ನಾ ಕಂಡ ಆ ಹುಡುಗ…….

ನಾ ಕಂಡ ಆ ಹುಡುಗ…….

ಒಮ್ಮೆ ನಾನು ಬಸ್ಸಿನಲ್ಲಿ ಹೋಗುತ್ತಿರುವಾಗ ಒಬ್ಬ ಹುಡುಗನನ್ನು ನೋಡಿದೆ. ಆತ ಅದೆಷ್ಟು ಸುಂದರವಾಗಿದ್ದನೆಂದರೆ. ಎಂತಹವರೂ ಒಮ್ಮೆ ತಮ್ಮನ್ನು ತಾವು ಮರೆಯುತ್ತಿದ್ದರು ಅಷ್ಟು ಸುರಸುಂದರನಾಗಿದ್ದ.

ನಾನು ಸಹ ಅವನ ಚಂದ್ರನಂತಹ ಮೊಗ. ಹಾಲಿನಂತಹ ಮೈಬಣ್ಣ. ಯೌವ್ವನದ ಸಂಕೇತದಂತಿದ್ದ ಆ ಚಿಗುರು ಮೀಸೆ. ವಿಶಾಲವಾದ ವಕ್ಷಸ್ಥಳ. ಮುಗ್ಧತೆಯ ಸಂಕೇತದಂತಿದ್ದ ಅವನ ಆ ನಗುವಿಗೆ ಮನಸೋತೆ. ಅವನತ್ತ ಒಮ್ಮೊಮ್ಮೆ ನೋಡುತ್ತಾ ಹಾಗೆ ನಿದ್ರೆಗೆ ಜಾರಿದೆ.

ತಿಂಡಿ.ಕಾಫೀ ಗೆ ಹತ್ತು ನಿಮಿಷ ಟೈಮಿದೆ ಎಂಬ ಜೋರಾದ ಧ್ವನಿ ನನ್ನನ್ನು ನಿದ್ರೆಯಿಂದೆಬ್ಬಿಸಿತು. ಕಣ್ಣು ಬಿಟ್ಟ ಕೂಡಲೆ ಆ ಹುಡುಗ ಕೂತಿದ್ದ ಸೀಟಿನ ಕಡೆ ನೋಡಿದೆ ಅಲ್ಲಿ ಅವನಿರಲಿಲ್ಲ. ಎಲ್ಲೋದನವ ಎಂದು ಯೋಚಿಸುತ್ತಾ ಕಿಟಕಿಯಿಂದ ಹೊರಗಡೆ ನೋಡಿದೆ. ಆತ ಅಲ್ಲಿಯೇ ಹೋಟೆಲ್ ಮುಂದೆ ನಿಂತಿದ್ದನು ಅವನನ್ನ  ನೋಡಿದಾಗ ನನಗೆ ಗೊತ್ತಿಲ್ಲದೆ  ನನ್ನ ಮೊಗದಲ್ಲಿ ನಗು ಮೂಡಿತು. ಆದರೆ.....ಗಂಭೀರವಾಗಿ ನಿಂತಿದ್ದ ಆ ಹುಡುಗ….. ಅವರ ಅಮ್ಮ ತಿಂಡಿ ತಂದಾಗ ಒಳ್ಳೆ ಮಗುವಿನಂತೆ ನನಗೆ ತಿಂಡಿ ಬೇಡವೆಂದು ಹಟ ಮಾಡಲಾರಂಭಿಸಿದ. ಆದರೆ  ಆ ತಾಯಿ ಅವನನ್ನು ಸಂತೈಸಿ ತಿಂಡಿ ತಿನಿಸಿದಳು. ನಾನು ಅವನನ್ನೆ ನೋಡುತ್ತಾ ಇದ್ದೆ .ಅವನಿಗೆ ತಿಂಡಿ ತಿನಿಸುವಾಗ ಅವನ ಮುಖ ತುಂಬ ಮುದ್ದಾಗಿ ಕಾಣುತ್ತಿತ್ತು .ಆತನ ನೋಡಿದಾಗಲೇ ಮೊದಲ ಬಾರಿಗೆ ನನ್ನಲ್ಲಿ ಪ್ರೀತಿ ಹುಟ್ಟಿದ್ದು .

ಆದರೆ  ಈತ ಬುದ್ಧಿಭ್ರಮಣೆ ಹುಡುಗ ಎಂದು ತಿಳಿದ ನನಗೆ ಒಂದು ಸಲ ಮನಸು ವಿಚಲಿತವಾಯಿತು ಕಣ್ಣುಗಳ ಮುಂದೆ ಕತ್ತಲು ಕವಿಯಿತು. ಅಯ್ಯೋ ಆ ದೇವರು ಅದೆಷ್ಟು ಕ್ರೂರಿ. ಅಂದ ಚಂದದ ಹುಡುಗನಿಗೆ ಇಂತಹ ದೊಡ್ಡ ಕೊರತೆಯನ್ನು ನೀಡಿದ್ದಾನಲ್ಲ. ಛೇ....ಎಂದು ಮನದಲ್ಲೆ ಆ ದೇವರನ್ನು ಶಪಿಸುತ್ತಿದ್ದೆ   ಆ ಹುಡುಗನ  ಧ್ಯಾನದಲ್ಲಿ ನನಗೆ ನನ್ನ ಊರು ಬಂದಿದ್ದೆ  ಅರಿವಿಗೆ ಬರಲಿಲ್ಲ. ನನ್ನ ಗೆಳತಿ ಯಾಕೆ ಬಸ್ ಇಳಿಯಲ್ವಾ ಎಂದಳು ಆಗ ವಾಸ್ತವಕ್ಕೆ ಬಂದು ಬಸ್ಸು ಇಳಿಯಲು ಮುಂದಾದೆ ಆದರೆ ನನ್ನ ಮನಸ್ಸು ಒಮ್ಮೆ ಅವನನ್ನು ನೋಡೋದಿತ್ತು.  ಅವನತ್ತ ತಿರುಗಿದೆ ತನ್ನ ತಾಯಿಯ ಮಡಿಲಲ್ಲಿ ಆರಾಮಾಗಿ ನಿದ್ರಿಸುತ್ತಿದ್ದನ್ನು ನೋಡಿ ಬಿಟ್ಟು ಹೋಗಲು ಮನಸ್ಸು ನನಗೆ ಇಲ್ಲದಿದ್ದರು ಅಲ್ಲಿಂದ  ಕಾಲೇಜಿ ಗೆ ಹೋದೆ ಆದರೆ ನನ್ನ ಅಲೋಚನೆ ಮಾತ್ರ ಇನ್ನೂ ಆ ಹುಡುಗ ಹತ್ತಿರನೇ ಇತ್ತು…….

ಆ ಭಗವಂತನೇನೋ ಕೆಲವರಿಗೆ ಹುಟ್ಟಿನ ಜೊತೆಗೆ ನ್ಯೂನತೆಯನ್ನು ಕೊಟ್ಟು ಈ ಭೂಮಿಗೆ ಕಳುಹಿಸುತ್ತಾನೆ ಆದರೆ ನ್ಯೂನತೆ ಉಳ್ಳ ಅದೆಷ್ಟೋ ಮಕ್ಕಳು. ಆ ಮಕ್ಕಳ ತಂದೆ ತಾಯಂದಿರು ಅನುಭವಿಸುವ ವೇದನೆ ಅವರಿಗೆ ಗೊತ್ತು. ಹಾಗಾಗಿ ಎಂತಹದ್ದೆ ನ್ಯೂನತೆ ಇರುವವರಿಗೆ ಕರುಣೆ ತೋರಬೇಡಿ… ಅವರಿಗೂ ಅವಕಾಶಗಳನ್ನು ಕೊಟ್ಟು ಅವರ ಕಾಲಮೇಲೆ ಅವರೇ ನಿಲ್ಲುವಂತೆ ಪ್ರೇರೇಪಿಸೋಣ . ನಾನು  ಮಾತ್ರ  ಇವತ್ತು ಕೂಡ  ಅವನು  ಮತ್ತೆ ಕಾಣಿಸುತ್ತಾನೆ  ಅಂತ ಬಸ್ ನಲ್ಲಿ ಪ್ರಯಾಣಿಸುವಗೆಲ್ಲ  ನನ್ನ ಕಣ್ಣುಗಳು ಆ…ಹುಡುಗನನ್ನೆ ಹುಡುಕುತ್ತವೆ.  ಆದರೆ ಇದುವರೆಗೂ  ಒಂದು ದಿನನೂ ಕಾಣಿಸಿಲ್ಲ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿದಾ ನನಗೆ ಅದನ್ನು ಮರೆಯಲು ಸಾಧ್ಯವೇ ಹಾಗುತ್ತಿಲ್ಲ . ಆದರೂ ಒಂದು ನಂಬಿಕೆ ಮತ್ತೆ ಕಾಣಿಸುವನು ಅಂತ……..