ಪಿ.ಎಂ. ವಿಜಯೇಂದ್ರ ರಾವ್‌

ಪಿ.ಎಂ. ವಿಜಯೇಂದ್ರ ರಾವ್‌

ವಿಜಯೇಂದ್ರ ರಾವ್ ಬಾಂಬೆ, ಬೆಂಗಳೂರು, ಮೈಸೂರು ನಗರಗಳಲ್ಲಿ ಇಂಡಿಯನ್ ಎಕ್ಸ್ಪ್ರೆಸ್, ಡೆಕ್ಕನ್ ಹೆರಾಲ್ಡ್, ಸಂಡೆ ಮಿಡ್-ಡೇ ಮೊದಲಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಜವಾಬ್ದಾರಿಗಳನ್ನೂ ನಿರ್ವಹಿಸಿದ ಅನುಭವ ಅವರಿಗಿದೆ. ಭ್ರಷ್ಟಾಚಾರ ನಿರ್ಮೂಲನೆ, ನೈರ್ಮಲ್ಯ ಅಭಿವೃದ್ಧಿ, ಆಡಳಿತ ಮತ್ತು ಮಾಧ್ಯಮದ ಸುಧಾರಣೆ, ಕುರಿತಂತೆ ಕಾಳಜಿ ಹೊಂದಿರುವ ರಾವ್ ಲೇಖಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರೂ ಹೌದು. ಸಂಗೀತ, ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ಅವರಿಗೆ ವಿಶೇಷ ಒಲವಿದೆ. ಭಾರತದ ಸಮಸ್ತ ಜನತೆಗೆ ಮನರಂಜನೆಯ ಮೂಲಕ ಸಂಪರ್ಕಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಅಪರೂಪದ ಟಿವಿ ಕಮ್ ವೆಬ್ ಕಾರ್ಯಕ್ರಮ ಸಿದ್ಧಪಡಿಸಿರುವ ರಾವ್ ಸೂಕ್ತ ನಿರ್ಮಾಪಕರನ್ನು ಅರಸುತ್ತಿದ್ದಾರೆ