ಪಾಪ್ ಕಾರ್ನ್ ಮಂಕಿ ಟ್ರೈಲರ್ ಬಿಡುಗಡೆ; ಕುತೂಹಲ ಮೂಡಿಸಿದ ಡಾಲಿ ಅಭಿನಯ

ಪಾಪ್ ಕಾರ್ನ್ ಮಂಕಿ ಟ್ರೈಲರ್  ಬಿಡುಗಡೆ;  ಕುತೂಹಲ ಮೂಡಿಸಿದ ಡಾಲಿ ಅಭಿನಯ

ಪಾಪ್​ ಕಾರ್ನ್​ ಮಂಕಿ ಸಿನಿಮಾದ ಟ್ರೈಲರ್  ​ಬಿಡುಗಡೆಯಾಗುವ  ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ, ಬಿಡುಗಡೆಯಾದ ಕ್ಷಣ ಮಾತ್ರದಲ್ಲೇ ಯ್ಯೂಟೂಬ್ ​ನಲ್ಲಿ ಹವಾ ಎಬ್ಬಿಸುತ್ತಿರುವುದಲ್ಲದೇ  ಟ್ವಿಟ್ಟರ್​ನಲ್ಲೂ ಟ್ರೆಂಡಿಂಗ್​ ನಲ್ಲಿದೆ.

ಟಗರು ಚಿತ್ರದ ಮೂಲಕ ಡಾಲಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ  ಧನಂಜಯ್ ಈ ಚಿತ್ರದಲ್ಲಿ  ನಾಯಕ ನಟರಾಗಿ ಅಭಿನಯಿಸಿದ್ದು, ಹಲವು ಅವತಾರಗಳಲ್ಲಿ ಗೋಚರಿಸಿದ್ದಾರೆ. ಹಳೆಯ ಕಟ್ಟಡ, ದಲ್ಲಿ ತೊಟ್ಟಿಕ್ಕುವ ನೀರು, ನೆಲಕ್ಕೆ ಬಿದ್ದ ರಕ್ತದ ಹೊಳೆ, ನದಿಯ ನೀರಲ್ಲಿ ಬೆರೆತ ರಕ್ತ, ಒಂದು ಕೊಲೆ, ಮುಗ್ಧ ಮಗುವಿನ ಮುಖ, ಈ ಮಧ್ಯೆ ಬಂದು ಹೋಗುವ ಅನೇಕ ಮುಖಗಳು ಟೀಸರ್ ​ನಲ್ಲಿ ಅನೇಕ ವಿಚಾರವನ್ನು ಬಿಚ್ಚಿಟ್ಟು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಇನ್ನೂ ಪಾಪ್​ಕಾರ್ನ್​ ಮಂಕಿ ಚಿತ್ರವನ್ನು  ಸೂರಿ ನಿರ್ದೇಶನ ಮಾಡಿದ್ದಾರೆ.