'ಇಲೇಕ್ಷನ್ ಮುಂದ್ ಜಿಗಜಿಗ್ದ ಕೈ ಅಲ್ಲಾಡ್ಸಿ, ಕಾಲ ಅಲ್ಲಾಡ್ಸಿ ದೊಡ್ಡ ದೊಡ್ಡ ಭಾಷ್ಣಾ ಮಾಡಿದ್ದ ಈ ಜನಕ್ಕ ರೈತರು ನೆನ್ಪು ಮರ್ತ ಹೋಗೇತಿ'

ಅಲ್ರೀ ಕಾಕಾರ "ಗಾಡಿಮ್ಯಾಗ ಹೆಲ್ಮೀಟ್ ಇಲ್ದ ಓಡಾಡಿದ್ರ ಈ ಪೊಲೀಸ್ರು ಗಾಡಿ ನಿಲ್ಸಿ ಗಾಡಿ ಜೊತಿಗೆ ಈ ಬಾಡಿಗೂ ದಂಡ ಹಾಕ್ತಾರ"!. ಅದು ದಂಡ ಕಡ್ಮೀ ಅಂತಿರೇನೂ.....! "ಹೆಲ್ಮೇಟ್ ಇಲ್ದಕ್ ಸಾವಿರ ಅಂತ್", ಲೈಸನ್ಸ್ ಇಲ್ಲದ್ಕ ಐದಸಾವಿರಂತ್"..., ಗಾಡಿ ದಾಖ್ಲೆ ಇಲ್ದಕ್ ಎರ್ಡಸಾವಿರಂತ್" ಇನ್ನ "ಕುಡ್ದ ಗಾಡಿ ಹೊಡದ್ರ ಹತ್ತಸಾವ್ರಿರಂತ್"? "ಇಷ್ಟ ದಂಡಾ ಗಾಡಿ ಮಾರಿದ್ರು ಕಟ್ಟಾಕ ಆಗಂಗಿಲ್ಲ"!. ಅದ್ಕ ಈಗಾಡಿ ಸಹವಾಸಾನ ಬ್ಯಾಡ್ ಅಂತ್  ಸೈಕಲ್ ಹೊಡ್ಕೋತಾ ಓಡ್ಯಾಡಾಕ ಹತ್ತೇನಿ ನೋಡ್ರೀ...?.

'ಇಲೇಕ್ಷನ್ ಮುಂದ್ ಜಿಗಜಿಗ್ದ ಕೈ ಅಲ್ಲಾಡ್ಸಿ, ಕಾಲ ಅಲ್ಲಾಡ್ಸಿ ದೊಡ್ಡ ದೊಡ್ಡ ಭಾಷ್ಣಾ ಮಾಡಿದ್ದ ಈ ಜನಕ್ಕ ರೈತರು ನೆನ್ಪು ಮರ್ತ ಹೋಗೇತಿ'

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ 
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಮನುಷಾನ ಮಧ್ಯ 
ಮೇಲ್ಯಾವುದು ಕೀಳಾವುದೋ ಹುಚ್ಚಪ್ಪ
ಕುಲದಲ್ಲಿ ಕೀಳ್ಯಾವುದೋ.....

ಏನ್ಪಾ ಬಸಣ್ಣ ಇದು.....ಸೈಕಲ್ ಹತೆಗೆಂಡು, ಹೆಲ್ಮೇಟ್ ಹಾಕ್ಕೊಂಡು...  ಅದು ಈ ಸ್ಮಶಾನದಾಗಿನ ಹಾಡು ಹಾಡಾಕ ಹತ್ತಿಯಲ್ಲೋ...! ಹೊಗ್ಗೋ ಇವನವ್ನ.... ತಡಿಯಲೇ, ಅದೇನಾತು ಅನ್ನೋದನ್ನು ಹೇಳೋ...?

ಅಲ್ರೀ ಕಾಕಾರ "ಗಾಡಿಮ್ಯಾಗ ಹೆಲ್ಮೀಟ್ ಇಲ್ದ ಓಡಾಡಿದ್ರ ಈ ಪೊಲೀಸ್ರು ಗಾಡಿ ನಿಲ್ಸಿ ಗಾಡಿ ಜೊತಿಗೆ ಈ ಬಾಡಿಗೂ ದಂಡ ಹಾಕ್ತಾರ"!. ಅದು ದಂಡ ಕಡ್ಮೀ ಅಂತಿರೇನೂ.....! "ಹೆಲ್ಮೇಟ್ ಇಲ್ದಕ್ ಸಾವಿರ ಅಂತ್", ಲೈಸನ್ಸ್ ಇಲ್ಲದ್ಕ ಐದಸಾವಿರಂತ್"..., ಗಾಡಿ ದಾಖ್ಲೆ ಇಲ್ದಕ್ ಎರ್ಡಸಾವಿರಂತ್" ಇನ್ನ "ಕುಡ್ದ ಗಾಡಿ ಹೊಡದ್ರ ಹತ್ತಸಾವ್ರಿರಂತ್"? "ಇಷ್ಟ ದಂಡಾ ಗಾಡಿ ಮಾರಿದ್ರು ಕಟ್ಟಾಕ ಆಗಂಗಿಲ್ಲ"!. ಅದ್ಕ ಈಗಾಡಿ ಸಹವಾಸಾನ ಬ್ಯಾಡ್ ಅಂತ್  ಸೈಕಲ್ ಹೊಡ್ಕೋತಾ ಓಡ್ಯಾಡಾಕ ಹತ್ತೇನಿ ನೋಡ್ರೀ...?.

ಅದಸರಿ ಬಿಡು.... ಆದ್ರ "ಹೆಲ್ಮೇಟ್ ಹಾಕ್ಕೋಂಡು  ಸೈಕಲ್ ಮ್ಯಾಲ್ ಓಡಾಡೋ ವ್ಯಕ್ತಿ ಅಂದ್ರ.. ನೀನ ಇರ್ಬೇಕು"?. "ಅಲ್ಲೋ ಸೈಕಲ್ ಮ್ಯಾಲ್ ಓಡಾದೇನೋ ಸರಿ, ಆದ್ರ ಸೈಕಲ್ಗೆ ಈ ಹೆಲ್ಮೇಟ್ ಯಾಕ"...?

ಯಾಕ ಅಂದ್ರ.......... ಈ ಪೊಲೀಸ್ರ ಕಾಟ ರಿ.... ಇವ್ರು  "ಗಾಡಿ ತಡೆಯೋದು, ಹೆಲ್ಮೆಟ್ ಎಲ್ಲೆ ಅಂತ್ ಕೇಳೋದು"!,  "ಗಾಡಿ ಕಾಗದಪತ್ರ ಎಲ್ಲೆ ಅದಾವು ಅಂತ ಕೇಳೋದು"! "ಯಾವಾಗರ ಸ್ವಲ್ಪ ಎಣ್ಣಿ ತಗೊಂಡು ಗಾಡಿ ಹೊಡ್ಕಂಡ್ ಹೋಗೋ ಹೊತ್ತಿನ್ಯಾಗ ಪೊಲೀಸ್ರು ತಡ್ದು ಚೆಕ್ ಮಾಡೋದು".... "ಹತ್ರಸಾವ್ರಾ ದಂಡಾ ಕಟ್ಟೂ ಅನ್ನೋದು...? ಅದ್ಕ ನಾ ಪೊಲೀಸ್ರ ಕುಟಾಗಾ ಹಾಕ್ಯಾಡೋದು" ಬ್ಯಾಡ ತಗಿ ಅಂತ್ ಸೈಕಲ್ ಹೊಡ್ಯಾಕ ಹತ್ತೇನಿ ನೋಡ್ರೀ.... "ಸೈಕಲ್ ಹೊಡೆಯೋ ಹೊತ್ತಿನ್ಯಾಗೂ ಪೊಲೀಸ್ರು ತಡ್ದು ಹೆಲ್ಮೇಟ್ ಎಲೈತಿ"?, ಸೈಕಲ್ ಕಾಗದ ಪತ್ರ ಎಲ್ಲೆ ಅದಾವು..? ಅಂತ ಕೇಳಬಹ್ದು ಅಂತ್ ಹೆಲ್ಮೇಟ್ ಹಾಕ್ಕೋಂಡು  ಹೊಂಟೇನಿ ನೋಡ್ರಿ....

.ನಿ... ಹಂಗೇಲ್ಲಾ ಹೆಲ್ಮೇಟ್ ಹಾಕೋವಲ್ಲಾ...? ವಿಷ್ಯಾ ಬ್ಯಾರೇ ಇರ್ಬೇಕು..? ಏನ್ಲೇ ಅದು....

ಹೌದ್ರೀ ...ಕಾಕಾ.... "ಗಾಡಿಮ್ಯಾಗ ಹೋಗೋ ಹೊತ್ತಿನ್ಯಾಗ ಸಾಲಗಾರರ್ ಕಣ್ಣ ತಪ್ಪಿಸಿ ಹೊಕ್ಕಿದ್ದೆ"...! "ಆದ್ರ ಈ ಸರ್ಕಾರ ಹೊಸಾ ಕಾನೂನು ತಂದಮ್ಯಾಗ ಕಷ್ಟಾಗೇತಿ ನೋಡ್ರೀ"...!. ಸೈಕಲ್ ಜೋರಾಗಿ ಹೊಡ್ಯಾಕ ಬರೋದಿಲ್ಲ..! ನೋಡ್ರೀ. ಸವ್ಕಾಶ ಹೋಗ್ಬೇಕು..? "ಮೊದ್ಲ ಊರತುಂಬಾ ಸಾಲಾಮಾಡ್ಕೋಂಡೇನಿ"....! "ಸಾಲಗಾರ್ರು ನನ್ನ ತಡ್ದು ಸಾಲ ಕೇಳ್ತಾರ ಅಂತ್ ಸೈಕಲ್ ಮ್ಯಾಲೆ ಹೋಗೋ ಹೊತ್ತಿನ್ಯಾಗೂ  ಸತ್ಗೀ ಹೆಲ್ಮೇಟ್ ಹಾಕ್ಕೋಂಡ ಓಡಾಡತೇನಿ". "ಹೆಲ್ಮೇಟ್ ಹಾಕ್ಕೋಂಡು ಎದ್ರೀಗೆ ಓಡಾಡಿದ್ರು ಸಾಲಗಾರ್ರು ಗುರ್ತು ಹಿಡಿಂಗಿಲ್ಲ.....! ಪೊಲೀಸ್ರ ಕಾಟಾನು ಇಲ್ಲಾ"..... ಮೇಲಾಗಿ ಸೈಕಲ್ ತುಳಿಯೋದಿಂದ್ರಾ ಆರೋಗ್ಯಾನು ಸರಿ ಇರತೈತಿ...! ಹೆಂಗೈತ್ರೀ ಐಡ್ಯಾ....?

ಬೇಷ ಐತಿ ಬೀಡು ಐಡ್ಯಾ... ಅಲ್ಲೋ ಬಸಣ್ಣ  ಈ ಕುಲದ್ದು ಹಾಡ ಯಾಕ್ ಹಾಡಾಕ ಹತ್ತಿಯೋ? ಅದು ಬೆಳಿಗ್ಗೆ... ಬೆಳಿಗ್ಗೆ ...?

ಅಲ್ರೀ ಕಾಕಾ ನೀವು ಮನಿಒಳ್ಗ  ಟಿವಿ ನೋಡೋದಿಲ್ಲನೂ....? ಪೇಪರ್ ಓದೋಂಗಿಲ್ಲನೂ.....ಟಿವ್ಯಾಗ, ಪೇಪರ್ನಾಗ ಪ್ಯಾಂಟ್‍ಲೆಸ್ ಪಕ್ಷದ ಮಂತ್ರಿ ಈಸ್ವರಪ್ಪ ನೀಡಿದ್ದ ಹೇಳ್ಕಿ ತೋರ್ಸ್ಯಾರ....ಹೆಂಗ್ಯ ಹೇಳೇತಿ ನೋಡಿರಿಲ್ಲ....!  "ಶಿವಮೊಗ್ಗಾದಾಗ ಮುಸ್ಲಿಂರು ನನ್ಗ ಓಟು ಹಾಕಿಲ"್ಲ.... "ನಿಜವಾದ ಭಾರತೀಯ ಮುಸ್ಲಿಂರಷ್ಟ ನನ್ಗ ಓಟ ಹಾಕ್ಯಾರ! ಅಂತ್ ಎಡಬಿಡಂಗಿ ತರ ಮಾತಾಡೇತಂತ್"...  "ಆರ್ಸಿ ಬಂದೈತಿ, ಮೇಲಾಗಿ ಮಂತ್ರಿ ಆಗೇತಿ.... ಇನ್ನೇನ ಬೇಕರೀ ಇದ್ಕ"!. "ಅದ್ಕ ಕುಲದಲ್ಲಿ ಮೇಲ್ಯಾವುದು ಅನ್ನೋಹಾಡು ನೆನ್ಪಾತು ಅದ ಹಂಗ್ ಅನುಕೋತ ಹೊಂಟಿ... ಅಷ್ಟ್ರಾಗ ನೀವು ಬಂದ್ರೀ......

ಅಲ್ಲೋ "ಈಸ್ವರಪ್ಪ ಹಿಂಗ್ ಮಾತಾಡೋದು ಹೊಸಾದೇನಲ್ಲ ಬಿಡೂ" !. ಅದ್ಕ ಇನ್ನು ಏನೇನರ ಬೇಕಾಗಿರಬೇಕು"...? "ತಾ ಏನ್ ಮಾತಾಡ್ತೇನಿ ಅನ್ನೋ ಕಬ್ರು ಅದ್ಕ ಇದ್ದಂಗ್ ಕಾಣೋಂಗಿಲ್ಲ"..? "ಅದ್ಕ ಸಿದ್ದ್ರಾಮಣ್ಣ ಈಸ್ವರಪ್ಪಗೆ ಮೆದ್ಳು ಇಲ್ಲಾ"? "ಅದ್ಕ ಅದು ಹೆಂಗ್ಯ ಬೇಕ ಹಂಗ್ ಮಾತನಾಡತೈತಿ" ಅಂತ್ ಹೇಳ್ಕಿ ನೀಡಿದ್ದು .... "ಹಾಳಾಗಿ ಹೋಗ್ಲಿ ಬಿಡು... ಅದ್ರ ನಾಲಗಿ ಹೆಂಗ್ಯ ಐತೋ... ಅದು ಹಂಗ್ ಮಾತನಾಡತೈತಿ"..! ಮಾತಾಡಿಕ್ಕೊಂಡು ಹಾಳಾಗಿ ಹೋಗ್ಲಿ ಬಿಡು .... ವiತ್ತ ರೈತರ ಸರಣಿ ಆತ್ಮಹತ್ಯೆ ನಡ್ಯಾಕಹತ್ಯಾವಂತಲ್ಲೋ.? ಏನ್ ಕೇಡಿಗ್ಗಾಲ ಬಂತೋ ಈ ನಾಡ್ಗೆ"....?

"ಹೌದ್ರೀ ಕಾಕಾ ಮೊನ್ನೆ ಮಂಡ್ಯಾದಾಗ, ಚಿಕ್ಕಮಗಳೂರಾಗ, ಹಾವೇರ್ಯಾಗ ರೈತ್ರು ಆತ್ಮಹತ್ಯೆಮಾಡಿಕೊಂಡಾರ ನೋಡ್ರೀ"... ಸುದ್ದಿ ಕೇಳಿ ನನಗು ಬಾಳಾ ಬ್ಯಾಸರಾತು ನೋಡ್ರೀ...!

"ಅನ್ನ ನೀಡೋ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರ್ದೋ... ರೈತರ ಶಾಪಾ ನಾಡಿಗೆ ಒಳ್ಳೇದಲ್ಲ....!.ರೈತ್ರೂ ಆತಹತ್ಯೆ ಮಾಡಿಕೊಂಡ್ರ ಭೂಮಿ ತಾಯಿ ಸಿಟ್ಟಾಗ್ತಾಳ"?.ಅದು ಅಲ್ದ "ಹಾವೇರಿ ಜಿಲ್ಲಾದಾಗ ಒಂದ ತಿಂಗ್ಳಾಗ ಇಪ್ಪತ್ತೇಳು ರೈತ್ರು ಆತ್ಮಹತ್ಯೆ ಮಾಡಿಕೊಂಡಾರ" ಅಂತ್ ಪೇಪರನ್ಯಾಗು ಸುದ್ದಿ ಬಂದಿತ್ತು...."ಅದ್ಕ ಅವಕಾಶ ಕೊಡಬಾರ್ದೋ. ಈ ಮೋದಿ-ಹೋದಿ ಸರ್ಕಾರ ಏನ್ಮಾಡ್ತಾವು."....? "ರೈತರ್ ನೆರ್ವಿಗೆ ಬರಕಾ ಇವ್ಗ್ರೇನ ದಾಡಿ ಆಗೇತಿ".....? "ರೈತ್ರು ಮನಿ ಕಳ್ಕೊಂಡು, ಹೊಲ್ದಾನ ಪೀಕು ಕಳ್ಕೋಂಡು ಒಂದ್ ನಯಾಪೈಸಾ ಪರಿಹಾರ ಇಲ್ದಂಗ್ ಮುಂದ ಹೆಂಗಪಾ ಅಂತ್ ಚಿಂತಿ ಹಚಗೊಂಡಾರ"!. "ಕೆಲವ್ರು ಆತ್ಮಸ್ಥೆರ್ಯಾ ಕಳಕೊಂಡು ಆತ್ಮಹತ್ಯಾ ಪತ್ರ ಬರದಿಟ್ಟು ಆತ್ಮಹತ್ಯೆಮಾಡಿಕೊಂಡಾರ".  "ನಿಮ್ಮ ಸರ್ಕಾರದ ಮಂದಿ ಕಿವಿ,ಕಣ್ಣು, ಮೂಗು ಇಲ್ದರಂಗ್ ಇದ್ರ ಹೆಂಗ್ಯ"? ಕಷ್ಟದಾಗಿರೋ ರೈತ್ರ ನೆರ್ವಿಗೆ ಬಂದು "ನೀವು ಆತ್ಮಸ್ಥೆರ್ಯಾ ಕಳ್ಕೋಬ್ಯಾಡ್ರೀ... ನಿಮ್ಮ ಜೊತಿಗೆ ಸರ್ಕಾರ ಐತಿ ಅಂತ್ ಧೈರ್ಯಾ ಹೇಳಾಕ ಇವ್ರ್ಗೇನು ದಾಡಿ ಆಗೇತಿ"....?

"ದಾಡಿ ಅಲ್ರೀ... ಇವುಕ್ಕ ಗೂದಿ ಹಾದತಿ"...?. "ಇಲೇಕ್ಷನ್ ಮುಂದ್ ಜಿಗ ಜಿಗ್ದ... ಕೈ ಅಲ್ಲಾಡ್ಸಿ... ಕಾಲ ಅಲ್ಲಾಡ್ಸಿ... ದೊಡ್ಡ ಭಾಷ್ಣಾಮಾಡಿದ್ದ ಈ ಜನಕ್ಕ ರೈತರು ನೆನ್ಪು ಮರ್ತ ಹೋಗೇತಿ"..? "ಹೋದ ತಿಂಗ್ಳೂ ಸುರ್ದಭಾರೀ ಮಳಿಗೆ ಬಿದ್ದ ಮನಿಗೆ, ಹಾಳಾದ ಬೆಳಿಗೆ ಇವ್ರೀಗೆ ಪರಿಹಾರದ ರೊಕ್ಕಾ ಕೊಡಾಕ ಆಗವಲ್ದು"....! "ಇನ್ನ ಮೋದಿ ಸಾಹೇಬ್ರಿಗೆ ದೇಶಾ ಸುತ್ತಾಡಾಕ ವೇಳ್ಯಾ ಸಾಲವಲು"್ದ....? "ಇನ್ನ ಅವ್ರು ರೈತರು ಕಷ್ಟಾ ಕೇಳಾಕ.... ನೋಡಾಕ... ಬರಬೇಕಂದ್ರ ಟವಿಯವ್ರು ಬರಬೇಕು.... ಪೇಪರನವರು ಬರಬೇಕು."..? "ಮೋದಿ ಸಾಹೇಬ್ರು ಮಳಿಂದಾ ಹಾಳಾಗಿರೋ ಬೆಳೆ ನೋಡಾಕ ಬಂದ ಹೊತ್ತಿನ್ಯಾಗ ಅವ್ರು ದುಭಾರಿ ಚೊಣ್ಣ-ಅಂಗಿಗೆ ರಾಡಿ ಹತ್ತಿದ್ರ"....? "ಸ್ವಲ್ಪ ತಡ್ರೀ.... ಇನ್ನು ಮಳಿ ಬರೋದು ಬಾಕಿ ಐತಿ ಅಂತ್ ಹವಾಮಾನ ಇಲಾಖೆಯವ್ರು ಹೇಳ್ಯಾರ"?. ಆ ಮಳಿ ಬಂದ್ರ ಇನ್ನು ಎಷ್ಟ ಮನಿ ಬಿಳ್ತಾವೋ.. ಎಷ್ಟು ಮಂದಿ ರೈತ್ರು ಆತ್ಮಹತ್ಯೆ ಮಾಡಿಕೊಳ್ಳತಾರೋ ಗೊತ್ತಿಲ್ಲ"!. "ಆವಾಗ ಒಮ್ಮೇಕ ಮೋದಿ ಸಾಹೇಬ್ರು ರಾಜ್ಯಕ್ ಬಂದು ಇಲ್ಲಿನ ವಾತಾವರ್ಣಾ ನೋಡಿಕೊಂಡು ಹೋಗಿ ಪರಿಹಾರ ಘೋಷಣೆ ಮಾಡ್ತಾರ"!.

ಅಲ್ಲಿ ಮಟಾ ಜನ್ರ ಗತಿ ಏನೋ..? "ನಿಮ್ಮ ರಾಜ್ಯ ಸರ್ಕಾರಂತು ಐತೋ... ಇಲ್ಲೋ ಅನ್ನೋಹಂಗಾಗೇತಿ"?. "ನಿಮ್ಮ ಸಿಎಂ ಕೇಂದ್ರದಾಗ ನಮ್ಮ ಸರ್ಕಾರ ಐತಿ, ಕೇಂದ್ರ ಸರ್ಕಾರದವ್ರು ಪರಿಹಾರ ಕೊಡ್ತಾರ ಅಂತ್ ಹೇಳ್ಕಿ ನೀಡೋದು ಬಿಟ್ರ ಏನು ಮಾಡವಲ್ದು"?. "ಆತ್ಲಾಗ ನೋಡಿದ್ರ ಮಂತ್ರಿಗಳು ಹೆಂಗ್‍ಬೇಕು ಹಂಗ್ ಹೇಳ್ಕಿ ನೀಡ್ಕೋತ ಹೊಂಟಾವು."..?. "ಅತೃಪ್ತ ಶಾಸಕರು ಒಂದ ಸಮ್ನ ಗೊಳೋ ಅಂತ್ ಅಳಾಕ ಹತ್ಯಾವಂತ್"...? "ಇಲೇಕ್ಷನ್ ಬಂದ್ರ ಹೆಂಗ್ಯರೀ ನಮ್ಮ ಬಾಳೇವು" "ನಮ್ಮಿಂದ ನಿಮ್ಮ ಸರ್ಕಾರ ಅಧಿಕಾರಕ್ಕ ಬಂದೈತಿ". "ನೀವು ಮಾತ್ರ ಅದಿಕಾರ್ದಾಗ ಮೇರ್ಯಾಕ ಹತ್ತೀರಿ", "ನಾವು ಮಾತ್ರ ಜನ್ರಿಗೂ ಬ್ಯಾಡಾಗೇವಿ.... ಊರ್ಗಿಗೂ ಬ್ಯಾಡಾಗೇವಿ".... "ಒಟ್ಟಿನ್ಯಾಗ  ನಾವು ಅತಂತ್ರ ಆಗೇವಿ ಅಂತ್ ಗೋಳಾಡಾಕ ಹತ್ಯಾವಂತ್...ಏನ್ಪಾ ನಿಮ್ಮ  ಸರ್ಕಾರದ ಹಕಿಕತ್ತು"...?

"ಅತ್ತ ಮಕ್ಕಳ ಕೈಯಾಗ ಒಂದ್ರುಪಾಯಿ ಕೋಡೋದು ಕಷ್ಟೈತ್ರಿ...?. "ಜನ್ರು ಕಷ್ಟದಾಗ ಅದಾರ ಅನ್ನೋದನ್ನು ಕೇಂದ್ರದವ್ರು, ರಾಜ್ಯ ದವ್ರು ತಿಳ್ಕಾಬೇಕು"?. "ಲಗೂನ ಜನ್ರ ಕಷ್ಟಕ ಇವ್ರು ಆದ್ರ ಇವ್ರು ಜನ್ರಮನಸ್ಸಿನ್ಯಾಗ ಇರ್ತಾರ"! .. "ಇಲ್ಲಾಂದ್ರ ಪ್ರವಾಹದ ನೀರಾಗ ಎಲ್ಲಾನೂ ಕೊಚಿಗಂಡ ಹೋದಂಗ ಮುಂದ ಇವ್ರು ಕೊಚಿಗಂಡ ಹೋಕ್ಕಾರ..ಬರ್ರೀ.. ಬರ್ರೀ ಹೊತ್ತಾತು, ಚಾ ಕುಡ್ತ ಮನಿಕಡಿಗೆ ಹೋಗೋಣ ಬರ್ರಿ ಎನ್ನುತ್ತಾ ಇಬ್ರು ಚಹಾದ ಅಗ್ಡಿ ಹೊಕ್ಕರು.