ಡಾ. ಗೋವಿಂದ ಹೆಗಡೆ

ಡಾ. ಗೋವಿಂದ ಹೆಗಡೆ

ವೃತ್ತಿಯಿಂದ ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ.ಕಾವ್ಯ ಸಾಹಿತ್ಯಗಳಲ್ಲಿ ಒಲವು.ಕವಿತೆ ಕಥೆ ಲೇಖನ ಅಂಕಣ ಬರಹಗಳಲ್ಲಿ ವ್ಯವಸಾಯ.ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಯೂ ಸೇರಿದಂತೆ,ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು'ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ' ಯೋಜನೆಯಡಿಯಲ್ಲಿ ಪುರಸ್ಕೃತವಾಗಿದೆ.(ಒಂದು ಕವನ ಸಂಕಲನ, ಒಂದು ಗಜಲ್ ಸಂಕಲನ ಬರುವುದರಲ್ಲಿವೆ.)'ಸುವರ್ಣ ಕಾವ್ಯ','ಮತ್ತೆ ಬಂತು ಶ್ರಾವಣಾ', 'ಪಾರಿಜಾತ ಪರಿ' ಮೊದಲಾದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಇವರ ಕವನಗಳು ಸೇರ್ಪಡೆಯಾಗಿವೆ. ಕವಿತೆ ಕಥೆ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ.