‘ಸಂಹಾರಿಣಿ’ಯಾಗಿ ಬರ್ತಿದ್ದಾಳೆ ಮಳೆ ಹುಡುಗಿ

‘ಸಂಹಾರಿಣಿ’ಯಾಗಿ ಬರ್ತಿದ್ದಾಳೆ ಮಳೆ ಹುಡುಗಿ

ಪೂಜಾಗಾಂಧಿ ಚಂದನವನದ ಮಳೆ ಹುಡುಗಿ. ಮುಂಗಾರು ಮಳೆ ಸಿನಿಮಾ ನೋಡಿದ ಪ್ರತಿಯೊಬ್ಬ ಸಿನಿ ಪ್ರೇಕ್ಷಕನೂ ನಟಿ ಪೂಜಾಗಾಂಧಿಯವ್ರನ್ನು ಮರೆಯೋಕೆ ಸಾಧ್ಯ ಇಲ್ಲ. ಪೂಜಾ ಯಾವುದೇ ರೀತಿಯ ಪಾತ್ರಗಳನ್ನು ಮಾಡಿದ್ರು ಸಹ ಅವ್ರ ಅಭಿನಯವನ್ನು ಕಣ್ತುಂಬಿಕೊಳ್ಳೋಕಂತಲೇ ಒಂದಷ್ಟು ಮಂದಿ ಕಾಯ್ತಿರ್ತಾರೆ. ಪ್ರೇಮ ಕಥೆಯಾಧರಿತ ಸಿನಿಮಾಗಳ ಮೂಲಕ ಕನ್ನಡಿಗರ ಮನದನ್ನೆಯಾಗಿದ್ದ ಪೂಜಾ ಗಾಂಧಿ, ಇತ್ತೀಚೆಗೆ ವಿಭಿನ್ನ ರೀತಿಯ ಸಿನಿಮಾಗಳತ್ತ ಚಿತ್ತ ಹರಿಸಿದ್ದಾರೆ. ದಂಡುಪಾಳ್ಯ, ಅಭಿನೇತ್ರಿ  ಚಿತ್ರಗಳ ಬಳಿಕ ಪೂಜಾ ಗಾಂಧಿ ನಟನೆಯ ವಿಭಿನ್ನ ಸಿನಿಮಾವೇ ಸಂಹಾರಿಣಿ.

ಸಂಹಾರಿಣಿ ಸಿನಿಮಾ ಬಗ್ಗೆ ಡೆಕ್ಕನ್ ನ್ಯೂಸ್ ಜತೆ ನಟಿ ಪೂಜಾ ಗಾಂಧಿ ಮಾತು:

ಸಣ್ಣ ಗ್ಯಾಪ್ ಬಳಿಕ ಯಾಕ್ಷನ್ ಸಿನಿಮಾದಲ್ಲಿ ನಟಿಸಿದ ಅನುಭವ ಹೇಗಿತ್ತು..?

ಸಂಹಾರಿಣಿ ಸಿನಿಮಾ ನನಗೊಂದು ಒಳ್ಳೆಯ ಅನುಭವ ನೀಡಿದೆ. ನನ್ನ ವೃತ್ತಿ ಜೀವನದ ವಿಶೇಷ ಸಿನಿಮಾವಿದು. ವಿಭಿನ್ನ ಪಾತ್ರವೊಂದಕ್ಕೆ ಸಿನಿಮಾದಲ್ಲಿ ನಾನು ಬಣ್ಣ ಹಚ್ಚಿದ್ದೇನೆ. ಯಾಕ್ಷನ್ ಸಿನಿಮಾ ಎಂದ ಮಾತ್ರಕ್ಕೆ ಇದ್ರಲ್ಲಿ ಬರೀ ಫೈಟ್ಸ್, ಯಾಕ್ಷನ್ ಸೀಕ್ವೆನ್ಸ್ ಸೀನ್ಗಳೇ ಇಲ್ಲ ಬದಲಾಗಿ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಇದೆ. ಸಿನಿಮಾ ಜಗತ್ತಿನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಕನೆಕ್ಟ್ ಆಗುವಂತಹ ಸಿನಿಮಾ. ಹೆಣ್ಣಿಗೆ ಗೌರವ ಕೊಟ್ರೆ ಆಕೆ ಕೂಡ ಪ್ರತಿಯೊಬ್ಬರನ್ನು ಗೌರವಿಸ್ತಾಳೆ. ಜೀವಕ್ಕೆ ಜೀವ ನೀಡೋಕು ಹೆಣ್ಣು ರೆಡಿಯಿರ್ತಾಳೆ. ಇದರ ಬದಲಾಗಿ ಅವಮಾನ, ಅನ್ಯಾಯ ಆದ್ರೆ ಆಕೆ ಸಿಡಿದೇಳ್ತಾಳೆ. ಹೆಣ್ಣು ಎಲ್ಲಾ ಕಷ್ಟಗಳನ್ನು ಎದುರಿಸೋಕೆ ತಯಾರಿರಬೇಕು. ಪ್ರತಿ ಪುರುಷನೂ ಸ್ರ್ತೀಯನ್ನು ಗೌರವಿಸಬೇಕು ಅನ್ನೋ ಅನ್ನೋ ಕಥೆಯನ್ನು ಸಂಹಾರಿಣಿ ಸಿನಿಮಾ ಹೇಳತ್ತೆ. ಇದೊಂದು ಉತ್ತಮ ಸಂದೇಶವಿರೋ ಸಿನಿಮಾ.

ಹೊಸ ನಿರ್ದೇಶಕರ ಸಿನಿಮಾ ಮಾಡೋಕೆ ಹೇಗೆ ಒಪ್ಪಿಕೊಂಡ್ರಿ..?

ಸಂಹಾರಿಣಿ ಚಿತ್ರದ ನಿರ್ದೇಶಕ  ಕೆ. ಜವಾಹರ್  ನನಗೆ ಕರೆ ಮಾಡಿ ಸಿನಿಮಾ ಬಗ್ಗೆ ಹೇಳಿದ್ರು ಆರಂಭದಲ್ಲಿ ನಾನು ಒಪ್ಪಿಕೊಂಡಿರಲಿಲ್ಲ. ಮೂರುತಿಂಗಳ ಬಳಿಕ ಮೀಟ್ ಮಾಡೋದಾಗಿ ಹೇಳಿದ್ದೆ. ಆಮೇಲೆ ನಿರ್ದೇಶಕರನ್ನು ಭೇಟಿಯಾಗಿ ಕಥೆ ಕೇಳಿದೆ. ತುಂಬಾನೆ ಖುಷಿಯಾಯ್ತು. ಪಾತ್ರವನ್ನು ಮಾಡಬೇಕು. ಇದು ಒಂದೊಳ್ಳೆ ಸಿನಿಮಾವಾಗತ್ತೆ ಅನ್ನೋ ನಂಬಿಕೆ ಬಂತು. ಹಾಗಾಗಿ ಸಿನಿಮಾ ಮಾಡಿದೆ. ಈಗಾಗ್ಲೇ ಶೂಟಿಂಗ್, ಡಬ್ಬಿಂಗ್ ವರ್ಕ್ ಕೂಡ ಮುಗಿದಿದೆ. ಬರೋ ತಿಂಗಳಲ್ಲಿ ಸಿನಿಮಾ ತೆರೆಗೆ ಬರತ್ತೆ

 

ಯಾಕ್ಷನ್ ಸಿನಿಮಾದ ಶೂಟಿಂಗ್ ಅನುಭವ ಹೇಗಿತ್ತು..?

ಸಂಹಾರಿಣಿ ಸಿನಿಮಾ ಸುಮಾರು 25 ದಿನಗಳ ಕಾಲ ಮಲೆನಾಡು ಭಾಗದಲ್ಲಿ ಶೂಟಿಂಗ್ ಆಯ್ತು. ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಜಾಗ, ಅಲ್ಲಿನ ಜನ, ಆಹಾರ ಶೈಲಿ ಎಲ್ಲವೂ ನನಗೆ ತುಂಬಾನೆ ಇಷ್ಟ ಆಯ್ತು. ಆದ್ರೆ ಒಂದು ಸಿನಿಮಾ ಶೂಟಿಂಗ್ ಅಂದ್ರೆ ತುಂಬಾನೇ ಡಿಪಿಕಲ್ಟೀಸ್ ಇರತ್ತೆ. ಸಿನಿಮಾದಲ್ಲಿ 4 ರಿಂದ 5 ಫೈಟ್ ಸೀನ್ಸ್, ಒಂದು ಚೇಸಿಂಗ್ ದೃಶ್ಯವಿದೆ. ಅದನ್ನೆಲ್ಲಾ ಬಿಸಿಲಲ್ಲಿ ಶೂಟಿಂಗ್ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯೋ, ದೃಶ್ಯಗಳಿವೆ. ಶೂಟಿಂಗ್ ವೇಳೆ ಹುಷಾರು ತಪ್ಪಿ, ಗಾಯಗಳು ಕೂಡ ಆಗಿದ್ವು. ಆದ್ರೆ ಚಿತ್ರ ತಂಡದ ಒಳ್ಳೆಯ ಸಪೋರ್ಟ್ನಿಂದ ಅದ್ಯಾವ್ದು ಕಷ್ಟ ಆಗ್ಲಿಲ್ಲ. ಒಂದೊಳ್ಳೆ ಸಿನಿಮಾ ಆಗಬೇಕಂದ್ರೆ ಇದೆಲ್ಲಾ ಮಾಡಲೇ ಬೇಕಲ್ವಾ..

 

ಸಂಹಾರಿಣಿ ತಂಡ ಹಾಗೂ ನಿಮ್ಮ ಕೋ ಆರ್ಟಿಸ್ಟ್ಸ್ ಜತೆ ನಟಿಸಿದ ಅನುಭವ ಹೇಗಿತ್ತು..?

ಸಂಹಾರಿಣಿ ಚಿತ್ರತಂಡ ಒಂದೊಳ್ಳೆ ಅನುಭವ ನೀಡಿತು. ಪಾತ್ರ ಮಾಡಿದ್ದು ಹಾಗೆಯೇ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾನೆ ಖುಷಿ ಕೊಟ್ಟಿದೆ. ರವಿ ಕಾಳೆ, ಹರೀಶ್ ಜೋಷಿ, ರಾಹುಲ್ ದೇವ್,ಕಿಶೋರ್, ಸಚಿನ್ ಪುರೋಹಿತ್ ಹಾಗೆಯೇ ಇಡೀ ತಂಡದ ಜತೆ ಕೆಲಸ ಮಾಡ್ತಾ ಸಖತ್ ಎಂಜಾಯ್ ಮಾಡ್ದೆ. ರವಿ ಕಾಳೆಯವ್ರೊಂದಿಗೆ ಈಗಾಗ್ಲೇ ದಂಡುಪಾಳ್ಯ-3 ಸಿನಿಮಾದಲ್ಲಿ ನಟಿಸಿದ್ದೆ. ರಾಹುಲ್ ದೇವ್ ಅವ್ರ ಜತೆ ಫರ್ಸ್ಟ್ ಟೈಮ್ ಅಭಿನಯಿಸಿದ್ದು ಚೆನ್ನಾಗಿತ್ತು. ಬಹಳ ಕಷ್ಟಕರವಾದ ಸಿನಿಮಾವಿದು. ಆದ್ರೆ ಎಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ರೆಡಿಯಾಗಿದೆ.

 

ಔಟ್ ಡೋರ್ ಶೂಟಿಂಗ್ ಮಾಡುವಾಗ ಮನೆನಾ ಎಷ್ಟು ಮಿಸ್ ಮಾಡ್ಕೋತಿರಾ..?

ಓಹ್ನನಗೆ ಹೋಮ್ಸಿಕ್ ತುಂಬಾನೇ ಜಾಸ್ತಿಅಮ್ಮ ಮತ್ತೆ ನಾಯಿನಾ ಜಾಸ್ತಿ ಮಿಸ್ ಮಾಡ್ಕೊತಿದ್ದೆ. ನಮ್ಮ ಮನೆಯಲ್ಲಿ ಟೈಗರ್ ಅಂಥ ಡಾಗ್ ಇದೆ ನನಗೆ ಅದನ್ನು ಬಿಟ್ಟು ಹೊರಗಡೆ ಹೋಗೋಕೆ ಇಷ್ಟಾನೇ ಆಗಲ್ಲ. ಆದ್ರೆ ಡೈಲಿ ಮಮ್ಮಿಗೆ ಬೆಳಗ್ಗೆ ಸಂಜೆ ವಿಡಿಯೋ ಕಾಲ್ ಮಾಡ್ತಿದ್ದೆ. ನಮ್ಮಮ್ಮ ಮನೆಯಲ್ಲಿ ನಾನಿಲ್ಲ ಅಂಥ ಅಪ್ಸೆಟ್ ಆಗಿದ್ರು. ಆದ್ರೆ ಇದನೆಲ್ಲಾ ಸ್ಯಾಕ್ರಿಪೈಸ್ ಮಾಡಿ ಕಷ್ಟಪಟ್ಟು ಸಿನಿಮಾ ಮಾಡಿದ್ರೇನೆ ಪ್ರೇಕ್ಷಕರು ನಮ್ಮ ಕೆಲಸಾನ ಪ್ರೀತಿಸ್ತಾರೆ

 

 ಚಿತ್ರರಂಗದಿಂದ ದೂರ ಉಳಿದಿದ್ರಿ ಅನ್ನೋ ಮಾತುಗಳು ಕೇಳಿಬರ್ತಿದ್ವು.. ಅದು ನಿಜನಾ…?

ನೋ ವೇ ರೀತಿ ಏನಿಲ್ಲ. ನಾನೊಬ್ಬ ನಟಿಯಾಗಿ, ಯಾವ ರೀತಿ ಪಾತ್ರಗಳನ್ನು ಮಾಡಿದ್ರೆ ಚೆನ್ನಾಗಿರತ್ತೆ, ಯಾವ ರೀತಿ ಪಾತ್ರಗಳನ್ನು ಮಾಡಬಾರದು ಅನ್ನೋ ಆಲೋಚನೆ ನನಗಿದೆ. ನನಗೆ ಯಾವ ಸಿನಿಮಾ ಇಷ್ಟ ಆಗತ್ತೋ ರೀತಿ ಪಾತ್ರಗಳನ್ನು ಮಾಡ್ತೀನಿ. ನನಗೂ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡೋ ಆಲೋಚನೆಯಿದೆ. ಸಿನಿಮಾ ಮಾಡ್ತಿಲ್ಲ ಅಂದ ಮಾತ್ರಕ್ಕೆ ನಾನು ಗ್ಯಾಪ್ ತೆಗೆದುಕೊಂಡಿದ್ದೀನಿ, ಅಥವಾ ಇದು ನನ್ನ ಕಮ್ ಬ್ಯಾಕ್ ಅಂತೇನಲ್ಲಸಾಕಷ್ಟು ಸಿನಿಮಾಗಳ ಆಫರ್ ಬಂದಿತ್ತು. ಆದ್ರೆ ನನಗೆ ಕಥೆ ಇಷ್ಟವಾಗದ ಕಾರಣ ನಾನು ಸಿನಿಮಾ ಒಪ್ಪಿಕೊಂಡಿಲ್ಲ.