ಭಾರತ-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಮಳೆ ಅಡ್ಡಿ : 46 ಓವರ್‌ಗಳಲ್ಲಿ 211 ರನ್ ಗಳಿಸಿದ ಕಿವೀಸ್

ಭಾರತ-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಮಳೆ ಅಡ್ಡಿ : 46 ಓವರ್‌ಗಳಲ್ಲಿ  211 ರನ್ ಗಳಿಸಿದ ಕಿವೀಸ್

ಓಲ್ಡ್ ಟ್ರಾಫೊರ್ಡ್‌ : ನ್ಯೂಜಿಲ್ಯಾಂಡ್‍ ಬ್ಯಾಟಿಂಗ್‍ ಕೊನೆಗೊಳ್ಳಲು 4 ಓವರ್‍ ಬಾಕಿ ಇದ್ದಾಗಲೇ ಸುರಿದ ಮಳೆಯಿಂದಾಗಿ ಭಾರತ-ನ್ಯೂಜಿಲ್ಯಾಂಡ್‌ ನಡುವಣ ಸೆಮಿ ಫೈನಲ್‌ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿದೆ.

ಬ್ಯಾಟಿಂಗ್‍ಗೆ ಇಳಿದ ನ್ಯೂಜಿಲ್ಯಾಂಡ್‍ ಆರಂಭಿಕ ಓವರ್‌ಗಳಲ್ಲಿ ರನ್‍ ಗಳಿಸಲು ಪರದಾಡತೊಡಗಿತ್ತು. ಮೂರನೇ ಓವರ್‍ನಲ್ಲಿ ನ್ಯೂಜಿಲ್ಯಾಂಡ್‍ ಬ್ಯಾಟ್ಸ್‍ಮನ್‍  ಮಾರ್ಟ್ನಿನ್‍ ಗಟ್ಪಿಲ್‍ ವಿಕೆಟ್‍ ಉರುಳಿ ನ್ಯೂಜಿಲ್ಯಾಂಡ್‍ ಆರಂಭಿಕ ಆಘಾತವಾಗಿತ್ತು. 10 ನೇ ಓವರ್‍ನಲ್ಲಿ ಒಂದು ವಿಕೆಟ್‍ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್‍ ಕೇವಲ 27 ರನ್‍ ಗಳಿಸಿತ್ತು. ಬೌಲಿಂಗ್‍ ವಿಭಾಗದ ಉತ್ತಮ ನಿಯಂತ್ರಣದಿಂದಾಗಿ ಪಂದ್ಯದುದ್ದಕ್ಕೂ ನ್ಯೂಜಿಲ್ಯಾಂಡ್‍ ರನ್‍ ಗಳಿಕೆಗೆ ಕಡಿವಾಣ ಹಾಕಿದಂತಾಗಿದೆ.

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ನ್ಯೂಜಿಲ್ಯಾಂಡ್‍ 46.1 ನೇ ಓವರ್‍ನಲ್ಲಿ 5 ವಿಕೆಟ್‍ ಕಳೆದುಕೊಂಡು 211 ರನ್‍ ಗಳಿಸಿದೆ.