವರೆಗೆ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಶಾಸಕರು ಕಡ್ಡಾಯವಾಗಿ ಹಾಜರಿರಲು ಸೂಚಿಸಲಾಗಿದೆ. ಸದನಕ್ಕೆ ಹಾಜರಾಗದಿರುವ ಶಾಸಕರನ್ನು ವಿಪ್‌ ನಿಯಮದನ್ವಯ ಅನರ್ಹಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ರಾಜೀನಾಮೆ ಅಂಗೀಕಾರಗೊಳ್ಳದೇ ಇರುವ ಬಂಡಾಯ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳದಿದ್ದರೆ ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಶಾಸಕರ ಸರಣಿ ರಾಜೀನಾಮೆಯಿಂದಾಗಿ ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟಿನಲ್ಲಿದೆ. ಹೀಗಾಗಿ ಶುಕ್ರವಾರದ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಮಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತ ಮಂಡಿಸಲು ಒತ್ತಾಯಿಸುವ ಕುರಿತು ಬಿಜೆಪಿ ತೀರ್ಮಾನ ಕೈಗೊಳ್ಳದೇ ಇರುವುದರಿಂದ ನಾಳೆಯ ಅಧಿವೇಶನ ಮಹತ್ತರ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಲಿದೆ.