ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ ಮತ್ತು ದೀಪಿಕಾ!

ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ ಮತ್ತು ದೀಪಿಕಾ!

ಬಾಲಿವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದೀಪಿಕಾ ಪಡುಕೋಣೆ ಪ್ರಭಾಸ್‍ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.ಸಾಹೋ ಸಿನಿಮಾದಲ್ಲಿ ಸೋಲುಂಡ ಪ್ರಭಾಸ್ ಸದ್ಯ ಜಾನ್ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾ ನಂತರ ಮಹಾನಟಿ ಸಿನಿಮಾ ಸಾರಥಿ ನಾಗ್ ಅಶ್ವಿನ್ ಸಾರಥ್ಯ ಚಿತ್ರದಲ್ಲಿ ಪ್ರಭಾಸ್ ನಟಿಸೋದು ಪಕ್ಕಾ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಪಂಚ ಭಾಷೆಗಳಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದರಿಂದ ಬಾಲಿವುಡ್ ಟಾಪ್ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ತಮ್ಮ ಕಥೆಗೆ ಆಲಿಯಾ ಭಟ್ ಅಥವಾ ದೀಪಿಕಾ ಪಡುಕೋಣೆ ಬೇಕು ಅಂತಿದ್ದಾರೆ ನಿರ್ದೇಶಕ ನಾಗ್ ಅಶ್ವಿನ್.