ಜನಸೇವಕರಾ? ಪಾಳೇಗಾರರಾ?

ಜನಸೇವಕರಾ? ಪಾಳೇಗಾರರಾ?

ಈ ರಾಜಕೀಯ ನಾಯಕರುಗಳ ಬಾಡಿ ಲಾಂಗ್ವೆಜ್ ನೋಡಿˌ ಏಷ್ಟೊಂದು ದುರಹಂಕಾರˌ ಅಸಡ್ಡೆ,ˌ ಸೊಕ್ಕು ˌ ಪಾಳೆಗಾರರಂತೆ ಕಾಣುತ್ತಿದ್ದಾರೆ. ದೇವೇಗೌಡˌ ಯಡಿಯೂರಪ್ಪˌ ಡಿ.ಕೆ.ಶಿ. ಆರ್ ಅಶೋಕˌ ರೇವಣ್ಣ ˌ ಸಿದ್ದರಾಮಯ್ಯˌ ಈಶ್ವರಪ್ಪ ˌಕುಮಾರಸ್ವಾಮಿˌ ರಮೇಶ ಕತ್ತಿ ...ಹೀಗೆ ಈ ನಾಯಕರೇಲ್ಲಾ ಜನ ಸೇವಕರಾ? ಜನ ಸೇವಕರಿಗೆ ಇರಬೇಕಾದಂತ ಸ್ವಲ್ಪವಾದರು ನಯ ವಿನಯˌ ವಿನಮ್ರತೆ ಯಾವುದು ಇಲ್ಲಾ. ಇವರೆಲ್ಲ ಮೊದಲಬಾರಿ ಚುನಾವಣೆ ಎದುರಿಸುವಾಗ ಇದ್ದ ವಿನಮ್ರತೆಗಳೆಲ್ಲ ಈಗ ಏಲ್ಲಿ ಹೋದವು?

ಬಹುತೇಕ ಜನರ ನಾಡಿಮಿಡಿತ ಗೊತ್ತಾಗಿರಬೇಕು.  ಹಣ ಬಲದಿಂದˌ ಜಾತಿˌ ತೋಳ್ಬಲದಿಂದ ಜನರನ್ನ ಏದುರಿಸುವ ಟ್ರಿಕ್ಸ್ ಅರಿತ ಪರಿಣತರಂತೆ ಕಾಣುತ್ತಿದ್ದಾರೆ. ಇನ್ನು ಮೋದಿಯವರಂತು ಅಮೇರಿಕದಿಂದ ಈಗ ತಾನೇ ಪರ್ಸನಾಲಿಟಿ ಡೆವಲಮೆಂಟ್ ಕೋರ್ಸ್ ಮುಗಿಸಿಕೊಂಡವರಂತೆ ಬಂದಿದ್ದಾರೆ. ಅವರು ಕೈಬೀಸುವುದರಿಂದ ಹಿಡಿದುˌ ಅವರು ಮಾತನಾಡುವ ಶೈಲಿˌ ಡ್ರೆಸ್ ಸೆನ್ಸ್ ˌ ಬಾಡಿ ಲಾಂಗ್ವೇಜ್ ಏಲ್ಲಾ ಪರ್ಪೆಕ್ಟ್ . ಆದರೆˌ ಏನೂ ಮಾಡುವುದು?ಮಾತನಾಡುವುದರಲ್ಲಿ ಬಹುತೇಕ ಸುಳ್ಳೇ ಹೆಚ್ಚಾಗಿರುತ್ತದೆ. ರಾಹುಲ್ ಪರವಾಗಿಲ್ಲ ಪೆದ್ದನಂತೆ ಕಂಡರು ಒಂದಿಷ್ಟು ಪ್ರಮಾಣಿಕತೆ ಕಾಣುತ್ತದೆ. ಇನ್ನು ಮಂತ್ರಿ ರೇವಣ್ಣನ ನೋಡಿದ್ರೆ ಅಸಡ್ಡೆ ಎನ್ನಿಸುತ್ತದೆ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಲಾಗಿ ತಮ್ಮ ಲಿಂಬೆ ಹಣ್ಣು ˌ ವಾಸ್ತು ಶಾಸ್ತ್ರ ˌ ಸಂಖ್ಯಾಶಾಸ್ತ್ರ ˌ ಜ್ಯೋತೀಷ್ಯˌ ರಾಹು ಕಾಲ ಅಬ್ಬ ! ಅಬ್ಬಾ!! ಇವುಗಳನ್ನೆಲ್ಲ ಯಾವ ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಾರೆ. ಇವರೇನ್ನೂ ಜನ ಸೇವಕರಾ ? ಲೋಕೊಪಯೋಗಿ ಮಂತ್ರಿನಾ? ಯಾವುದಾರು ಜ್ಯೊತೀಷ್ಯದ ಅಂಗಡಿ ಮಾಲೀಕನಂತೆ ಇದ್ದಾರೆ. ಭಾರತದ ಸಂವಿಧಾನದಲ್ಲಿ ಜನರಲ್ಲಿ ಬಹಿರಂಗವಾಗಿ ಮೂಢ ನಂಬಿಕೆˌ ಕಂದಾಚಾರಗಳನ್ನು ಬಿತ್ತರಿಸುವದು ಮತ್ತು ಪ್ರಚಾರ ಮಾಡುವದು ಕಾನೂನು ಪ್ರಕಾರ ಶಿಕ್ಪಾರ್ಹ ಅಫರಾಧವಾಗಿದೆ. ಇದನ್ನೆಲ್ಲಾ ಯಾರು ಹೇಳುವದು? ಪಕ್ಕಾ ಪಾಳೆಗಾರರಂತೆ ಮೆರೆಯುತ್ತಿರುವ ಇವರುಗಳನ್ನು ಜನಗಳು ಇನ್ನು ಸಹಿಸಿಕೊಂಡುˌ ಪೊಷಿಸಿಕೊಂಡು ಆರಿಸಿಕೊಂಡು ಬರುತ್ತಿರುವದು ನೋಡಿದ್ರೆ ˌ ನಮ್ಮ ಗೋರಿ ನಾವೇ ತೋಡಿಕೊಳ್ಳುತ್ತಿದ್ದೆವೆ...ಹೊಸ ನಾಯಕತ್ವ ˌ ಹೊಸ ಬದಲಾಣೆ ತನ್ನಿ !