ಸ್ಯಾಂಡಲ್ ವುಡ್ ನಲ್ಲೀಗ ಪೊಲೀಸ್ ಬೇಬಿ ಹವಾ…

ಸ್ಯಾಂಡಲ್ ವುಡ್ ನಲ್ಲೀಗ ಪೊಲೀಸ್ ಬೇಬಿ ಹವಾ…

ಇತ್ತೀಚಿನ ದಿನಗಳಲ್ಲಿ ಸೂಪರ್ ಹಿಟ್ ಆಗಿರೋ ಸಾಂಗ್ಸ್ ಪೈಕಿ ತಮಿಳಿನ ರೌಡಿ ಬೇಬಿ ಸಾಂಗ್ ಕೂಡ ಒಂದು. ಇದೇ ಮಾದರಿಯ ಕನ್ನಡ ಹಾಡೊಂದು ಬಿಡುಗಡೆಯಾಗಿದೆ. ಅದೇ ರುಸ್ತುಂ ಸಿನಿಮಾದ ಪೊಲೀಸ್ ಬೇಬಿ ಸಾಂಗ್. 

ಸ್ಯಾಂಡಲ್ವುಡ್ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಯಸ್ಸು 50 ಗಡಿ ದಾಟಿದ್ರೂ ದೊಡ್ಮನೆಯ ಶಿವಣ್ಣನ ಎನರ್ಜಿ ಚೂರು ಕಡಿಮೆಯಾಗಿಲ್ಲ. ಯವಪ್ರತಿಭೆಗಳೇ ನಾಚುವಂತೆ ಶಿವಣ್ಣ ಈಗಲೂ ನಟನೆ, ಡ್ಯಾನ್ಸಿಂಗ್ಎಲ್ಲಾದಕ್ಕೂ ಸೈ. ರವಿವರ್ಮಾ ನಿರ್ದೇಶನದಲ್ಲಿ ಮೂಡಿಬರ್ತಿರೋ ರುಸ್ತುಂ ಚಿತ್ರದ, ಯು ಆರ್ಮೈ ಪೊಲೀಸ್ ಬೇಬಿ ಸದ್ಯ ಪಡ್ಡೆಗಳ ಬಾಯಲ್ಲಿ ಹರಿದಾಡ್ತಿದೆ. ಕಲರ್ಫುಲ್ಸನ್ಗ್ಲ್ಯಾಸ್‌, ಬಣ್ಣ ಬಣ್ಣದ ಡ್ರೆಸ್ ತೊಟ್ಟು ಲಕ್ಸುರಿ ಸೆಟ್ನಲ್ಲಿ ಶಿವಣ್ಣ ಹಾಗೂ ಶ್ರದ್ಧಾ ಪೊಲೀಸ್ ಬೇಬಿ ಸಾಂಗ್ಗೆ ಧಾಮ್ ಧೂಮ್ಅಂಥ ಹೆಜ್ಜೆ ಹಾಕಿದ್ದಾರೆ.

ರುಸ್ತುಂ ಸಿನಿಮಾದ ರೌಡಿ ಬೇಬಿ ಸಾಂಗ್‌ ಗೆ ಎ.ಪಿ ಅರ್ಜುನ್ ಲಿರಿಕ್ಸ್ ಬರೆದಿದ್ದಾರೆ. ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಕಂಠದಲ್ಲಿ ಸಾಂಗ್ ಮೋಡಿ ಮಾಡ್ತಿದೆ. ಇಮ್ರಾನ್ ಸರ್ದಾರಿಯ ಡ್ಯಾನ್ಸ್ ಕೊರಿಯಾಗ್ರಫಿಯ ಪೊಲೀಸ್ ಬೇಬಿ ಸಾಂಗ್ ಅನ್ನು ಇದುವರೆಗೂ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಂದೊಳ್ಳೆ ಟಪ್ಪಾಂಗುಚ್ಚಿ ಬೀಟ್ ಸಾಂಗ್‌ಗೆ ಪೊಲೀಸ್ಬೇಬಿ ಸೇರ್ಪಡೆಯಾಗಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ರುಸ್ತುಂ

ಸಿನಿಮಾದಲ್ಲಿ ಶಿವಣ್ಣ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ಮಯೂರಿ, ಶಿವರಾಜ್ ಕೆ. ಆರ್ ಪೇಟೆ ಸೇರಿದಂತೆ ಬಹುತಾರಾಗಣ ಸಿನಿಮಾದಲ್ಲಿದೆ. ಜೂನ್ 14 ರಂದು ಖಡಕ್ ರುಸ್ತುಂ ಸಿನಿಮಾವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.

ಪೊಲೀಸ್ ಬೇಬಿ ಸಾಂಗ್