ಸಣ್ಣ ಉಪಗ್ರಹಗಳಿಂದ ಕಂಟಕ: ವಿಜ್ಞಾನಿಗಳ ಆತಂಕ

ಸಣ್ಣ ಉಪಗ್ರಹಗಳಿಂದ ಕಂಟಕ: ವಿಜ್ಞಾನಿಗಳ ಆತಂಕ

ಖಾಸಗಿ ದೈತ್ಯ ಸಂಸ್ಥೆಗಳೂ ಬಾಹ್ಯಾಕಾಶ  ಬಳಸಿಕೊಂಡು ತನ್ನ ವ್ಯವಹಾರ ಉನ್ನತಿಗೊಳಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಇದರಲ್ಲಿ ಸ್ಪೇಸ್‍ಎಕ್ಸ್ ಎಂಬ ಸಂಸ್ಥೆ ಒಟ್ಟು 12 ಸಾವಿರ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯನ್ನೊಂದಿದ್ದು, ಇದರಲ್ಲಿ 60 ಉಪಗ್ರಹಗಳನ್ನು ಮುಂದಿನ ವರ್ಷ ಉಡಾವಣೆ ಮಾಡಲಿದೆ.

ತಮ್ಮ ಸಂಸ್ಥೆಯ ಅಂತರ್ಜಾಲ(ಇಂಟರ್‍ನೆಟ್) ಸೇವೆಯನ್ನ ತ್ವರಿತಗೊಳಿಸಿಕೊಂಡು, ವ್ಯವಹಾರ ಮೇಲುಗೈ ಸಾಧಿಸುವುದು ಇದರ ಉದ್ದೇಶ. ಇಂಥದ್ದೇ ಯೋಜನೆಗಳನ್ನು ಅಮೆಜಾನ್‍ ಕೂಡ ಹೊಂದಿದೆ.

ಇವೆಲ್ಲಾ ಉಡಾವಣೆ ಮಾಡುವ ಉಪಗ್ರಹಗಳು ತೀರಾ ಸಣ್ಣಗಾತ್ರದ್ದು. ಆದರೆ ಆಕಾಶದಲ್ಲಿ ಇವುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ, ಅದರ ಪ್ರತಿಫಲನ ದೊಡ್ಡದಾಗಿಯೇ ಹೊಮ್ಮುತ್ತೆ. ಹೀಗಾಗಿ ಅವನ್ನ ಭೂಮಿಯಿಂದ ಆಕಾಶದತ್ತ ತಲೆ ಎತ್ತಿ ನೋಡಿದರೆ ಅಪಾಯವಾಗುವ ಸಂಭವಗಳಿವೆ. ಖಗೋಳ ವಿಜ್ಞಾನಿಗಳು ಬಳಸುವ ದೂರದರ್ಶಕಗಳಿಗೇ  ಇವು ಅಡಚಣೆ ಉಂಟು ಮಾಡುತ್ತವೆ. ಹೀಗಾಗಿ ಬರೀಗಣ್ಣಿನಿಂದ ನೋಡಿದಾಗ ಅಪಾಯವಾಗುತ್ತೆ ಎಂಬ ಅನುಮಾನಗಳನ್ನು ಹಲವಾರು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.