ಡಿಂಪಲ್ ಕ್ವೀನ್ ವಿರುದ್ಧ ಉಪ್ಪಿ ಪತ್ನಿ ಗರಂ

ಡಿಂಪಲ್ ಕ್ವೀನ್ ವಿರುದ್ಧ ಉಪ್ಪಿ ಪತ್ನಿ ಗರಂ

‘ಈ ಸೀನ್  ಮಾಡೋಕೆ ನನಗೆ ಮುಜುಗರ ಆಗ್ತಿತ್ತು. ಸೀನ್ ಶೂಟಿಂಗ್ ಮಾಡುವಾಗ ಉಪ್ಪಿ ಸರ್, ನಾನು ಕ್ಯಾಮೆರಾದವ್ರು ಮಾತ್ರ ಇದ್ವಿ. ನನಗೆ ಮುಜುಗರ ಆಗತ್ತೇ ಅಂಥಲೇ ಉಪ್ಪಿ ಸರ್ , ಈ ಹಾಡನ್ನು ಡೈರೆಕ್ಟ್ ಮಾಡಿದ್ರು.’ ಈ ಮಾತುಗಳನ್ನು ನೀವೂ ಸಹ ಕೇಳಿರ್ತೀರಿ. ಐ ಲವ್ ಯೂ ಸಿನಿಮಾ ಪ್ರೆಸ್ ಮೀಟ್, ಟ್ರೇಲರ್ ಲಾಂಚ್, ಪ್ರೊಮೋಷನ್ ಹೀಗೆ ವಿವಿಧ ಕಾರ್ಯಕ್ರಮ, ಸಂದರ್ಶನಗಳಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಆಡಿರೋ ಮಾತಿವು. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರ್ತಿರೋ ಐ ಲವ್ ಯೂ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರಾಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಸೋನುಗೌಡ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್ ರಿಲೀಸ್ ಆಗ್ತಿದ್ದಂತೆ, ರಚಿತಾ ರಾಮ್ ಬೋಲ್ಡ್ ಲುಕ್ ಗಾಂಧಿನಗರದಲ್ಲಿ ಹಲ್ ಚಲ್ ಎಬ್ಬಿಸಿದೆ. ಹೋದಲ್ಲಿ-ಬಂದಲ್ಲಿ, ಸೋಷಿಯಲ್ ಮೀಡಿಯಾ, ಟಿವಿ, ಪೇಪರ್ ಗಳಲ್ಲಿ ರಚಿತಾ ರಾಮ್ ಹಾಟ್ ಸೀನ್ ನದ್ದೇ ಸುದ್ದಿಯಾಗಿದೆ. ಇದ್ರಿಂದ ಸಾಕಷ್ಟು ಮುಜುಗರ ಅನುಭವಿಸ್ತಿರೋ ರಚಿತಾ, ಇನ್ಮುಂದೆ ಈ ರೀತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದೆ ಇಲ್ಲ. ಈ ರೀತಿ ಪಾತ್ರದ ಫಸ್ಟ್ ಅಂಡ್ ಲಾಸ್ಟ್ ಸಿನಿಮಾ ಇದೇ ಅಂತೆಲ್ಲಾ ಹೇಳಿಕೊಂಡ್ರು. ಅಷ್ಟಕ್ಕೆ ಸುಮ್ಮನಾಗದೇ ಪ್ರತಿಬಾರಿ ಬೋಲ್ಡ್ ಸೀನ್ ಹಾಗೂ ಸಾಂಗ್ ವಿಚಾರ ಬಂದಾಗ ಉಪೇಂದ್ರ ಅವ್ರ ಹೆಸರು ತರ್ತಿದ್ರು. ರಚಿತಾರ ಈ ನಡವಳಿಕೆ ವಿರುದ್ಧ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ.

ರಚಿತಾ ಯಾಕೆ ಪದೇ ಪದೇ ಉಪೇಂದ್ರ ಅವರ ಹೆಸರು ಹೇಳ್ತಿದ್ದಾರೆ..? ಸಿನಿಮಾ ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಯಾಕೆ ಹೇಳ್ತಿಲ್ಲಉಪೇಂದ್ರ ಅವ್ರು ನಟ-ನಿರ್ದೇಶಕನಾಗಿ ಹೆಸರು ಮಾಡಿರೋವ್ರು ಅವರ ಬಗ್ಗೆ ಮಾತನಾಡುವಾಗ ರಚಿತಾ ಎಚ್ಚರ ವಹಿಸಬೇಕು. ಅದು ಬಿಟ್ಟು ಪದೇ ಪದೇ ಉಪೆಂದ್ರ ಅವ್ರೇ ಈ ಸೀನ್ ಡೈರೆಕ್ಟ್ ಮಾಡಿದ್ರು ಅನ್ನೋದು ಸರಿಯಿಲ್ಲ. ಅದ್ರ ಬದಲಾಗಿ ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬುದನ್ನು ಹೇಳಿಕೊಳ್ಳಲಿ.  ರಚಿತಾ ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ. ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿರೋ ಅನುಭವ ಅವರಿಗಿದೆ. ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ, ಹಾಡೊಂದರ ಬಗ್ಗೆ ಮಾತ್ರ  ಯಾಕೆ ಇಷ್ಟೊಂದು ಗಮನ ಹರಿಸ್ತಿದ್ದಾರೆ. ಹಾಡಿನ ಬಗ್ಗೆ ಆಕೆಗೆ ಅಸಹನೆಯಿದ್ದಿದ್ರೆ ಸಾಂಗ್ ಮಾಡಲು ಒಪ್ಪಬಾರದಿತ್ತು. ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಪತಿ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ ಅಂಥ ಪ್ರಿಯಾಂಕಾ ಉಪೇಂದ್ರ ನಟಿ ರಚಿತಾ ವಿರುದ್ಧ ಕೋಪಗೊಂಡಿದ್ದಾರೆ.