ವಿವಿಧ ಹಂತಗಳಲ್ಲಿ ಡೆಬಿಟ್ ಕಾರ್ಡ್ ರದ್ದುಪಡಿಸಲು ಮುಂದಾದ ಎಸ್ ಬಿ ಐ

ವಿವಿಧ ಹಂತಗಳಲ್ಲಿ ಡೆಬಿಟ್ ಕಾರ್ಡ್ ರದ್ದುಪಡಿಸಲು ಮುಂದಾದ ಎಸ್ ಬಿ ಐ

ಡಿಜಿಟಲ್ ಹಣಕಾಸು ವ್ಯವಹಾರಕ್ಕೆ ಆದ್ಯತೆ ಕೊಡುವುದಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‍ಬಿಐ) ಡೆಬಿಟ್ ಕಾರ್ಡ್‍ಗಳನ್ನ ಹಂತಹಂತವಾಗಿ ರದ್ದುಗೊಳಿಸಲಿದೆ.

ರಾಷ್ಟ್ರಾದ್ಯಂತ ಹಬ್ಬಿರುವ ಎಸ್‍ಬಿಐ ಬೃಹತ್ ಗ್ರಾಹಕ ಬಳಗ ಹೊಂದಿದೆ. 90 ಕೋಟಿ ಡೆಬಿಟ್ ಕಾರ್ಡು, 3 ಕೋಟಿ ಕ್ರೆಡಿಟ್ ಕಾರ್ಡುಗಳನ್ನ ವಿತರಿಸಿರುವ ಸದರಿ ಬ್ಯಾಂಕ್ , 2017 ರ ನವೆಂಬರ್ 24 ರಂದು  `ಯೋನೋ'(ಯು ಒನ್ಲಿ ನೀಡ್ ಒನ್ಲಿ) ಡಿಜಿಟಲ್ ಕರೆನ್ಸಿ ತಂದಿದ್ದು, ಕಾರ್ಡು ರಹಿತವಾಗಿ ಯೋನೋ ಮುಖೇನವೇ ಆರ್ಥಿಕ ವಹಿವಾಟನ್ನ ಪ್ರಸ್ತುತ 68000 ದಿಂದ 1 ಮಿಲಿಯನ್ ಕೌಂಟ್‍ವರೆಗೆ ಹೆಚ್ಚಿಸುವ ಉದ್ದೇಶ ಹೊಂದಿರುವುದರಿಂದ, ಕ್ರಮೇಣ ಡೆಬಿಟ್ ಕಾರ್ಡುಗಳನ್ನ ಕಾರ್ಯಾಚರಣೆಯಿಂದ ಹೊರ ತೆಗೆಯಲಿದೆ.