ಮತ್ತೆ ತೆರೆ ಮೇಲೆ ಬರಲಿದೆ ಶಿವರಾಜ್ ಕುಮಾರ್-ಆರ್ ಚಂದ್ರು ಕಾಂಬಿನೇಷನ್ ನ ಸಿನಿಮಾ

ಮತ್ತೆ ತೆರೆ ಮೇಲೆ ಬರಲಿದೆ ಶಿವರಾಜ್ ಕುಮಾರ್-ಆರ್  ಚಂದ್ರು ಕಾಂಬಿನೇಷನ್ ನ ಸಿನಿಮಾ

ಐ ಲವ್ ಯೂ ಸಿನಿಮಾ ಯಶಸ್ಸಿನ ಖುಷಿಯಲ್ಲಿರೋ ಆರ್. ಚಂದ್ರು ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಮುಂದಿನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ಈ ಹಿಂದೆ ಶಿವಣ್ಣ ಹಾಗೂ ಚಂದ್ರು ಕಾಂಬಿನೇಷನ್ ನಲ್ಲಿ ಮೈಲಾರಿ ಸಿನಿಮಾ ತೆರೆಕಂಡಿತ್ತು. ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಸದ್ದು ಕೂಡ ಮಾಡಿತ್ತು. ಸಾಮಾನ್ಯವಾಗಿ ಒಂದು ಹಿಟ್ ಸಿನಿಮಾ ಮೂಡಿ ಬಂದ್ರೆ ಅಭಿಮಾನಿಗಳುಆ ಡೈರೆಕ್ಟರ್  ಹಾಗೂ ಹೀರೋ ಯಿಂದ ಮತ್ತೊಂದು ಸಿನಿಮಾ ನಿರೀಕ್ಷಿಸ್ತಾರೆ. ಆದ್ರೆ ಚಂದ್ರು-ಶಿವಣ್ಣ ಕಾಂಬಿನೇಷನ್ ನಲ್ಲಿ ಎರಡನೇ ಸಿನಿಮಾ ಬರಲೇ ಇಲ್ಲ.

ಆದ್ರೀಗ 9 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗ್ತಾರೆ ಎನ್ನಲಾಗ್ತಿದೆ. ನಿರ್ದೇಶಕ ಚಂದ್ರು  ‘ಜಂಗಮ’ ಅನ್ನೋ ಸಿನಿಮಾ ನಿರ್ದೇಶನಕ್ಕೆ ಅಣಿಯಾಗ್ತಿದ್ದಾರಂತೆ. ಸದ್ಯ ಸಿನಿಮಾಕ್ಕಾಗಿ ಕಥೆ ರೆಡಿಯಾಗ್ತಿದೆಯಂತೆ. ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಲಂಡನ್ ನಿಂದ ಬಂದ ತಕ್ಷಣ ಶಿವಣ್ಣನ ಒಪ್ಪಿಗೆ ಪಡದು ಸಿನಿಮಾ ಸ್ಟಾರ್ಟ್ ಮಾಡಲಾಗತ್ತೆ. ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವ್ರ ಹುಟ್ಟುಹಬ್ಬದ ಅಂಗವಾಗಿ ಜಂಗಮ ಸಿನಿಮಾ ಅನೌನ್ಸ್ ಆಗಲಿದೆಯಂತೆ.  ಶಸ್ತ್ರ ಚಿಕಿತ್ಸೆಗೆ ತೆರಳೋ ಮೊದಲು ಶಿವರಾಜ್ ಕುಮಾರ್ ಅವ್ರು ಆನಂದ್, ಭಜರಂಗಿ-2, ದ್ರೋಣ ಸಿನಿಮಾಗಳಲ್ಲಿ ಅಭಿನಯಿಸ್ತಿದ್ರು.