ರೆಪೊ ದರ ಇಳಿಸಿದ ಆರ್‌ಬಿಐ: ದೇಶದಲ್ಲಿ 9 ವರ್ಷಗಳಲ್ಲೇ ಅತಿ ಕಡಿಮೆ ರೆಪೊ

ರೆಪೊ ದರ ಇಳಿಸಿದ ಆರ್‌ಬಿಐ: ದೇಶದಲ್ಲಿ 9 ವರ್ಷಗಳಲ್ಲೇ ಅತಿ ಕಡಿಮೆ ರೆಪೊ

ಮುಂಬೈ : ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್‍ ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿದ್ದು ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿಗೆ ರೆಪೋ ದರವನ್ನು ಇಳಿಸಿದಂತಾಗಿದ

ಬ್ಯಾಂಕ್‍ಗಳ ಸಾಲದ ಮೇಲಿನ ಬಡ್ಡಿದರ(ರೆಪೊ) ಶೇ 0.25ರಷ್ಟು ಇಳಿಸುವ ಮೂಲಕ ರೆಪೋ 5.75 ಕ್ಕೆ ಇಳಿದಿದೆ. ಈ ಮೂಲಕ 9 ವರ್ಷಗಳಲ್ಲೇ ಅತಿ ಕಡಿಮೆ ರೆಪೊ ವಿಧಿಸಿದಂತಾಗಿದೆ. ಈ ಬಾರಿಯ ಮುಂಗಾರು ವಾಡಿಕೆಗಿಂತ ತಡವಾಗಿ ಆಗಮಿಸಲಿರುವುದರಿಂದ ಆರ್ಥಿಕ ಬೆಳವಣಿಗೆಗೆ ತೊಡಕಾಗದಂತೆ ಆರ್‌ಬಿಐ ರೆಪೋ ಇಳಿಸುವ ಕ್ರಮ ಕೈಗೊಂಡಿದೆ ಎಂದು ಹೇಳಾಲಾಗಿದೆ. ಇದರೊಂದಿಗೆ ಹೂಡಿಕೆ ಮತ್ತು ಗ್ರಾಹಕರ ಕೊಳ್ಳುವಿಕೆ ಉತ್ತೇಜಿಸಲು ಆರ್‍ಬಿಐ ರೆಪೋ ಇಳಿಕೆ ಮಾಡಿದೆ.        

ಆರ್‌ಬಿಐ ನಾಲ್ಕನೇ ಹಣಕಾಸು ತ್ರೈಮಾಸಿಕ (ಜನವರಿ-ಮಾರ್ಚ್‌ ) ಅವಧಿಯಲ್ಲಿ ದೇಶಿಯ ಉತ್ಪಾದನೆ ಅಂಶ (ಜಿಡಿಪಿ) 5.8ಕ್ಕೆ ಕುಸಿಯುವ ಮೂಲಕ ಐದು ವರ್ಷಗಳಲ್ಲೇ ಅತಿ ಕಡಿಮೆ ಜಿಡಿಪಿಗೆ ಕುಸಿದಿತ್ತು. ಹೀಗಾಗಿ ಆರ್ಥಿಕತೆಯನ್ನು ಸಮತೂಗಿಸಲು ಆರ್‍ಬಿಐ ರೆಪೋ ಕಡಿತಗೊಳಿಸುವುದು ಅನಿವಾರ್ಯ ಎನ್ನುವ ಸ್ಥಿತಿ ಇತ್ತು. ಆರ್‌ಬಿಐ ನಿರ್ಧಾರದಿಂದಾಗಿ ಆರ್ಥಿಕತೆಗೆ ವೇಗ ಸಿಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.