ಶಿ.ಜು.ಪಾಶ

ಶಿ.ಜು.ಪಾಶ

ಶಿ.ಜು.ಪಾಶ ಎಂದೇ ಚಿರಪರಿಚಿತರಾಗಿರುವ ಜುಬೇರ್ ಪಾಶ ನಾಡಿನ ಪ್ರಮುಖ ಕವಿಗಳಲ್ಲಿ ಒಬ್ಬರು. ಅಪ್ಪನ ಬೀಡಿ ಮತ್ತು ಕೋಳಿ ಹುಂಜದ ಹೂವು ಎಂಬ ಕವನ ಸಂಕಲನಗಳು ಹಾಗೂ ಕೆರೆಯಂಗಳ ನವಾಬ ಎಂಬ ಕಥಾ ಸಂಕಲನ ಪ್ರಕಟವಾಗಿವೆ. ಕರ್ನಾಟಕ ಮಾಧ್ಯಮ ಆಕಾಡೆಮಿ 2018 ರಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಎಂಬ ಕೃತಿಯನ್ನು ಪ್ರಕಟಿಸಿದೆ. ಕಥೆ,ಕವಿತೆ,ಪ್ರಬಂಧಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಾಶ, ಪ್ರಸ್ತುತ ಪತ್ರಕರ್ತನಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.