ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ

ಮಡಿಕೇರಿಯಲ್ಲಿ ಜನಿಸಿದ ತಂಬಂಡ ವಿಜಯ್ ಪೂಣಚ್ಚ ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ನಂತರದ ಅಧ್ಯಯನ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಅವರು ಬರೆದಿರುವ ರಾಜೇಂದ್ರನಾಮೆ ಮರು ಓದು ಅವರ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ಪೂಣಚ್ಚ ಇತಿಹಾಸದ ವಸ್ತುನಿಷ್ಠ ಚಿತ್ರಗಳನ್ನು ‘ದಿ ಡೆಕ್ಕನ್ ನ್ಯೂಸ್’ ಓದುಗರಿಗಾಗಿ ಬರೆಯುತ್ತಿದ್ದಾರೆ.