ಚಿತ್ರ ನಗರ; ವರದಿ ಜತೆಗೆ ಗೊಂದಲವೂ ಇದೆ

ಚಿತ್ರ ನಗರ; ವರದಿ ಜತೆಗೆ ಗೊಂದಲವೂ ಇದೆ

ಕರ್ನಾಟಕದಲ್ಲೊಂದು ಸಿನಿಮಾ ನಗರವಿರಬೇಕು ಎಂಬ ಕನಸು ನನಸಾಗುತ್ತಲೇ ಇಲ್ಲ. ಇನ್ನೇನು ಆಗುತ್ತೆ ಎಂದು ಕೊಳ್ಳುವಾಗಲೇ ಬೇರಿನ್ನೇನೋ ಆಗುತ್ತಿರುವುದು ಹಳೆಕತೆ.

ಮೈಸೂರು ಜಿಲ್ಲೆ ನಂಜನಗೂಡು ಸಮೀಪದ ಇಮ್ಮಾವಿನಲ್ಲಿ 110 ಎಕರೆ ಜಮೀನು ಗುರುತಿಸಿ, ಆಸುಪಾಸಿನಲ್ಲೇ ಚಿತ್ರೀಕರಣಕ್ಕೆ ಸೂಕ್ತವಾಗುವ ತಾಣಗಳು ಇರುವುದರಿಂದ ಇಲ್ಲಿಯೇ ಚಿತ್ರನಗರಿ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದರೆ, ಕುಮಾರಸ್ವಾಮಿ ರಾಮನಗರದಲ್ಲಿ ಸಿನಿಮಾ ವಿವಿ ಆರಂಭದ ಮಾತಾಡಿದ್ದರೆ. ಈಗ ಸಿಎಂ ಸ್ಥಾನದಲ್ಲಿರುವ ಯಡಿಯೂರಪ್ಪ ಕನಕಪುರ ರಸ್ತೆಯ 468.33 ಎಕರೆ ವಿಸ್ತೀರ್ಣದ ರೋರಿಚ್ ಎಸ್ಟೇಟ್ ನ ಹೆಸರೇಳಿದ್ದಾರೆ. ಹೀಗಾಗಿ ಚಿತ್ರನಗರಿ ಎಂಬುದು ವಿಚಿತ್ರ ಸಂಗತಿಯಾಗಿಯೇ ಉಳಿದಿದೆ.

ಚಿತ್ರನಗರಿಗೆ ಸಂಬಂಧಿಸಿದಂತೆ ಜಾಗತಿಕ ಸಲಹೆಗಾರ ಅನ್ಟ್ಸ್ ಮತ್ತು ಯಂಗ್ ಸಂಸ್ಥೆ ಸಮೀಕ್ಷೆ ತಯಾರಿಸಿದ್ದು, 250 ಎಕರೆ ಜಾಗಬೇಕು, ಮೈಸೂರಿನ 100 ಕಿಮೀ ವ್ಯಾಪ್ತಿಯೊಳಗೆಯೇ ಚಿತ್ರೀಕರಣಕ್ಕೆ ಸೂಕ್ತವಾದ ತಾಣಗಳಿವೆ, ಇಲ್ಲಿ ವರ್ಷಕ್ಕೆ 23 ಸಿನಿಮಾಗಳನ್ನ ತಯಾರಿಸಬಹುದು, 380 ಕೋಟಿ ವೆಚ್ಚ ಸಿನಿಮಾನಗರ ನಿರ್ಮಾಣಕ್ಕೆ ಬೇಕಾಗುತ್ತೆ ಎಂಬ ವರದಿ ಕೊಟ್ಟಿದೆ.

ಆದರೆ ಸರ್ಕಾರವೀಗ ರೋರಿಚ್ ಎಸ್ಟೇಟ್ ಹೆಸರೇಳಿದ್ದು, ಅಧಿಕಾರಿಗಳೀಗ ಈ ಎಸ್ಟೇಟನ್ ನ ಇಂಥ ಉದ್ದೇಶಗಳಿಗೆ ಬಳಸಬಹುದೇ ಎಂಬ ಕಾನೂನು ಅಂಶಗಳನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಹೀಗಾಗಿ ಮೈಸೂರು-ಬೆಂಗಳೂರು ಇದರಲ್ಲಿ ಯಾವುದು ಸಿನಿಮಾ ನಗರಿಯಾಗುತ್ತದೆಯೋ ಎಂಬ ಗೊಂದಲಗಳು ಮುಂದುವರಿದಿವೆ.