ರೊಹಿತ್-ರಾಹುಲ್ ಭರ್ಜರಿ ಜೊತೆಯಾಟ: ಬಾಂಗ್ಲಕ್ಕೆ 315 ರನ್ ಗುರಿ ನೀಡಿದ ಭಾರತ

ರೊಹಿತ್-ರಾಹುಲ್ ಭರ್ಜರಿ ಜೊತೆಯಾಟ: ಬಾಂಗ್ಲಕ್ಕೆ 315 ರನ್ ಗುರಿ ನೀಡಿದ ಭಾರತ

ಬರ್ಮಿಂಗ್‍ಹ್ಯಾಮ್‍ : ರೋಹಿತ್‍ ಶರ್ಮಾ ಹಾಗೂ ಕೆಎಲ್‍ ರಾಹುಲ್‍ ಉತ್ತಮ  ಆರಂಭಿಕ ಪ್ರದರ್ಶನದೊಂದಿಗೆ ಭಾರತ ತಂಡ ಬಾಂಗ್ಲಾ ವಿರುದ್ಧ 9 ವಿಕೆಟ್‍ ನಷ್ಟಕ್ಕೆ 314 ರನ್‍ ಗಳಿಸಿದೆ.

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಉತ್ತಮ ಜೊತೆಯಾಟ ಆರಂಭಿಸಿದ ರೋಹಿತ್‍ ಶರ್ಮಾ ಮತ್ತು ಕೆಎಲ್‍ ರಾಹಲ್‍ ಜೋಡಿ 180 ರನ್‍ ಜೊತೆಯಾಟ ಆಡಿದ್ದಾರೆ. ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸ್ ದಾಖಲಿಸಿದ ರೋಹಿತ್‍ ಶರ್ಮಾ 104 ರನ್‍ ಗಳಿಸಿ ವಿಶ್ವಕಪ್‍ನ 4ನೇ ಶತಕ ದಾಖಲಿಸಿದ್ದಾರೆ. ಆರಂಭಿಕ ಆಟಗಾರರು ಹೊರನಡೆದ ಬಳಿಕ ತಂಡದ ರನ್‍ ಗಳಿಕೆ ಸಾಧಾರಣ ವೇಗದಲ್ಲಿ ಸಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದ ವಿರಾಟ್‌ ಕೋಹ್ಲಿ 26, ರಿಷಬ್‍ ಪಂತ್‍ 48 ,ಧೋನಿ 35 ರನ್‍ ಗಳಿಸಿದ್ದಾರೆ.

ಬಾಂಗ್ಲಾ ಬೌಲರ್‍ ಮುಸ್ತಫಿರ್‍ ರೆಹಮಾನ್‍ ಐದು ವಿಕೆಟ್‍ ಗಳಿಸಿ ಭಾರತ ತಂಡದ ರನ್‍ ಗಳಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. 50 ನೇ ಓವರ್‍ನಲ್ಲಿ ಒಂದು ವಿಕೆಟ್‍ ಉಳಿಸಿಕೊಂಡಿದ್ದ ಭಾರತ ಬಾಂಗ್ಲಾ ಗೆಲುವಿಗೆ 315 ರನ್‍ ಗುರಿ ನೀಡಿದೆ.