ಪಂಚಭಾಷೆಗಳಲ್ಲಿ ‘ದಮಯಂತಿ’ ಬಿಡುಗಡೆ

ಪಂಚಭಾಷೆಗಳಲ್ಲಿ ‘ದಮಯಂತಿ’ ಬಿಡುಗಡೆ

ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ' ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆಗೆ ತಯಾರಾಗಿದೆ. ನವರಸನ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಮೂರು ವಿಭಿನ್ನ ಗೆಟ್‌ಅಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರಕ್ಕಾಗಿ ರಾಧಿಕಾ ಸಾಕಷ್ಟು ವರ್ಕ್ ಮಾಡಿದ್ದಾರೆ. ಈ ಕನ್ನಡ ಚಿತ್ರ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಲಿದೆ.

‘ದಮಯಂತಿ’ ಅಂತಹ ಚಲನಚಿತ್ರಗಳಿಗೆ ಈ ದಿನಗಳಲ್ಲಿ ಉತ್ತಮವಾಗಿ ಪ್ರತಿಕ್ರಿಯೆಗಳು ಬರುತ್ತಿವೆ. ಅದ್ದರಿಂದ, ನಾನು ಈ ರೀತಿಯ ಸಿನಿಮಾ ಮಾಡಲು ಮುಂದಾದೆ. ಪ್ರೇಕ್ಷಕರನ್ನು ರಂಜಿಸಲು ಈ ಚಿತ್ರ ಅಗತ್ಯವಿರುವ ಎಲ್ಲ ಅಂಶಗಳನ್ನು ಹೊಂದಿದೆ. ನನಗೆ ಸಾಕಷ್ಟು ವಿಶ್ವಾಸವಿದೆ. ಜನರು ಹೊಸದನ್ನು ನೋಡಲು ಬಯಸುತ್ತಾರೆ ಎಂದು ಚಿತ್ರದ ನಿರ್ದೇಶಕ,ನಿರ್ಮಾಪಕ ನವರಸನ್ ಹೇಳಿದ್ದಾರೆ.

ದಮಯಂತಿ ಚಿತ್ರ ಸೆ. 20ರಂದು ಬಿಡುಗಡೆಯಾಗಲಿದೆ. ಮುಖ್ಯ ಪಾತ್ರದಲ್ಲಿ ರಾಧಿಕಾ ನಟಿಸಿದ್ದು, ಭಜರಂಗಿ ಲೋಕಿ, ಅನುಷಾ ರವಿ, ವಿಶಾಲ್ ಅವರ ತಂದೆ ಜಿಕೆ ರೆಡ್ಡಿ, ರಾಜ್ ಬಹದ್ದೂರ್, ಸಾಧು ಕೋಕಿಲಾ ಮತ್ತು ತಬಲಾ ನಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೈದರಾಬಾದ್, ಬೆಂಗಳೂರು, ಮೈಸೂರು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.

ರಾಧಿಕಾ ಕುಮಾರಸ್ವಾಮಿ ಅವರ ಮತ್ತೊಂದು ಸಿನಿಮಾ ಭೈರದೇವಿ. ದುನಿಯಾ ವಿಜಯ್ ನಾಯಕನಾಗಿರುವ ಆರ್ ಎಕ್ಸ್ ಸೂರಿ ಖ್ಯಾತಿಯ ನಿರ್ದೇಶಕ ಶ್ರೀಜೈ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ಭೈರದೇವಿ ಸಿನಿಮಾದಲ್ಲಿ ನಾಯಕ ರಮೇಶ್ ಅರವಿಂದ್ ನಟಿಸಿದ್ದಾರೆ. ರಮೇಶ್ ಅರವಿಂದ್ ಮತ್ತು ರಾಧಿಕಾ ಕುಮಾರಸ್ವಾಮಿ ಇಬ್ಬರೂ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ  ಹೆಸರುವಾಸಿಯಾಗಿದ್ದು, ಭೈರದೇವಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಭೂಮಿಕೆಯಲ್ಲಿ ರಮೇಶ್ ಅರವಿಂದ್, ರಾಧಿಕಾ, ಅನು ಪ್ರಭಾಕರ್ ಹಾಗೂ ಸ್ಕಂದ ಅಶೋಕ್ ಕೂಡ ನಟಿಸಲಿದ್ದಾರೆ. ಭೈರದೇವಿ ಥ್ರಿಲ್ಲರ್ ಆದರೆ ಸಂಪೂರ್ಣ ಫ್ಯಾಮಿಲಿ ಎಂಟರ್‌ಟ್ರೈನರ್ ಆಗಲಿದೆ ಎಂದು ಚಿತ್ರ ಘಟಕದ ಆಪ್ತ ಮೂಲಗಳು ತಿಳಿಸಿವೆ.