ಕಾಂಗ್ರೆಸ್ ಮನೆ ಹೊತ್ತಿ ಉರಿಯುತ್ತಿದ್ದರೂ ರಾಹುಲ್ ಸುಳಿವಿಲ್ಲ 

ಕಾಂಗ್ರೆಸ್ ಮನೆ ಹೊತ್ತಿ ಉರಿಯುತ್ತಿದ್ದರೂ ರಾಹುಲ್ ಸುಳಿವಿಲ್ಲ 

ಕರ್ನಾಟಕ, ಗೋವಾದ ಕಾಂಗ್ರೆಸ್‍ನಲ್ಲಿ ಬೆಂಕಿ ಬಿದ್ದಿದ್ದರೂ ರಾಹುಲ್ ಗಾಂಧಿ ಎಲ್ಲಿ ಎಂಬುದೇ ನಿಗೂಢವಾಗಿ ಹೋಗಿದ್ದು, ಇದನ್ನೆಲ್ಲ ನಿಭಾಯಿಸಲು ಸೋನಿಯಾ ಗಾಂಧಿಯೇ ಕಣಕ್ಕಿಳಿಯುವಂತಾಗಿದೆ.

ಪ್ರಧಾನಿ ಹುದ್ದೆಯನ್ನೇರುವ ಕನಸಿದ್ದರೂ, ವಿಪಕ್ಷ ನಾಯಕ ಸ್ಥಾನವಿರಲಿ ಸಂಸತ್‍ನಲ್ಲಿ ಮೊದಲ ಸಾಲಿನಲ್ಲೇ ಕೂರುವ ಅವಕಾಶವೂ ಅಲಭ್ಯವಾಗಿರುವ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ತೆರವು ಮಾಡಿ ತಿಂಗಳುಗಳೇ ಉರುಳಿವೆ. ನೇಪಥ್ಯಕ್ಕೆ ಸರಿದಿದ್ದರೂ ತಾನೇ ಮುಂದೆ ನಿಂತು ಮೈತ್ರಿ ಸರ್ಕಾರ ರಚನೆಯಾಗಿಸಿದ್ದ ಕರ್ನಾಟಕದಲ್ಲೀಗ ತನ್ನ ಮನೆಗೇ ಅಗ್ನಿ ಜ್ವಾಲೆ ಆವರಿಸಿ, ನೆರೆಯ ಗೋವಾದಲ್ಲು ಪಕ್ಷವೇ ಕಾಣೆಯಾಗುವಂಥ ದುಸ್ಥಿತಿಗೆ ತಲುಪಿಕೊಂಡಿದೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಮಾತನ್ನ ಬಿಜೆಪಿ ಕಾರ್ಯರೂಪಕ್ಕಿಳಿಸಲು ಹೊರಟಾಗಿದೆ. ನಮ್ಮ ರಾಜ್ಯದಲ್ಲಿನ ಏಕೈಕ ಬಿಎಸ್‍ಪಿ ಶಾಸಕ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆದಿರುವಂತೆ, ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಈ ಪಕ್ಷದವರು ಬೆಂಬಲ ವಾಪಸ್ ಪಡೆದರೆ ಅಲ್ಲಿಯೂ ಕಾಂಗ್ರೆಸ್‍ಗೆ ಮುಳುಗು ನೀರು ಖಚಿತ. ರಾಷ್ಟ್ರವ್ಯಾಪಿಯ ಇಂಥ ಬೆಳವಣಿಗೆಗಳ ಬಗ್ಗೆ ಲೋಕಸಭೆ ರಾಜ್ಯಸಭೆಯಲ್ಲಿ ಗದ್ದಲಗಳಾಗುತ್ತಿದ್ದರೂ ರಾಹುಲ್ ನೀರವ ಮೌನ ವಹಿಸಿ ಅಮೇಠಿಯಲ್ಲಿ ಪ್ರವಾಸ ಮಾಡುತ್ತಿದ್ದಾರೆ.  ಸೋನಿಯಾಗಾಂಧಿಯವರೇ ಪರಿಸ್ಥಿತಿ ನಿಭಾಯಿಸಲು ನಿಲ್ಲುವ ಅನಿವಾರ್ಯತೆ ಬಂದಿದೆ.

ರಾಹುಲ್ ಗಾಂಧಿಗೆ ಇಷ್ಟೊಂದು ರಾಜಕೀಯ ವೈರಾಗ್ಯವೇಕೆ ಎಂಬ ಪ್ರಶ್ನೆಗಳು ಎದ್ದು ಕೂತಿರುವ ಬೆನ್ನಲ್ಲೇ, ಲೋಕಸಭೆಯಲ್ಲಿ ಕಳೆದ ಸಲ ಎರಡನೇ ಸಾಲಿನಲ್ಲಿ ಕೂರುತ್ತಿದ್ದರು, ಆದರೆ ಈ ಸಲ ಅದನ್ನೂ ಬೇಡವೆಂದಿದ್ದಾರೆ.. ಸಂಖ್ಯಾಬಲವನ್ನಾಧರಿಸಿ ಸದನದಲ್ಲಿ ಆಸನಗಳನ್ನ ಕೊಡಲಾಗುತ್ತೆ. ಕಳೆದ ಸಲ ರಾಹುಲ್ ಗಾಂಧಿಗೆ ಎರಡನೇ ಸಾಲು ಸಿಕ್ಕಿತ್ತು. ಈ ಸಲ ಎರಡು ಸ್ಥಾನ ಹೆಚ್ಚು ಕಾಂಗ್ರೆಸ್ ಗಳಿಸಿರುವುದರಿಂದ ಮೊದಲ ಸಾಲಿನಲ್ಲಿ ಎರಡು ಸ್ಥಾನ ಈ ಪಕ್ಷಕ್ಕೆ ಸಿಗುತ್ತೆ. ಸೋನಿಯಾಗಾಂಧಿ ಮತ್ತು ಪಕ್ಷದ ಸಂಸóತ್ ನಾಯಕ ಅಧಿರ್ ರಂಜನ್ ಚೌಧರಿ ಅದರಲ್ಲಿ ಕೂರಲಿದ್ದು, ರಾಹುಲ್ 466 ನೇ ಆಸನಕ್ಕೆ ಹೋಗಿದ್ದಾರೆ. ಇವೆಲ್ಲವೂ ರಾಹುಲ್ ಗಾಂಧಿ ಇತ್ತೀಚೆನ ವಿದ್ಯಾಮಾನಗಳಿಂದಾಗಿ ರಾಜಕೀಯದಲ್ಲೆ ನಿರಾಸಕ್ತಿ ತಾಳಿದ್ದಾರೆ, ಪಕ್ಷವೇ ಹೊತ್ತಿ ಉರಿದರೂ ತಮ್ಮ ಪಾಡಿಗೆ ತಾವಿರುವುದು, ಅಷ್ಟು ಇಷ್ಟೋ ನೆಹರು ಕುಟುಂಬ ಎಂಬುದಕ್ಕಾದರೂ ಇದ್ದ ವರಿಷ್ಠರೆಂಬ ಹಿಡಿತವೂ ಪಕ್ಷದಲ್ಲಿ ಹೊರಟುಹೋಗಿದೆ.