ಸಂವಿಧಾನದ 370ನೇ ವಿಧಿ ರದ್ದತಿ ಒಂದು "ಐತಿಹಾಸಿಕ ಹೆಜ್ಜೆ": ಸೇನಾ ಮುಖ್ಯಸ್ಥ ನಾರವಾಣೆ

ಸಂವಿಧಾನದ 370ನೇ ವಿಧಿ ರದ್ದತಿ ಒಂದು

ದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದತಿಯು ಒಂದು "ಐತಿಹಾಸಿಕ ಹೆಜ್ಜೆ" ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಹೇಳಿದ್ದಾರೆ.

ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ 72ನೇ ಸೇನಾ ದಿನಾಚರಣೆ ಪ್ರಯುಕ್ತ ಮಾತನಾಡಿದ ಅವರು, ಸಂವಿಧಾನದ 370 ನೇ ವಿಧಿಯನ್ನು ರದ್ದತಿಯು ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಯೊಂದಿಗೆ ಸಂಯೋಜಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ ತಿರುಗೇಟು ನೀಡಲು ನಮ್ಮ ಬಳಿ ಹಲವು ಆಯ್ಕೆಗಳಿವೆ. ಅವುಗಳನ್ನು ಬಳಸಲು ನಾವು ಹಿಂಜರಿಯುವುದಿಲ್ಲ.