ಡಾ.ಓಂಪ್ರಕಾಶ್

ಡಾ.ಓಂಪ್ರಕಾಶ್

ಪ್ರಖ್ಯಾತ ವೈದ್ಯ ಡಾ.ಓಂಪ್ರಕಾಶ್ ಎದೆರೋಗ ತಜ್ಞರು ಮತ್ತು ಜನರಲ್ ಫಿಸಿಷಿಯನ್. ಸದಾ ಜನಸಾಮಾನ್ಯರ ಆರೋಗ್ಯ ನಿರ್ವಹಣೆ ಬಗ್ಗೆಯೇ ಚಿಂತಿಸುವ ಓಂಪ್ರಕಾಶ್ ಬೆಂಗಳೂರು ವೈದ್ಯಕೀಯ ಕಾಲೇಜು ಸ್ಥಾಪಕರಲ್ಲಿ ಒಬ್ಬರೂ ಹೆಸರಾಂತ ಲೇಖಕರೂ ಆದ ರಾಶಿ (ಡಾ.ಶಿವರಾಂ) ಅವರ ಪುತ್ರರು. ಆರೋಗ್ಯ ಮತ್ತು ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ ಅವರ ಅನೇಕ ಲೇಖನಗಳು ಮೆಡಿಕಲ್ ಜನರಲ್ ಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳ ಬಗ್ಗೆ ಒಂದಿಷ್ಟು ತಲೆ ಕೆಡಿಸಿಕೊಳ್ಳದೇ ವೃತ್ತಿಯಲ್ಲೇ ಸುಖ, ಖುಷಿ ಕಾಣುವ ಅವರು ಕೆಲವು ತಲೆಮಾರುಗಳ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ರೂಪಿಸಿದ ಅಪರೂಪದ ಶಿಕ್ಷಕರೂ ಹೌದು. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಅವರು 'ದಿ ಡೆಕ್ಕನ್ ನ್ಯೂಸ್'ಗೆ ಬರೆಯುತ್ತಿರುವುದು ನಮಗೂ ಹೆಮ್ಮೆಯ ವಿಷಯ.

ಆರೋಗ್ಯ

ವೈದ್ಯ ವೃತ್ತಿಯಲ್ಲಿ ಮಾನವೀಯತೆ

ರೋಗಿಯ ಬೇನೆಯನ್ನು ತಾನೇ ಅನುಭವಿಸಿದಂತಾಗಿ ಅನುಕಂಪ ತುಂಬಿ ಆತ ಚಿಕಿತ್ಸೆ ಮಾಡಿದರೆ ಆತ ದಿಟವಾಗಿಯೂ ರೋಗಿಗಳ ಸ್ನೇಹಿತ ಮಾರ್ಗದರ್ಶಕ ಹಾಗೂ ತಾತ್ವಿಕ ಗುರುವಾಗುತ್ತಾನೆ....