ಮತ್ತೆ ಪುಟಿದೆದ್ದ ಸೆನ್ಸೆಕ್ಸ್ 750 ಅಂಶ ಏರಿಕೆ ದಾಖಲು

ಮತ್ತೆ ಪುಟಿದೆದ್ದ ಸೆನ್ಸೆಕ್ಸ್ 750 ಅಂಶ ಏರಿಕೆ ದಾಖಲು

ಮುಂಬೈ: ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​  ಸೂಚ್ಯಂಕ ಸೆನ್ಸೆಕ್ಸ್​ ಶುಕ್ರವಾರದ ವಹಿವಾಟಿನಲ್ಲಿ 1,400ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದ್ದರೂ, ಸೋಮವಾರದ ವಹಿವಾಟಿನಲ್ಲಿ ಮತ್ತೆ 750 ಅಂಶ ಪುಟಿದೇಳುವ ಮೂಲಕ ಆರಂಭಿಸಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್  ಸೂಚ್ಯಂಕ ನಿಫ್ಟಿ ಕೂಡ ಉತ್ತಮ ಆರಂಭ ದಾಖಲಿಸಿದ್ದು 11,300ರ ಗಡಿ ದಾಟಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಐ ಸಿ ಸಿ ಐ ಬ್ಯಾಂಕ್​ ಮತ್ತು ಎಚ್​ ಡಿ ಎಫ್ ​ಸಿ ಷೇರುಗಳು ಮತ್ತೆ ಏರಿಕೆ ದಾಖಲಿಸಿದ ಪರಿಣಾಮ ಇದು. ಜಾಗತಿಕ ಹೂಡಿಕೆದಾರರು ಕಳೆದ ವಾರದ ಸೆಲ್‌ ಆಫ್​ ಕೈಬಿಟ್ಟು ಮತ್ತೆ ಬಾಟಂ-ಫಿಶಿಂಗ್ ಶುರುಮಾಡಿದ್ದೇ ಇದಕ್ಕೆ ಕಾರಣ.

ಸೋಮವಾರದ ವಹಿವಾಟಿನ ಆರಂಭಕ್ಕೆ ಸೆನ್ಸೆಕ್ಸ್​ 785 ಅಂಶ ಏರಿಕೆ ದಾಖಲಿಸಿ, ವಹಿವಾಟಿನ ವೇಳೆ 449.56 ಅಂಶ ಏರಿಕೆ ಕಾಯ್ದುಕೊಂಡು 38,746.85ರಲ್ಲಿ ಮುನ್ನಡೆದಿದೆ. ಇದೇ ರೀತಿ, ನಿರ್ಫಟಿ 120.05 ಅಂಶ (ಶೇಕಡ 1.07) ಏರಿಕೆ ದಾಖಲಿಸಿ 11,321.80ರಲ್ಲಿ ವಹಿವಾಟು ಮುಂದುವರಿಸಿದೆ.