ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ ಬಿ ಐ) ಬ್ಯಾಂಕ್‌ ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ ಆರ್‌ ) ಶೇ 0.15ರಷ್ಟು ಕಡಿಮೆ ಮಾಡಿರುವುದಾಗಿ ಬುಧವಾರ ಹೇಳಿದೆ.

ಒಂದು ವರ್ಷದ ಅವಧಿಯ ಎಂಸಿಎಲ್‌ ಆರ್‌ ಶೇ 0.10ರಷ್ಟು ಕಡಿತಗೊಳಿಸಲಾಗಿದ್ದು, ಬಡ್ಡಿ ದರ ಶೇ 7.85ರಿಂದ ಶೇ 7.75ಕ್ಕೆ ಇಳಿಕೆಯಾಗಿದೆ. ಮಾರ್ಚ್‌ 10ರಿಂದಲೇ ಹೊಸ ಬಡ್ಡಿ ದರ ಅನ್ವಯವಾಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಬಿಐ ಸತತ 10ನೇ ಸಲ ಎಂಸಿಎಲ್‌ ಆರ್‌ ಕಡಿತಗೊಳಿಸಿದೆ. ಇದರಿಂದ ಪ್ರತಿ ತಿಂಗಳು ಸಮಾನ ಕಂತಿನ (ಇಎಂಐ) ರೂಪದಲ್ಲಿ ಸಾಲ ಮರು ಪಾವತಿಸುವವರಿಗೆ ಪ್ರಯೋಜನವಾಗಲಿದೆ.