ರಾಷ್ಟ್ರೀಯ ಪೌರತ್ವ ನೋಂದಣಿಯ ಸೃಷ್ಟಿ: ನೀನು ಹೊರಗಿನವಳು, ಸತ್ತರೆ ಮಾತ್ರ ನಿನ್ನ ಹೆಣ ಭಾರತದ್ದು

ರಾಷ್ಟ್ರೀಯ ಪೌರತ್ವ ನೋಂದಣಿಯ ಸೃಷ್ಟಿ:  ನೀನು ಹೊರಗಿನವಳು, ಸತ್ತರೆ ಮಾತ್ರ ನಿನ್ನ ಹೆಣ ಭಾರತದ್ದು

ದೆಹಲಿ:  ‘ನೀನು ಹೊರಗಿನವಳು, ಸತ್ತರೆ ಮಾತ್ರ ನಿನ್ನ ಹೆಣ ಭಾರತದ್ದು’

ಆಸ್ಸಾಂ ರಾಜ್ಯದಲ್ಲಿ ನಡೆದ  ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಕಂಡು ಬಂದ ಭಯಾನಕ ಚಿತ್ರಣವಿದು.

ಇಂತಹ ಭಯಾನಕತೆಗೆ ಗುರಿಯಾಗಿದ್ದ ಬಹುತೇಕ ಹೆಣ್ಣುಮಕ್ಕಳ ಸ್ಥಿತಿ ಇದು. ತಮ್ಮ ಹೆಸರು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಯಲ್ಲಿ ಪಟ್ಟಿಯಲ್ಲಿದ್ದರೆ ಬದುಕು ಮತ್ತೆ ಜೀವ ಪಡೆದಂತೆ. ಇಲ್ಲದಿದ್ದರೆ ಇದ್ದೂ ಸತ್ತಂತೆ. ಎಲ್ಲಿ ತಮ್ಮ ಹೆಸರು ತೆಗೆಯಲಾಗುತ್ತದೋ ಎಂಬ ಭೀತಿಯಲ್ಲಿ ಒಂದು ವರ್ಗದ ಜನತೆ ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದೆ ಎಂಬುದಕ್ಕೆ ಇಲ್ಲಿ ತಾಜಾ ಉದಾಹರಣೆ ಇದೆ.

ನಿಮ್ಮ ಕಥೆ ಹೇಳಬೇಕಿದೆ. ಸಹಕರಿಸಿರಿ. ನಿಮ್ಮನ್ನು ಪರಿಚಯಿಸಬೇಕಿದೆ. ಹೆಸರು ಜಮೀಲಾ ಬೇಗಂ. ವಯಸ್ಸು 44. ಆಸ್ಸಾಂ ರಾಜ್ಯದ ಬರ್ಪೆಟ್ ಪ್ರದೇಶದವಳು. ಇದು ತುಂಬಾ ಉತ್ತಮ ಸಮಯವಲ್ಲ; ಇಲ್ಲಿ ಮಾನ್ಸೂನ್ ಇದೆ. ನದಿಗಳು ಭೋರ್ಗರೆಯುತ್ತಿವೆ. ನಿಮ್ಮ ಗ್ರಾಮಗಳು ಪ್ರವಾಹ ಪೀಡಿತವಾಗಿರಬಹುದು. ನಮಗೂ ಈಗ ಸಾಕಷ್ಟು ಸಮಯವಿಲ್ಲ. ಇಂದು ಶನಿವಾರ ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿ ಬಿಡುಗಡೆಯಾಗಿದೆ.

ನಿಮ್ಮ ತಗಡು ಗೋಡೆಗಳಿರುವ ಮನೆಗೆ ನಾನು  ಬಂದಿದ್ದೆ. ನಿಮ್ಮ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರ ಮನೆಯಲ್ಲಿದ್ದರು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಒಬ್ಬಳಿಗೆ ಮದುವೆ ನಿಶ್ಚಯವಾಗಿದೆ. ಪುತ್ರ ಶಾಲೆಯಲ್ಲಿ ಓದುತ್ತಿದ್ದಾನೆ. ಆ ಶಾಲೆಯೂ ಈಗ ಪ್ರವಾಹಪೀಡಿತವಾಗಿ ಮುಚ್ಚಿಕೊಂಡಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದ ದಿನದಿಂದ ನೀವು ನಿಮ್ಮ ಹೊಲಕ್ಕೆ ಹೋಗಿಲ್ಲ ಎಂದು ನೀವು ನಮಗೆ ಹೇಳಿದ್ದೀರಿ. ನೀವು ನಿಮ್ಮ ತಂದೆಯ ಅಂದರೆ ಅಬ್ದುಲ್ಲಾಇಸ್ಲಾಂ ಎಂಬುವರ ಮಗಳಾಗಿರುವುದಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸಾಕ್ಷಿ ಇಲ್ಲ ಎಂದು  ಗ್ರಾಮ ಮುಖ್ಯಸ್ಥ ಗೌಬುರಾ ಹೇಳುತ್ತಾರೆ. ಆದರೆ, ಅಬ್ದುಲ್ಲಾ ಇಸ್ಲಾಂ ಅವರ ಹೆಸರು 1951ರ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿದೆ. ಆದರೆ, ಕಾನೂನು ಹೇಳುತ್ತದೆ; ವ್ಯಕ್ತಿಗೆ ಕಾನೂನಿನ ಆಧಾರ ಮುಖ್ಯ; ಪಾಲಕರ ಅಥವಾ ತಾತ-ಮುತ್ತಜ್ಜರ ಸಾಕ್ಷಿ ಅಲ್ಲ.

ಶಾಲೆಗೆ ಹೋಗಿಲ್ಲ, ಮದುವೆಯಾಗುವುದಕ್ಕೂ ಮುಂಚೆ ಮತದಾನದ ಗುರುತಿನಚೀಟಿ ಇಲ್ಲವೇ ಶಾಲಾ ಪ್ರಮಾಣಪತ್ರಗಳ ಯಾವ ದಾಖಲೆಯೂ ಇವರಲ್ಲಿಲ್ಲ. ಹೀಗಾಗಿ, ಪಂಚಾಯಿತಿ ದಾಖಲೆಯೇ ಅವರ ಅಂತಿಮ ದಾಖಲೆಯಾಗಿತ್ತು. ನಿಮ್ಮ ಪುತ್ರನ ಹೆಸರೂ ನೋಂದಣಿಯಾಗಿಲ್ಲ. ಏಕೆಂದರೆ, ಆ ಬಾಲಕನ ಹೆಸರನ್ನು ಯಾರೋ ಒಬ್ಬ ಅಧಿಕಾರಿ ನಿರ್ಲಕ್ಷಿತ ರೂಪದಲ್ಲಿ ಉಚ್ಛರಿಸಿದ್ದರಿಂದ ಹೆಸರಿನಲ್ಲೂ ಬದಲಾವಣೆ ಇದೆ ಎಂದು ಹೆಸರನ್ನು ತೆಗೆದು ಹಾಕಲಾಗಿದೆ. ಈಗ ಹೇಳಿ, ಆದ ತಪ್ಪನ್ನೂ ಸಹ ಗುರುತಿಸಲಾರಿರಿ. ಬರೆಯಲಾರಿರಿ, ಓದಲಾರಿರಿ ಅಷ್ಟೆ ಏಕೆ, ಇಡೀ ಕುಟುಂಬದ ಪ್ರತಿ ಸದಸ್ಯರೂ ಹೀಗಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ನೋಂದಣಿಯಿಂದ ಹೊರಗಿಟ್ಟು, ಅಪಾಯಕಾರಿ ಸ್ಥಳದಲ್ಲಿಇರಿಸಲಾಗಿದೆ ಎಂಬ ಬಗ್ಗೆ ಈಗ ಭೀತಿ ಉಂಟಾಗಿದೆ.

ಹದಗೆಟ್ಟ ವೈವಾಹಿಕ ಸಂಬಂಧಗಳು: ನಿಮ್ಮ ಪತಿಯ ಬಗ್ಗೆ ಕೇಳಿದ್ದೇನೆ. ನಿಮ್ಮ ಗ್ರಾಮದಲ್ಲಿ ಆದಾಯದ ಮೂಲಗಳು ನಶಿಸುತ್ತಿವೆ ಎಂದಿದ್ದೀರಿ. ಪತಿಯು ಗುವಾಹತಿಗೆ ತೆರಳಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಪತಿಯ ಜೊತೆ ಮತ್ತೊಬ್ಬ ಬಂಗಾಳಿ ಮುಸ್ಲಿಂ ಸ್ನೇಹಿತನನ್ನು ಪೊಲೀಸರು ಹಲವು ಬಾರಿ ಪೌರತ್ವದ ಬಗ್ಗೆ ಪ್ರಶ್ನಿಸಿದ್ದರು. ಅವರ ಪೌರತ್ವವು ಸಂಶಯಾಸ್ಪದವಾಗಿದೆ ಎಂದೂ ಕೆಲವರು ಹೇಳಿದ್ದರು. ತಮ್ಮದೇ ಗ್ರಾಮದಲ್ಲಿ ಏಕೆ ಹೀಗೆ ಎಂದು ಯಾರಿಗೂ ತಿಳಿಯಲಿಲ್ಲ. ನಿಮ್ಮ ಮಗಳ ಮದುವೆ ವೇಳೆಯೂ ಪೌರತ್ವ ಭೀತಿಯಲ್ಲಿರುವ ಕುರಿತು ಕೇಳುತ್ತಲೇ ಬಂದಿದ್ದೀರಿ. ಈಗ ಅವರ ಸಂಬಂಧವು ಅಳಿಯರೊಂದಿಗೆ ಸರಿಯಿಲ್ಲ. ಮಗಳ ವಿವಾಹಕ್ಕಾಗಿ ವರದಕ್ಷಿಣೆ ಹೊಂದಿಸುವುದರಲ್ಲೇ ತಾವು ತುಂಬಾ ಮಗ್ನರಾಗಿದ್ದೀರಿ. ಶಾಲಾ ಶಿಕ್ಷಣ ಇಲ್ಲ ಎಂಬ ಕಾರಣಕ್ಕೆ ಮೂರನೇ ಪುತ್ರಿಯ ಮದುವೆ ನಿಶ್ಚಯವೂ ಮುರಿದು ಬಿದ್ದಿದೆ. ಸಾಮಾಜಿಕ ರಕ್ಷಣೆ ಪಡೆಯಲು ಆಕೆಯ ಮದುವೆ ಅಗತ್ಯವಿದೆ. ಆದರೆ, ಊರಿನವಳೇ ಆಗಿದ್ದರೂ ಪೌರತ್ವವಿಲ್ಲದೇ ಹೊರಗಿನವಳಂತಿರುವ ಮಗಳನ್ನುಯಾರು ವಿವಾಹ ಮಾಡಿಕೊಳ್ಳುತ್ತಾರೆ? ಸರ್ಕಾರವೇ ಹೇಳಬೇಕು.

ಗ್ರಾಮ ಮುಖ್ಯಸ್ಥ ಗೌಬುರಾ ನೆರವಿನೊಂದಿಗೆ ತಾವು ಹೆಸರನ್ನು ತೆಗೆಯಲಾದ ಬಗ್ಗೆ ಅರ್ಜಿ ತುಂಬಿ ಗಮನಕ್ಕೆ ತಂದಿದ್ದೀರಿ. ಈಗ ನೀವು ತಿಳಿದುಕೊಳ್ಳುವುದು ಬಹಳವಿದೆ. ಓದದೇ ಇದ್ದರೂ ಹೇಗೆ ತಪ್ಪುಗಳನ್ನು ಗುರುತಿಸಬಹುದು, ಕಳಂಕರಹಿತ ದಾಖಲೆಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ತಿಳಿಯಬೇಕಿದೆ. ಬಯೋಮೆಟ್ರಿಕ್ ಮೂಲಕ ತಮ್ಮ ಗುರುತನ್ನು ದಾಖಲಿಸುವಾಗ ‘ನಿಮ್ಮನ್ನು ಬಂಧಿತರ ಶಿಬಿರಕ್ಕೆ ಕಳುಹಿಸಲಾಗುವುದು’ ಎಂಬ ವದಂತಿ ಇತ್ತು. ಇದು ನಿಜವೆ? ಯಾವ ಅಧಿಕಾರಿ ನಿಮಗೆ ಹೇಳಿದ್ದು? ನಿಮಗೆ ಬರ ಹೇಳಿದ ಶಿಬಿರ ಅಥವಾ ಕಚೇರಿ ವಿಳಾಸ ನನಗೆ ತೋರಿಸಿ. ಅದರಲ್ಲಿ ಸಂಕ್ಷಿಪ್ತ ಮಾಹಿತಿಯ ಸಾಕಷ್ಟು ವಿವರಗಳಿದ್ದವು. ಗೌಬುರಾ ಸಹ ಇದಕ್ಕೆ ಉತ್ತರಿಸಲಿಲ್ಲ. ಕೇಂದ್ರ ತುಂಬಾ ದೂರವಿದೆ. ನಿಮ್ಮ ಕುಟುಂಬದ 9 ಜನರ ವಿಚಾರಣೆ ನಡೆದಿದೆ.  ನೀವು ನಿಮ್ಮ ಹೊಲದ ಕೆಲಸದಿಂದ ದೂರವೇ ಉಳಿದಿರಿ. ಅದರಂತೆ ನಿಮ್ಮ ಹುಡುಗರು ಶಾಲೆಯಿಂದ ದೂರವೇ ಉಳಿದರು. ಸ್ಥಳೀಯ ಬಸ್ ಗಳು ಅಲ್ಲಿಗೆ ಹೋಗದ ಪ್ರಯುಕ್ತ ನೀವು ನಿಮ್ಮ ಕುಟುಂಬ ಸಮೇತ ಹೋಗಲು ಬಸ್ ಗಳನ್ನು ಬಾಡಿಗೆಗೆ ಪಡೆದಿರಿ. ಅದೃಷ್ಟವೆಂದರೆ, ನಿಮಗೆ ನಿಮ್ಮ ನೆರೆಹೊರೆಯವರು ಹಣದ ಸಹಾಯ ಮಾಡಿದರು.

ಬಿರು ಬಿಸಿಲಿರುವ ಸ್ಥಳದಲ್ಲಿ ಕೇಂದ್ರವಿತ್ತು. ಜನರು ನಿಲ್ಲಲು ನೆರಳು ಸಹ ಇರಲಿಲ್ಲ. ನಿಮ್ಮ ಸಹೋದರರೊಬ್ಬರ ಮಗುವಿಗೆ ಮೊಲೆ ಹಾಲು ಕುಡಿಸಲು ಗಂಟೆಗಟ್ಟಲೆ ಸ್ಥಳ ಹುಡುಕಬೇಕಾಯಿತು. ಕೇಂದ್ರದ ಬಳಿಯೇ ಮಗುವು ಸತ್ತಿದೆ ಎಂಬ ಸುದ್ದಿ ಕೇಳಲು ಆಕೆ ದಿಗ್ಮೂಢಳಾದಳು.

ದೊಡ್ಡ ಕೋಣೆಯಲ್ಲಿ ಸಾಲಾಗಿ ಇಡಲಾದ ಡೆಸ್ಕ್ ಗಳ ಹಿಂದೆ ಒಬ್ಬ ಅಧಿಕಾರಿ ಇರುತ್ತಿದ್ದ. ಎಲ್ಲರೂ ಪುರುಷರೆ. ಯಾವುದೇ ಶಿಸ್ತು ಇಲ್ಲದೇ ಜನರು ಒಂದರಿಂದ ಮತ್ತೊಂದು ಡೆಸ್ಕ್ ಗೆ ತಿರುಗುತ್ತಿದ್ದರು. ಕೆಲವರು ತಾವೇನೋ ಕಳೆದುಕೊಂಡಿದ್ದೇವೆ ಎಂಬಂತೆ ಮತ್ತೆ ಕೆಲವರು ತಮ್ಮ ಪ್ಲಾಸ್ಟಿಕ್ ಚೀಲಗಳಿಂದ ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಲೇ ಇದ್ದರು. ತನ್ನ ಕುಟುಂಬದ ಸದಸ್ಯರೊಂದಿಗೆ ಹೆಚ್ಚೆಂದರೆ ನೆರೆಹೊರೆಯವರೊಂದಿಗೆ ಹಾಗೂ ಕೆಲವೇ ಕೆಲವು ಪರಿಚಿತ ಪುರುಷರೊಂದಿಗೆ ಸಂಪರ್ಕವಿರುವ ಒಬ್ಬ ಹೆಣ್ಣುಮಗಳ ಪರಿಸ್ಥಿತಿ ಹೇಗಿರಬೇಡ. ಅಲ್ಲಿಯ ಅಧಿಕಾರಿ ಕೇವಲ ಆಸ್ಸಾಮಿ ಮಾತನಾಡುತ್ತಾನೆ; ಈ ಕುಟುಂಬ ಬಂಗಾಳಿ ಮಾತನಾಡುತ್ತದೆ.

ಅಲ್ಲಿ ವಿಚಾರಣೆ ಹೇಗೆ ನಡೆಯಿತು ಎಂಬುದನ್ನು ನಾನು ಕೇಳಿದೆ.  ಓದಲಿಕ್ಕೂ ಬಾರದ ತಾವು ಸುಮ್ಮನೆ ಆ ದಾಖಲೆಗಳ ಮೇಲೆ ಸಹಿ ಮಾಡಿದಿರಿ. ಅಧಿಕಾರಿ ಕೇಳುವ ದಾಖಲೆ ಗಳನ್ನೇ ತಾವು ಕೊಡುತ್ತಿರುವಿರೆಂದು ತಿಳಿದಿದ್ದೀರಿ. ಆದರೆ, ಆತ ಬೇರೊಂದು ಭಾಷೆಯನ್ನು ಮಾತನಾಡುತ್ತಿದ್ದ.

ಫಲಿತಾಂಶ ಬಗ್ಗೆನಿಮಗೆ ವಿಶ‍್ವಾಸವಿದೆಯೇ ಎಂದು ನಾನು ನಿಮಗೆ ಕೇಳಿದೆ.  ‘ಇಲ್ಲ’ ಎಂದಿರಿ. ಆತ ನಗುತ್ತಾ ಇದ್ದ. ಹೀಗಾಗಿ, ಏನೂ ತಿಳಿಯಲಿಲ್ಲ. ಈಗಲೂ ನೈಜ ದಾಖಲೆಗಳಿರುವ ಬಗ್ಗೆ ಚಿಂತೆ ಇದೆ ಎಂದಿರಿ.  ನೀವು ಭಯಗೊಂಡಿದ್ದೀರಿ ಎಂದು ನಾನು ಕೇಳಿದೆ. ಹೌದು! ಎಂದಿರಿ. ಏಕೆ? ಅವರೀಗ ನಮ್ಮನ್ನು ಬಂಧಿಸುವ ಸ್ಥಳಕ್ಕೆ ಕರೆದೊಯ್ಯುತ್ತಾರೆ.

ನಿಮ್ಮ ನೆರೆಹೊರೆಯವರ ಪೈಕಿ ಯಾರಿಗಾದರೂ ಆಸ್ಸಾಮಿ  ಜನರಲ್ಲ ಎಂದು ಘೋಷಿಸಿದ್ದಾರೆಯೇ ಎಂದೆ. ಅವಳ ಪಾಲಕರು ಹಾಗೂ ಅವಳು ಈ ಪ್ರದೇಶದಲ್ಲಿ ಬದುಕು ಸವೆಸಿದ್ದಾರೆ. ಆದರೆ, ಅವಳೀಗ ಮರೆಯಲ್ಲಿರಬೇಕು. ಜೀವನಕ್ಕೂ ದುಡಿಯದಂತಿರಬೇಕು. ಅವಳ ಕುಟುಂಬವನ್ನೂ ನೋಡದಂತಿರಬೇಕು. ದುಡಿಯುವ ಮಹಿಳೆಯನ್ನೇ ದೂರವಿರಿಸಿದರೆ ಕುಟುಂಬ ಹೇಗೆ ಬದುಕಬೇಕು, ಆಹಾರವನ್ನೇ ಕಸಿದುಕೊಂಡಾಗ ಇಡಿ ಕುಟುಂಬ ಹೇಗೆ ಬದುಕುಬೇಕು, ಕೋರ್ಟ್ ಗಳಲ್ಲಿ ಪೌರತ್ವ ನೀಡದಿರುವುದನ್ನು ಪ್ರಶ್ನಿಸದೇ ಇರುವ ಕುಟುಂಬಗಳು ಹೇಗೆ ಬದುಕಬೇಕು.

ತಮ್ಮ ತಂದೆಯನ್ನು ಮಾರುಕಟ್ಟೆಯಿಂದ ಮೂರು ವರ್ಷಗಳ ಹಿಂದೆ ಗಡಿ ಪೊಲೀಸರು  ಕರೆದೊಯ್ದರು. ಆತನ ಶವವನ್ನು ಕಳುಹಿಸುವ ಮೊದಲು ಒಂದು ಬಾರಿಯಾದರೂ ಸ್ನೇಹಿತ ಗಡಿಯಲ್ಲಿ ಆತನನ್ನು ನೋಡಿರಲಿಲ್ಲ. ಬಂಧಿತ ಕೇಂದ್ರದಲ್ಲಿ ಆತ ಸತ್ತಿದ್ದ. ಅಂದಿನಿಂದ ಈ ಮಾತು ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ;  ಅವರು ನಿಮ್ಮನ್ನು ಕರೆದೊಯ್ದಾಗ ನೀವು ಹೊರಗಿನವರು, ಸತ್ತಾಗ ನಿಮ್ಮ ಹೆಣ ಭಾರತದ್ದು.

ಜು. 1 ರಿಂದ 6ರವರೆಗೆ ಕಮೃಪ್ ಹಾಗೂ ಬರ್ಪೆಟ್ ನಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ ದೊರೆತ ಮಾಹಿತಿ ಇದು. ಇಲ್ಲಿಯ ಎಲ್ಲ ಘಟನೆಗಳು ವಾಸ್ತವತೆಯನ್ನು ಆಧರಿಸಿವೆ. ಆಸ್ಸಾಮಿನ ಚಾರ್ –ಚಪೋರಿ ಪ್ರದೇಶದ ಬಹುತೇಕ ಮಹಿಳೆಯರು ರಾಷ್ಟ್ರೀಯ ಪೌರತ್ವದಿಂದ ಹೊರತಾಗಿದ್ದಾರೆ. ಈ ರಾಜ್ಯವು ರಾಜ್ಯೇತರರನ್ನು ಸೃಷ್ಟಿಸಿದೆ. ಅವರ ದುರ್ಬಲತೆಗಳನ್ನು ಹೆಚ್ಚಿಸಿದೆ. ಈಗಾಗಲೇ ಅವರು ಸಂಭ್ರಮಿಸುತ್ತಿದ್ದ ಸಣ್ಣ ಸಂತೋಷವನ್ನೂ ಸಹ ನೋಂದಣಿಯಿಂದ ಹೊರತುಪಡಿಸಿ ಅದನ್ನೂ ಕಸಿಯಲಾಗಿದೆ.

ರಾಷ್ಟ್ರೀಯ ಪೌರತ್ವದ ಪಟ್ಟಿಯಲ್ಲಿ ಸೇರುವುದೇ ಮಹಿಳೆಯರಿಗೊಂದು ಸವಾಲಿನ ಕೆಲಸವಾಗಿದೆ.ದುರ್ಬಲ ಶಿಕ್ಷಣ, ಬಡತನ, ವಲಸೆ, ವಿವಾಹ ಹಾಗೂ ಅಪಾಯಕಾರಿ ಭೌಗೋಳಿಕ ಅಂಶಗಳನ್ನು ಈಗಿನ ವ್ಯವಸ್ಥೆ ಪರಿಗಣಿಸಿಲ್ಲ. ಪೌರತ್ವ ಪಡೆಯುವುದು ಅವರಿಗೆ ತುಂಬಾ ಕಷ್ಟದ ಕೆಲಸವಾಗಿದೆ.

(ಸೌಜನ್ಯ: ಸ್ಕ್ರೋಲ್ .ಇನ್)