ರಿಲೀಸ್ ಆಯ್ತು ರಾಬರ್ಟ್ ಚಿತ್ರದ ಅಫೀಷಿಯಲ್ ಪೋಸ್ಟರ್

ರಿಲೀಸ್ ಆಯ್ತು ರಾಬರ್ಟ್ ಚಿತ್ರದ ಅಫೀಷಿಯಲ್ ಪೋಸ್ಟರ್

ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರ ಹುಟ್ಟು ಹಬ್ಬವು ನಾಳೆ ಇರುವ ಹಿನ್ನೆಲೆಯಲ್ಲಿ ರಾಬರ್ಟ್ ಚಿತ್ರದಿಂದ ಮತ್ತೊಂದು ಅಫೀಷಿಯಲ್ ಪೋಸ್ಟರ್‍ನ್ನು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಈ ವಿಷಯ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ನೀಡಿದೆ.

ಲಾಕ್ ಡೌನ್, ಕೊರೋನಾದಿಂದಾಗಿ ಎಂದೋ ಬಿಡುಗಡೆಯಾಗಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಇನ್ನೂ ಬಿಡುಗಡೆಗಾಗಿ ಕಾದು ಕುಳಿತಿದೆ. ಸಿನಿಮಾ ಬಿಡುಗಡೆಗಾಗಿ ಕಾದು ಕಾದು ಅಭಿಮಾನಿಗಳೂ ಬೇಸತ್ತಿದ್ದಾರೆ. ಆದರೆ ಚಿತ್ರಮಂದಿರ ಓಪನ್ ಆಗದೇ ಚಿತ್ರತಂಡವೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ.