ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿ

ತವರೂರು ಧಾರವಾಡ, ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗಿ ಕಂಪನಿಯಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ 'ಸಂಘದ ಮುಖವಾಣಿ' 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ 'ರಾಜಧಾನಿಯಲ್ಲಿ ಕರ್ನಾಟಕ' ಪುಸ್ತಕವನ್ನು ಸಂಪಾದಿಸಿದ್ದಾರೆ. ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಪ್ರಕಟಿತ ಕೃತಿಗಳು "ಕಣ್ಣ ಕಣಿವೆ" , " ನಮ್ಮಿಬ್ಬರ ನಡುವೆ" (ಕವನ ಸಂಕಲನ) "ದಿಲ್ಲಿ ಡೈರಿಯ ಪುಟಗಳು" (ಪ್ರಬಂಧ ) "ಅಮೃತ ನೆನಪುಗಳು" (ಅಮೃತ ಪ್ರೀತಮ್ ರ ಜೀವನಗಾಥೆ ಇಮರೋಜ್ ಕಂಡಂತೆ) ಇತ್ಯಾದಿ