ಮಾಲತೇಶ ಅಂಗೂರ

ಮಾಲತೇಶ ಅಂಗೂರ

ಮಾಲತೇಶ ಅಂಗೂರ ಪತ್ರಕರ್ತರು. ಜನಿಸಿದ್ದು ಹಾವೇರಿಯಲ್ಲಿ. ವೃತ್ತಿಯಲ್ಲಿ ೨೫ ವರ್ಷಗಳ ಅನುಭವ. ಯೋಗಾಭ್ಯಾಸ, ಛಾಯಾಗ್ರಹಣ, ಕ್ರಿಕೆಟ್, ಟೆನ್ನಿಸ್ ಇವರ ಜೀವನದ ಇನ್ನೊಂದು ಭಾಗ. ಅಂಕಣ ಬರಹ ಮತ್ತು ಪತ್ರಿಕೋದ್ಯಮ ಕುರಿತ ಅಂಗೂರ ಅವರ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿವೆ. ವರ್ತಮಾನದ ರಾಜಕೀಯ ಆಗುಹೋಗುಗಳ ಕುರಿತು ಉತ್ತರ ಕರ್ನಾಟಕದ ಜವಾರಿ ಭಾಷೆಯ ವಿಡಂಬನೆ ಕಾಕಾ ಕಾಲಂನಲ್ಲಿ ಪ್ರತಿಫಲಿಸಲಿದೆ.