ದಯಾಮರಣಕ್ಕೆ ಬೇಡಿಕೆಯಿಟ್ಟ ಸ್ಯಾಂಡಲ್‍ವುಡ್ ನಟಿ!

ದಯಾಮರಣಕ್ಕೆ ಬೇಡಿಕೆಯಿಟ್ಟ ಸ್ಯಾಂಡಲ್‍ವುಡ್ ನಟಿ!

ಕನ್ನಡದ ರಿಯಾಲಿಟಿ ಶೋ ಬಿಗ್‍ಬಾಸ್ ಮಾಜಿ ಸ್ಪರ್ಧಿ ಹಾಗೂ ಸ್ಯಾಂಡಲ್‍ವುಡ್‍ನ ನಟಿ ಜಯಶ್ರೀ ರಾಮಯ್ಯ, ಕಳೆದ ಹಲವು ದಿನಗಳಿಂದ ಮಾಧ್ಯಮದಲ್ಲಿ ಸುದ್ದಿಮಾಡುತ್ತಿದ್ದರು. ಈಗ ಅವರು ನನಗೆ ದಯಾಮರಣವನ್ನು ನೀಡಿ ಎಂದು ಕೋರಿಕೆಯನ್ನಿಟ್ಟಿದ್ದಾರೆ.

ಖಿನ್ನತೆಯಿಂದ ಬಳಲುತ್ತಿರುವ ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರದಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಬಂದ ಜಯಶ್ರೀ, ನಾನು ಚಿಕ್ಕಂದಿನಿಂದಲೂ ಬಹಳಷ್ಟು ಕಹಿ ಘಟನೆಗಳನ್ನು ಎದುರಿಸಿದ್ದೇನೆ ಎಂದಿದ್ದಾರೆ.

ನಾನು ಸುದೀಪ್ ಸೇರಿದಂತೆ ಯಾರ ಬಳಿಯೂ ಹಣದ ಸಹಾಯ ಕೇಳಿಲ್ಲ. ನನಗೆ ಹಣದ ಸಮಸ್ಯೆಯೂ ಇಲ್ಲ ಎಂದು ಹೇಳಿರುವ ಅವರು, ಸದ್ಯಕ್ಕೆ ನನಗೆ ಬೇಕಿರುವುದು ನನ್ನ ಸಾವು ಎಂದಿದ್ದಾರೆ.