ಮಲೇಷ್ಯಾ ಮಾಸ್ಟರ್ಸ್ ಪಾರಮ್ಯ ಮೆರೆದ ಸೈನಾ ಹಾಗೂ ಸಿಂಧೂ

ಮಲೇಷ್ಯಾ ಮಾಸ್ಟರ್ಸ್ ಪಾರಮ್ಯ ಮೆರೆದ ಸೈನಾ ಹಾಗೂ ಸಿಂಧೂ

ಕೌಲಾಲಂಪುರ: ಭಾರತದ ಪ್ರಮುಖ  ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ಸೈನಾ ನೆಹ್ವಾಲ್ ಅವರು 25-23, 21-12 ಅಂತರದಲ್ಲಿ ಥಾಯ್ಲೆಂಡ್  ಎನ್ ಸಿ ಯಂಗ್  ಸೋಲಿಸಿ ಅಂತಿಮ ಎಂಟರ ಘಟ್ಟಕ್ಕೆ ತಲುಪಿದ್ದಾರೆ. 

ಭಾರತದ ಇನ್ನೊರ್ವ ಬ್ಯಾಡ್ಮಿಂಟನ್ ತಾರೆ ಒಲಿಂಪಿಕ್ಸ್ ಬೆಳ್ಳಿ ಪಶಸ್ತಿ ವಿಜೇತೆ ಪಿ.ವಿ ಭರ್ಜರಿ ಪ್ರದರ್ಶನ ನೀಡಿ ವಿಶ್ವದ 19ನೇ ಅಯಾ ಒಹೊರಿ ವಿರುದ್ಧ 21-19, 21-15 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ ಗೆ ತಲುಪಿದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸಮೀರ್ ವರ್ಮಾ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ 19-21, 20-22ರ ಅಂತರದಲ್ಲಿ ಸೋಲು ಕಂಡು ಅಭಿಯಾನ ಅಂತ್ಯಗೊಳಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ವಿಶ್ವದ ನಂ .1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 14-21, 16-21ರ ಅಂತರದಲ್ಲಿ ಸೋಲೊಪ್ಪಿಕೊಂಡ ನಿರಾಶೆ ಮೂಡಿಸಿದ್ದಾರೆ.