ರೈನಾಗೆ ಮೊಣಕಾಲು ಶಸ್ತ್ರಚಿಕಿತ್ಸೆ, 6 ವಾರಗಳ ವಿಶ್ರಾಂತಿ

ರೈನಾಗೆ ಮೊಣಕಾಲು ಶಸ್ತ್ರಚಿಕಿತ್ಸೆ, 6 ವಾರಗಳ ವಿಶ್ರಾಂತಿ

ಆಮ್ಸ್ಟರ್ಡ್ಯಾಮ್:  ಕ್ರಿಕೆಟ್  ಆಟಗಾರ ಸುರೇಶ್ ರೈನಾ ಶುಕ್ರವಾರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದ ಮುಂಬರುವ ಟೂರ್ನಿಗಳಿಂದ  ಹೊರಗುಳಿಯಲಿದ್ದಾರೆ.

ಈ ವಿಷಯವನ್ನು ಬಿಸಿಸಿಐ ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ. ಸುರೇಶ್ ರೈನಾ ಕಳೆದ ಕೆಲವು ತಿಂಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಈ ಕಾರಣದಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಗುಣಮುಖರಾಗಲು 4-6 ವಾರಗಳ  ಸಮಯಬೇಕಾಗುತ್ತದೆ ಎಂದು ಬಿಸಿಸಿಐ  ತಿಳಿಸಿದೆ.