ಎಂ.ಜಿ. ಶುಭಮಂಗಳ

ಎಂ.ಜಿ. ಶುಭಮಂಗಳ

ಎಂ.ಜಿ. ಶುಭಮಂಗಳ ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ (ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆ) 1975ರಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಭಾರತೀಯ ವಿದ್ಯಾಭವನ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು ಹಾಗೂ ಹೆಚ್.ಸಿ. ಕಿಂಚ ಸ್ಮಾರಕ ಪ್ರಶಸ್ತಿ ಪುರಸ್ಕೃತರು. ಹತ್ತುವರ್ಷಗಳ ಕಾಲ ಉಪ-ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆ. 2018ರಲ್ಲಿ ಇಂಡಿಗೋ ಮಲ್ಟಿಮೀಡಿಯಾ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಜನಪ್ರಿಯ ವಿಜ್ಞಾನ ಸೇರಿದಂತೆ ಹಲವಾರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಸೂರ್ಯೋದಯ, ಸುಧಾ, ಕರ್ಮವೀರ, ವಿಜಯಕರ್ನಾಟಕ, ಹೊಸತು ಹಾಗೂ ಗೃಹಶೋಭಾ ಪತ್ರಿಕೆಗಳು ಹಾಗೂ ಕೆಂಡಸಂಪಿಗೆ, ಅವಧಿ, ಇತ್ಯಾದಿ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಅನುವಾದಿತ ವ್ಯಕ್ತಿತ್ವ ವಿಕಾಸ, ಪೇರೆಂಟಿಂಗ್‌ ಸ್ಕಿಲ್ಸ್‌, ಸ್ಟಡಿ ಸ್ಕಿಲ್ಸ್‌, ಮನೋವೈಜ್ಞಾನಿಕ ಪುಸ್ತಕಗಳು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಿಂದ ಪ್ರಕಟಣೆ ಕಂಡಿದೆ.‌ʼಸಾಧಕರೊಡನೆʼ ಕೃತಿ ರಚಿಸಿದ್ದಾರೆ.

ಸಂದರ್ಶನ

ಸಾಹಿತಿಯಾದವನು ಶೋಷಿತರ ಪರವಾಗಿ ನಿಲ್ಲುತ್ತಾನೆ : ಪ್ರಸಿದ್ಧ ತೆಲುಗು...

ಸಾಹಿತಿಯಾದವನು ಪ್ರಜೆಗಳು ಯಾವ ಸಂಕಷ್ಟದಲ್ಲಿದ್ದಾರೆ, ಎಲ್ಲಿ ಅನ್ಯಾಯವಾಗುತ್ತಿದೆ ಎಂದು ಅವರ ವಿಳಾಸ ಹುಡುಕಿ ಅಂತಹ ಬಲಹೀರನ ಧ್ವನಿಯಾಗಿ ಸರ್ಕಾರವನ್ನು ಪ್ರಶ್ನಿಸುತ್ತಾನೆ...