ವಿಜಯಕಾಂತ ಪಾಟೀಲ

ವಿಜಯಕಾಂತ ಪಾಟೀಲ

ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ ಅಗಸ್ಟ್ 9, 1969 ರಲ್ಲಿ ಜನನ. ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ; ಕೃಷಿಯ ನಂಟಿದೆ.ಮಾಸದ ಕಲೆಗಳು, ಸಲಸಲದ ಪಾಡು, ನೂರು ಬಣ್ಣದ ಕಣ್ಣು, ಹೌದು ನಾನು ಕೌದಿ, ಇಂತಿ ನದಿ, ಬೆವರ ಬಣ್ಣ (ಕವನ ಸಂಕಲನಗಳು), ಅಮ್ಮ ಅಂದ್ರೆ ಅಷ್ಟಿಷ್ಟಲ್ಲ (ಮಕ್ಕಳ ಕವಿತೆ), ಹಕ್ಕಿಗಳ ಸ್ವಾತಂತ್ರ್ಯೋತ್ಸವ (ಮಕ್ಕಳ ಕಥೆ) ವಜನುಕಟ್ಟು (ಪ್ರಬಂಧ ಸಂಕಲನ) ಅನಿಸಿದ್ದು ಆಡಿದ್ದು (ಬರಹಗಳು) ಒಂದು ಹಿಡಿ ಮುತ್ತು (ಸಂದರ್ಶನಗಳು) ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು).. ಒಟ್ಟು ಹನ್ನೆರಡು ಕೃತಿಗಳನ್ನು ಪ್ರಕಟಿಸಿದ ವಿಜಯಕಾಂತ್, ಬೇಂದ್ರೆ-ಅಡಿಗ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞಣ್ಣ ರೈ ಕಾವ್ಯ ಪ್ರಶಸ್ತಿ, ಕನಕ-ಶರೀಫ ಕಾವ್ಯ ಪುರಸ್ಕಾರ ಸೇರಿದಂತೆ ಕೆಲವು ಪ್ರಶಸ್ತಿ-ಬಹುಮಾನಗಳನ್ನೂ ಪಡೆದುಕೊಂಡಿದ್ದಾರೆ.

ಪ್ರಬಂಧ

ಅಪ್ಪಯ್ಯನ ಜುಬ್ಬಾ ಮತ್ತದರ ತೋಳು..

ಇಂಥ ಅಪ್ಪಯ್ಯನ ಜುಬ್ಬಾದಿಂದ ಉದ್ಭವಿಸಿದ ಮಿನಿಜುಬ್ಬಾ ಧರಿಸಿ ನಾನೂ `ಜುಬ್ಬಯ್ಯ'ನಾಗಿ ಅವರೊಂದಿಗೆ ಹಲವು ರಾಜಕೀಯ ಸಮಾರಂಭಗಳಿಗೆ ಹೋಗುತ್ತಿದ್ದೆ; ಅದೂ ನನ್ನ ಪ್ರೈಮರಿ...