ಶಿವಾಜಿ ಗಣೇಶನ್

ಶಿವಾಜಿ ಗಣೇಶನ್

ಶಿವಾಜಿಗಣೇಶನ್, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಮುಗಿಸಿ ಪ್ರಜಾವಾಣಿ ಸೇರಿ ಕಾರ್ಯಾಲಯದಲ್ಲಿ ಎಲ್ಲ ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ತುಮಕೂರು ಮತ್ತು ಬೆಂಗಳೂರಿನಲ್ಲಿ ಹಿರಿಯ ವರದಿಗಾರರಾಗಿ, ದೆಹಲಿಯಲ್ಲಿ ಮುಖ್ಯವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸುದ್ದಿ ಸಂಪಾದಕ ಮತ್ತು ಸಹಾಯಕ ಸಂಪಾದಕರಾಗಿ 33 ವರ್ಷ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಕಳೆದ ಆರು ವರ್ಷಗಳಿಂದ ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ರೇಡಿಯೋ ಸಿದ್ಧಾರ್ಥ ಸಮುದಾಯ ಬಾನುಲಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರಗತಿಪರ ವಿಚಾರಧಾರೆ ಉಳ್ಳ ಇವರು ನಡೆ ನುಡಿ ಮತ್ತು ಬರವಣಿಗೆಯಲ್ಲಿ ನೇರ ಮತ್ತು ಸ್ಪಷ್ಟವಾದ ನಿಲುವನ್ನು ಹೊಂದಿದ್ದಾರೆ.

ರಾಜಕೀಯ

ಬಿಸಿ ತುಪ್ಪವಾಗಿರುವ ಮೈತ್ರಿ ರಾಜಕಾರಣ

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಭಾವನಾತ್ಮಕವಾಗಿ ಸಾಧ್ಯವಾಗದೇ ಕೇವಲ ಅವಕಾಶವಾದದ ಮಟ್ಟದಲ್ಲೇ ರೂಪುಗೊಂಡಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಎರಡೂ...