ಹಿಂಸಾರಭಸಮತಿದೈವ!!

ಆಕಲ್ಲಿನ ಮೇಲ್ಬಾಗದಲ್ಲಿ ಯಾವುದೋ  ದೇವಿಯ ಉಬ್ಬುಶಿಲ್ಪ. ಅದರ ಅಕ್ಕಪಕ್ಕ, ಮೇಲುಗಡೆ ಇನ್ಯಾವ್ಯಾವುದೋ ಶಿಲ್ಪಗಳು. ಕೆಳಗಡೆಯೆಲ್ಲಾ ಅಡ್ಡಕ್ಕೆ ಸಾಲಾಗಿ ಅಕ್ಷರ ಕೊರೆದಂತಹ ರಚನೆಗಳು. ನನಗೆ ಅದನ್ನು ಕಂಡು ವಿಸ್ಮಯವಾಗುತ್ತಿತ್ತು. ಅಲ್ಲೇ ಪಕ್ಕದಲ್ಲೇ ಸೂಜಿಮಲ್ಲಿಗೆಯ ಬಳ್ಳಿಯೊಂದನ್ನು ನೆಟ್ಟಿದ್ದರು. ಅದು ಮೇಲಕ್ಕೇರಿ ಗುಡಿಯ ಮೇಲೆಲ್ಲಾ ಹಂದರದ ಹಾಗೆಹಬ್ಬಿತ್ತು! ಮಾಸ್ತೇವಿ ನೆತ್ತಿಗೆ ನೆರಳನ್ನಲ್ಲದೇ ಯಥೇಚ್ಛವಾಗಿ ಹೂಮಳೆ ಗರೆಯುತ್ತಿತ್ತು! ಸಂಜೆಯಾಗುತ್ತಿದ್ದಂತೆ ಮಲ್ಲಿಗೆಯ ಘಮಲು ಇಡೀಓಣಿಯನ್ನು ತುಂಬುತ್ತಿತ್ತು.

ಹಿಂಸಾರಭಸಮತಿದೈವ!!

ಮಳೆನಿಂತರೂ ಮರದ ಹನಿನಿಲ್ಲದು ಎಂಬಂತೆ ಅಜ್ಜಿ ಹೋದರೂ ಅವಳು ಹೇಳಿದ ದಶಾವತಾರದ ಕತೆಗಳು ಮನದಲ್ಲಿತೊಟ್ಟಿಕ್ಕ ತೊಡಗಿದವು. ಪರಶುರಾಮನ ರಕ್ತಸಿಕ್ತ ಕೊಡಲಿ, ವರಾಹನ ಕೋರೆ, ಉಗ್ರನರಸಿಂಹನ ಚೂಪಾದನಖಗಳು…ನನ್ನನ್ನು ನಿದ್ದೆಯಲ್ಲೂ ಬೆಚ್ಚಿ ಬೀಳಿಸುತ್ತಿದ್ದವು. ಇದರೊಂದಿಗೆ ನಮ್ಮಜ್ಜಿ ಹೇಳಿದ ಶಿರಿಯಾಳ ಶೆಟ್ಟಿ- ಚಂಗಳೆಯರ ಕತೆಯಂತೂ ನನ್ನನ್ನು ಇನ್ನಿಲ್ಲದ ವೇದನೆಗೆ ಗುರಿಮಾಡಿತು. ಪುಟ್ಟ ಮಗುವಿನ ತಲೆಕಡಿದು, ಅದರ ಮಾಂಸದಿಂದ ಮಾಡಿದ ಅಡುಗೆಯನ್ನು ಬೇಡುವ ದೇವರು ಎಂತಹ ಕ್ರೂರಿ ಎನಿಸುತ್ತಿತ್ತು. ನಮ್ಮೂರಿನ ವೀರಭದ್ರ ದೇವರ ಜಾತ್ರೆಯಲ್ಲಿ ಪುರವಂತರೊಂದಿಗೆ ಹರಕೆ ಹೊತ್ತ ಹಲವಾರು ಜನರೂ ನಿಗಿನಿಗಿ ಎನ್ನುವ ಕೆಂಡಗಳ ಮೇಲೆ ನಡೆಯುತ್ತ ಅಗ್ನಿ ತುಳಿಯುವ ದೃಶ್ಯವಂತೂ ಮೈಗೂದಲನ್ನು ನೆಟ್ಟಗಾಗಿಸುತ್ತಿತ್ತು! ಹರಕೆ ಹೊತ್ತ ವೀರಭದ್ರನ  ಭಕ್ತರುಗಲ್ಲ, ನಾಲಿಗೆ, ಮುಂಗೈ, ಮೊಣಕಾಲ ಸಂದಿನಲ್ಲಿ ಶಸ್ತ್ರ ಹಾಕಿಕೊಳ್ಳುವುದನ್ನು ನೋಡಲಾಗದೇ ಭೀತಿಯಿಂದ ಕಣ್ಣು ಮುಚ್ಚಿ ಕೊಳ್ಳುತ್ತಿದ್ದೆ!

ನಮ್ಮ ಇಬ್ಬರು ದೊಡ್ಡಪ್ಪಂದಿರಲ್ಲಿ, ಒಬ್ಬರು ದೊಡ್ಡಪ್ಪ ಸಹ ಬೆಟಗೇರಿಯಲ್ಲಿಯೇ ನೆಲೆಸಿದ್ದರು. ಅವರ ಮನೆ ತುಂಬಾ ಹೆಣ್ಣುಮಕ್ಕಳು. ಅವರಲ್ಲಿ ಒಬ್ಬಳು ನನ್ನ ಸಹಪಾಠಿಯೂ ಆಗಿದ್ದಳು. ನಾನು ಶನಿವಾರ, ಭಾನುವಾರ ಅವರ ಮನೆಗೆ ತಪ್ಪದೇ ಹೋಗುತ್ತಿದ್ದೆ. ನನ್ನ ಅಕ್ಕಂದಿರ ಜೊತೆ ಖುಷಿಯಾಗಿ ಕಾಲ ಕಳೆದು ಬರುತ್ತಿದ್ದೆ. ದೊಡ್ಡಮ್ಮ ತುಂಬಾ ಮೃದು ಸ್ವಭಾವದರು. ಅವರ ಮುಖ ಯಾವಾಗಲೂ ಪ್ರಸನ್ನತೆಯಿಂದ ಕೂಡಿರುತ್ತಿತ್ತು. ತಂಗಾಳಿಯಂತ  ಹನಗು ಅವರ  ಮುಖದ  ಮೇಲೆ ಸದಾ ಲಾಸ್ಯವಾಡುತ್ತಿತ್ತು. ದೊಡ್ಡಪ್ಪನ ಮನೆಯಲ್ಲಿ ಮದುವೆ-ಸೀಮಂತ.. ಹೀಗೆ ಯಾವುದೇ ಕಾರ್ಯನಡೆದರೂ ದೊಡ್ಡಮ್ಮ  ಅವ್ವನನ್ನೇ  ಮುಂದಿಡುತ್ತಿದ್ದಳು. ದೊಡ್ಡಪ್ಪನ ಮನೆಗೆ ಹೋಗುವುದಕ್ಕೆ ನನಗೆ ಇನ್ನೂ ಒಂದು ಕಾರಣವಿತ್ತು. ಅದು ಅವರ ಮನೆ ಪಕ್ಕದಲ್ಲಿರುವ ‘ಮಾಸ್ತೇವಿ’ ಗುಡಿ! ದೊಡ್ಡಪ್ಪನ ಮನೆಯ ಎಡಗಡೆ ಒಂದು  ಚಿಕ್ಕಗುಡಿಯಿತ್ತು. ಗುಡಿಯೆಂದರೆ ಅದಕ್ಕೆ  ಗೋಪುರ-ಕಲಶ ಒಂದೂ ಇರಲಿಲ್ಲ! ಅಸಲು ಅದಕ್ಕೆ ಮೇಲಾರವೇ( ಮೇಲ್ಫಾವಣಿ) ಇರಲಿಲ್ಲ! ಸುಮಾರು ನಾಲ್ಕೈದು ಅಡಿಉದ್ದ-ಅಗಲದ ಆಗುಡಿಯ ಮಧ್ಯದಲ್ಲಿ ಮೂರ್ನಾಲ್ಕು ಅಡಿ ಎತ್ತರದ ಚಪ್ಪಟೆಯಾಕಾರದ, ದಪ್ಪ ಹಲಗೆಯಂತಹ ಕಲ್ಲು ಎದ್ದು ನಿಂತಿತ್ತು.

ಆಕಲ್ಲಿನ ಮೇಲ್ಬಾಗದಲ್ಲಿ ಯಾವುದೋ  ದೇವಿಯ ಉಬ್ಬುಶಿಲ್ಪ. ಅದರ ಅಕ್ಕಪಕ್ಕ, ಮೇಲುಗಡೆ ಇನ್ಯಾವ್ಯಾವುದೋ ಶಿಲ್ಪಗಳು. ಕೆಳಗಡೆಯೆಲ್ಲಾ ಅಡ್ಡಕ್ಕೆ ಸಾಲಾಗಿ ಅಕ್ಷರ ಕೊರೆದಂತಹ ರಚನೆಗಳು. ನನಗೆ ಅದನ್ನು ಕಂಡು ವಿಸ್ಮಯವಾಗುತ್ತಿತ್ತು. ಅಲ್ಲೇ ಪಕ್ಕದಲ್ಲೇ ಸೂಜಿಮಲ್ಲಿಗೆಯ ಬಳ್ಳಿಯೊಂದನ್ನು ನೆಟ್ಟಿದ್ದರು. ಅದು ಮೇಲಕ್ಕೇರಿ ಗುಡಿಯ ಮೇಲೆಲ್ಲಾ ಹಂದರದ ಹಾಗೆಹಬ್ಬಿತ್ತು! ಮಾಸ್ತೇವಿ ನೆತ್ತಿಗೆ ನೆರಳನ್ನಲ್ಲದೇ ಯಥೇಚ್ಛವಾಗಿ ಹೂಮಳೆ ಗರೆಯುತ್ತಿತ್ತು! ಸಂಜೆಯಾಗುತ್ತಿದ್ದಂತೆ ಮಲ್ಲಿಗೆಯ ಘಮಲು ಇಡೀಓಣಿಯನ್ನು ತುಂಬುತ್ತಿತ್ತು. ನಾವು ಆಬಳ್ಳಿಯಲ್ಲಿನ ಹೂವುಗಳನ್ನು ಬಿಡಿಸಿ ಅಕ್ಕಂದಿರ ಮುಂದೆ ಸುರಿದರೆ ಅವರು ಸೊಗಸಾಗಿ ಕಟ್ಟಿ ಮಾಲೆ ಮಾಡಿಕೊಡುತ್ತಿದ್ದರು. ನಾವು  ತಲೆತುಂಬಾ ಹೂ ಮುಡಿದು ಸಂಭ್ರಮಿಸುತ್ತಿದ್ದೆವು!

ಆ ಓಣಿಯ ಜನವೆಲ್ಲಾ ಪ್ರತಿದಿನ ಬೆಳಗ್ಗೆ ಮಾಸ್ತೇವಿಯ ಗುಡಿಯ ಬಳಿಬಂದು ಒಂದು ನಮಸ್ಕಾರ ಹಾಕಿಯೇ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಗುಡಿಗೆ ಪುಜಾರಿ ಅಂತ ಯಾರೂ ಇರಲಿಲ್ಲ. ಓಣಿಯ ಜನರಲ್ಲಿಯೇ ಮೊದಲು ಗುಡಿಗೆ ಬಂದ ಯಾರಾದರೊಬ್ಬರು ಒಂದಿಷ್ಟು ಕುಂಕುಮವಿಟ್ಟು, ಎರಡು ಊದುಬತ್ತಿ ಬೆಳಗಿ ಹೋಗುತ್ತಿದ್ದರು. ಒಂದು ಬಾರಿ ಓಣಿಯ ಯಾರೋ ಒಬ್ಬರು ಮಾಸ್ತೇವಿ ಹೆಸರಿನಲ್ಲಿಅನ್ನಸಂತರ್ಪಣೆ ಮಾಡುವ ಕೈಂಕರ್ಯ ಕೈಗೊಂಡರು. ಗುಡಿ ರಸ್ತೆಯ ಬದಿಯಲ್ಲಿಯೇ ಇದ್ದುದರಿಂದ ಮುಂದೆಜಾಗವಿರಲಿಲ್ಲ. ಹೀಗಾಗಿ ಆಓಣಿಯ ಒಂದುದೊಡ್ಡ ವಠಾರದಲ್ಲಿ ಅಡುಗೆ, ಊಟಕ್ಕೆ ವ್ಯವಸ್ಥೆ ಮಾಡಲಾಯಿತು. ಆವಠಾರದ ಒಂದು ಮೂಲೆಯಲ್ಲಿ ಓಣಿಯ ಹೆಂಗಳೆಯರೆಲ್ಲಾ ಅಡುಗೆ ತಯಾರಿಗಾಗಿ ದಿನಸಿ ಸ್ವಚ್ಛ ಗೊಳಿಸುವುದು, ಸೊಪ್ಪುಸೋಸುವುದು, ತರಕಾರಿ ಹೆಚ್ಚುವುದು, ನೀರುತುಂಬುವುದು.. ಮೊದಲಾದ ಕೆಲಸಗಳಲ್ಲಿ ತೊಡಗಿಕೊಂಡರು. ಅವರಲ್ಲಿ ಒಬ್ಬ ಸುಂದರವಾದ ಮಹಿಳೆ- ಸುಮಾರು ಮೂವತ್ತರ ಆಸುಪಾಸಿನ ಹೆಣ್ಣು ಮಗಳು ಆಗುಂಪಿನ ನಡುವೆ ಓಡಾಡುತ್ತ“ನನ್ನಗಂಡ ಭರಮದೇವ್ರು. ಅಂವನನ್ನ ಕರ್ಕೊಂಡು ಹೋಗಾಕ ಬರ್ತಾನ. ನಾ ಅಂವ್ನ ಜೋಡಿ ಹೋಕ್ಕೇನಿ..”ಎನ್ನುತ್ತಾ ಸಂಭ್ರಮದಿಂದ ಓಡಾಡುತ್ತಿದ್ದಳು. ಗುಂಪಿನ ಹೆಂಗಳೆಯರು“ಹೌದಾ! ಯಾವಾಗ ಬರ್ತಾನಾ? ಏನೇನ್ತರ್ತಾನಾ? ಬಸ್ಸಿಗೆ ಹೋಕ್ಕೀರೋ, ರೈಲಿಗೆ ಹೋಕ್ಕೀರೋ?”ಎಂದಲ್ಲಾ ಕಿಚಾಯಿಸುತ್ತಿದ್ದರು. “ನಾಳೆಬರ್ತಾನಾ. ನನಗ ಹೂವಿನ ಹಾರಾತರ್ತಾನಾ. ನನ್ನ ಪಲ್ಲಕ್ಯಾಗ ಕರ್ಕೊಂಡ್ಹೊಕ್ಕಾನಾ” ಅವಳು ಮತ್ತಷ್ಟು ಸಂಭ್ರಮಿಸುತ್ತ ನುಡಿಯುತ್ತಿದ್ದಳು. ಅವಳ ಮಾತಿಗೆ ಅವರೆಲ್ಲಾ ಗೊಳ್ಳೆಂದು ನಗುತ್ತಿದ್ದರು. ಆಹೆಂಗಸು ಅದ್ಯಾವುದನ್ನೂ ಲೆಕ್ಕಿಸದೆ ತನ್ನದೇ ಸಂಭ್ರಮದಲ್ಲಿ ತಾನಿದ್ದಳು! ಕೊನೆಗೆ ಆ ಗುಂಪಿನಲ್ಲಿನ ಒಬ್ಬ ಅಜ್ಜಿ ಅವರನ್ನೆಲ್ಲ ಬೈದು ಸುಮ್ಮನಿರಿಸಿದಳು.

ಸ್ವಲ್ಪ ಹೊತ್ತಿಗೆಲ್ಲಾ ನಡು ವಯಸ್ಸಿನ ಹೆಂಗಸೊಬ್ಬಳು ಬಂದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಅವಳನ್ನು ಒತ್ತಾಯದಿಂದ ಎಳೆದುಕೊಂಡು ಹೋದಳು. “ಪಾಪ, ಇದುಎಲ್ಲಾ ರಂಗಿದ್ದಿದ್ರ ಗಂಡನ ಮನ್ಯಾಗ ಚಂದಂಗ ಬಾಳೆ ಮಾಡ್ಕೊಂಡಿರ್ತಿತ್ತು. ಕರ್ಪೂರ ಗೊಂಬ್ಯಾಗೈತಿ ಹುಡುಗಿ. ಇದ್ದಂತೋರುಬ್ಯಾರೆ! ರಾಜಕುಮಾರ ನಂಥಾ ಹುಡುಗುನ್ನ ಹುಡುಕಿ ಮಾಡಂಗಿದ್ರು! ನಸೀಬ ನೋಡು ಹ್ಯಾಂಗೈತಿ !! ಹಲ್ಲಿದ್ದೋರ್ಗೆ ಕಡ್ಲಿಲ್ಲ; ಕಡ್ಲಿದ್ದೋರ್ಗೆಹಲ್ಲಿಲ್ಲ! ಎಲ್ಲಾ ಇದಿಯಮ್ಮ ನಾಟಾ!” ಆ ಅಜ್ಜಿ ನಿಟ್ಟುಸಿರಿಟ್ಟು ಮರುಗಿದಳು. ನನಗೆ ಕುತೂಹಲವಾಗಿ ಕೇಳಿದೆ “ಅವ್ರು ಹಂಗ್ಯಾಕ ದಾರಜ್ಜಿ?”“ಅಯ್ಯ  ಅದೊಂದು ದೊಡ್ಡ ಕತಿ. ಇಕಿ ಸಣ್ಣೇಕಿದ್ದಾಗ ಎಲ್ಲಾ ಹುಡುಗ್ಯಾರಂಗ  ಸಾಲಿಗೆ ಹೋಕ್ಕೋಂತ, ಆಟಾ ಆಡ್ಕೋಂತ ಇದ್ಲು. ಆದ್ರ  ದೇವ್ರಮ್ಯಾಲ  ಒಂದೀಟ  ಜಾಸ್ತಿ ಅನ್ನಂಗಲಕ್ಷ್ಯಾ ಇತ್ತು. ಅದನ್ನ ನೋಡಿ ಎಲ್ಲಾರ್ಗೂ ಖುಷಿನೂ ಇತ್ತು. ಆದ್ರ ದೊಡ್ಡೇ ಕ್ಯಾದಂಗೆಲ್ಲಾ ಅಕಿಗೆ ದೇವ್ರ ಖಯಾಲಿ ಹೆಚ್ಗಿನ ಆಕ್ಕೊಂತ ಹೋತು. ಅವ್ರಮನಿ ದೇವ್ರು ಭರಮದೇವ್ರ ಗುಡಿಗೆ ಹೋಗ್ದ ಒಂದ್ಹನಿ ನೀರೂ ಬಾಯಾಗ ಹಾಕ್ತಿದ್ದಿಲ್ಲಾ. ಇದೆಲ್ಲಾನೂ ಅಂಥಾದೊಡ್ಡ ಸಂಗ್ತಿನೂ ಅನ್ಸಲಿಲ್ಲಾ ಯಾರ್ಗೂ. ಆದ್ರ ಅಕಿಮದುವಿ ವಿಚಾರಾ  ಬಂತನೋಡು ಆವಾಗ ಶುರುವಾತು ನೋಡ ಅವ್ರ ಮನಿ ಮಂದಿ ಪಿಕಲಾಟಾ. ನೋಡಾಕ ಗಾಜಿನಗೊಂಬಿ ದ್ದಂಗದಳಾ, ರಗಡಆಸ್ತಿಪಾಸ್ತಿಇದ್ದ ಮನೆತನಬ್ಯಾರೆ! ಅಕಿನ್ನ ಮಾಡಕೊಳ್ಳಾ ಕನಾಮುಂದತಾ ಮುಂದ ಅಂತವರ ಗೋಳಬಂದ್ವು. ಆದ್ರ ಇಕೀದು ಒಂದವರಾತ “ನಂದು ಭರಮದೇವ್ರ ಜತಿಲಗ್ನಾಗೈತಿ. ಭರಮದೇವ್ರ ನನ್ನ ಗಂಡ. ನನ್ಗ ಇನ್ನೊದ್ಸಲ ಹ್ಯಾಂಗಲಗ್ನಾ ಮಾಡ್ತೀರಿನೀವು?!” ಅಂತ! ಮನ್ಯಾಗ ಎಲ್ಲಾರೂ ಹೌಹಾರಿದ್ರು ಅಕಿ ಮಾತಕೇಳಿ.  ಎಲ್ಲಾರೂ ತಿಳಿಸಿ ಹೇಳೂದಾತು. ಅಕಿ ಸ್ವಾದರ ಮಾವಗೋಳೂ ಬಂದು ಹೇಳಿನೋಡಿದ್ರು. ಅಕಿಪಟ್ಟು ಬಿಡ್ಲಿಲ್ಲ. ಕಡೀಕ ಅವ್ರ ಮನಿ ಗುರುಗಳು ಅಥಣಿ ಅಜ್ಜಾರ್ನ ಕರಿಸಿ ಹೇಳೀದ್ರೂ ಬಗೀ ಹರೀಲಿಲ್ಲ. ಮತ್ತಿನ್ನ ಏನ್ಮಾಡ್ಯಾರು? ಅಕಿನ್ನ ಹಣೇಬಾರ ಅಂತ ಸುಮ್ನಾದ್ರು. ಆದ್ರ ಹಡದ ಹೊಟ್ಟಿ ಕೇಳ್ಬೇಕಲ್ಲ! ತಾಯಿಗೆ ಕಷ್ಟ ಆಕ್ತೈತಿ ಪಾಪ, ಏನ್ಮಾಡೂದು…“ಅಜ್ಜಿ ದೀರ್ಘ ವಿವರಣೆಯನ್ನು ನೀಡಿ ಮತ್ತೊಮ್ಮೆ ನಿಟ್ಟುಸಿರಿಟ್ಟಳು.

ನನಗೆ ಅಚ್ಚರಿಯಾಯಿತು ಅಜ್ಜಿಯ ಮಾತುಕೇಳಿ. ಇಂತಹವರೂ ಇರುತ್ತಾರಾ?! ಅವಳು ಹೀಗೇಕೆ ವರ್ತಿಸುತ್ತಿರಬಹುದು? ಎಂಬ ಪ್ರಶ್ನೆಗಳು ಮನದಲ್ಲೆದ್ದರೂ ಯಾರನ್ನೂ ಕೇಳಲು ಹೋಗಲಿಲ್ಲ. ಈ ಅಜ್ಜಿಯಾದದ್ದಕ್ಕೆ ಇಷ್ಟನ್ನಾದರೂ ಹೇಳಿದಳು, ಅವ್ವ ನನ್ನೇನಾದರೂ ಕೇಳಿದ್ದರೆ “ದೊಡ್ಡೋರ್ಸುದ್ದಿ ನಿನಗ್ಯಾಕ? ದೊಡ್ಡ ಹಿರೇ ಮನಷ್ಯಾಳಾಗಿಯನ ಇಂಥಾವೆಲ್ಲಾ ಕೇಳಾಕ?  ಹೋಗು ಹೊರಗ” ಎಂದು ಗದರಿಸುತ್ತಿದ್ದುದು ಖಾತ್ರಿಯಿತ್ತು! ಹೀಗಾಗಿ ನಾನು ಸುಮ್ಮನೇ ಊಟ ಮುಗಿಸಿ ಅದೇ ಗುಂಗಿನಲ್ಲಿ ಮನೆಗೆ ಬಂದೆ. ಸಂಜೆ ಅಪ್ಪ ಲೈಬ್ರರಿಗೆ ಹೋಗಲು ಕಾಯುತ್ತಿದ್ದ. ನಾನು ಮಾಸ್ತೇವಿ ಗುಡಿಯ ಅನ್ನಸಂತರ್ಪಣೆಯ  ವಿವರಗಳನ್ನು ಹೇಳುತ್ತ ಅಪ್ಪನ ಜೊತೆ ಹೆಜ್ಜೆ ಹಾಕಿದೆ. ಮಾಸ್ತೇವಿ ಗುಡಿಯ ಸ್ವರೂಪ, ಅದರೊಳಗಿನ ಚಪ್ಪಟೆ ಕಲ್ಲಿನಲ್ಲಿಯ ಉಬ್ಬುಶಿಲ್ಪ.. ಮುಂತಾದವುಗಳು ಮಾಸ್ತೇವಿಯನ್ನುಇತರಗುಡಿ-ದೇವರಿಗಿಂತ ಭಿನ್ನವಾಗಿಸಿತ್ತು. ನಾನು ಇದರ ಬಗ್ಗೆ ಅಪ್ಪನನ್ನು ಕೇಳಿದೆ. “ಮಾಸ್ತಿ ಕಲ್ಲಂದ್ರ ಸತಿಹೋದ ಹೆಣಮಗಳ ನೆನಪಿಗೆ ನೆಟ್ಟ ಕಲ್ಲಿರ್ತೈತಿಪುಟ್ಟಾ. ಅದನ್ನ ಜನಾಎಲ್ಲಾ ಮಾಸ್ತೇವಿ ಅಂತ ಪೂಜೆ ಮಾಡ್ತಾರಾ.”ಅಪ್ಪ ವಿವರಿಸಿದ. “ಸತೀ ಹೋಗೂ ದಂದ್ರ ಏನಪ್ಪಾ?”ನಾನು ಕೇಳಿದೆ. “ಹಿಂದಿನ ಕಾಲ್ದಾಗ ಕೆಲವು ಸಮುದಾಯದೊಳಗ ‘ಸತಿಸಹಗಮನ’ ಅಂತ ಒಂದು ಪದ್ಧತಿಯಿತ್ತು. ಗಂಡ ಸತ್ತ ಹೆಣ್ಣು ಮಕ್ಕಳು ಆಗಂಡನ ಹೆಣಾಸುಡಾಕ ಹಚ್ಚಿರ್ತಾರಲ್ಲ ಚಿತೆ, ಅದ್ರಾಗಹೆಂಡ್ತಿನ್ನೂ ಕುಂದ್ರಸಿ ಬೆಂಕಿ ಹಚ್ಚತಿದ್ರು. ಅದಕ್ಕ ಸತಿ ಹೋಗೋದು ಅಂತಿದ್ರು. ಹಂಗ ಸತಿಹೋದ ಹೆಣಮಕ್ಕಳ ನೆನಪಿಗೆ ಶಾಸನಾ ಬರಸಿ ಕಲ್ಲು ಹೂಳಿಸ್ತಿದ್ರು. ಕ್ರಮೇಣ ಜನಾ ಆ ಹೆಣ್ಣುಮಕ್ಕಳ್ನ ‘ಮಹಾಸತಿ’ , ಮಾಸ್ತೇವಿ’ ಅಂತ ಹೇಳಿ ಆ ಮಾಸ್ತಿ ಕಲ್ಲುಪೂಜೆ ಮಾಡಾಕ ಶುರು ಹಚ್ಗೊಂಡ್ರು. ಈ ಪದ್ಧತಿಯಿಂದ ಎಷ್ಟ ಮಂದಿ ಹೆಣ್ಣುಮಕ್ಕಳು ಜೀವಾ ಕಳ್ಕೊಂಡ್ರೋ ಲೆಕ್ಕಾ ಇಟ್ಟೊರ್ಯಾರವ್ವಾ?!” ಅಪ್ಪ ವ್ಯಥೆಯಿಂದ ನುಡಿದ. ಅಪ್ಪನ ವಿವರಣೆಯನ್ನು ಕೇಳಿನನ್ನ ಇಡೀ ಶರೀರವೇ ಕಂಪಿಸಿತು! ನಾನು ಸಣ್ಣಗೆ ನಡುಗುತ್ತಾ ಕೇಳಿದೆ “ಹಂಗರ ಈಗ್ಲೂ ಈಪದ್ಧತಿ ಐತ್ಯಾ?! ಈಗ್ಲೂ ಹೆಣಮಕ್ಕಳ್ನ ಹಿಂಗಸುಡ್ತಾರಾ?!” “ಇಲ್ಲಾ ಪುಟ್ಟಿ ಈಗ ಹಿಂಗೆಲ್ಲಾ ಮಾಡೂದಿಲ್ಲ. ಆವಾಗ್ಲೇ ಒಬ್ಬ ಬ್ರಿಟಿಷ್ ಅಧಿಕಾರಿ ಈಪದ್ಧತಿ ನಿಷೇಧ ಮಾಡಿ ಕಾನೂನು ತಂದ ಪುಣ್ಯಾತ್ಮ”.  ಅಪ್ಪನ ಮಾತಿನಿಂದ ಕೊಂಚ ಸಮಾಧಾನವಾದರೂ ಅಂದು ಚಂದಮಾಮ, ಬಾಲ ಮಿತ್ರ ತೆಗೆದರೆ ಆಪುಟಗಳಲ್ಲಿ ಉರಿವಚಿತೆಯಲ್ಲಿ ಬೆಂದು ಹೋಗುತ್ತಿರುವ ಸತಿಯೇ ಕಂಡಂತಾಗಿ ಬೆಚ್ಚಿಬೀಳುವಂತಾಗಿ ಪುಸ್ತಕ ಮುಚ್ಚಿಟ್ಟು ದಿಂಗು ಬಡಿದು ಕುಳಿತೆ!

ಸತಿ ಪದ್ಧತಿ ಬಗೆಗಿನ ತಿಳಿವುನನ್ನೊಳಗೆ ಒಂದು ಬಗೆಯ ಭೀತಿಯನ್ನು ಹುಟ್ಟುಹಾಕಿತು. ಮಾಸ್ತೇವಿ ಗುಡಿಯ ಬಳಿ ಹೋಗಲು ಕಾಲು ಏಳದಾದವು. ನಾನು ದೊಡ್ಡಪ್ಪನ ಮನೆಗೆ ಹೋಗುವುದನ್ನೇ ಬಿಟ್ಟೆ. ಅಕಸ್ಮಾತ್ತಾಗಿ ಹೋಗುವ ಸಂದರ್ಭ ಬಂದರೂ ಸುತ್ತು ಹಾಕಿಕೊಂಡು ಬಲಬದಿಯ ರಸ್ತೆಯಲ್ಲಿ ಹಾದುಹೋಗುತ್ತಿದ್ದೆ! ಈ ಭೀತಿ ಇಲ್ಲಿಗೇ  ನಿಲ್ಲಲಿಲ್ಲ. ಅಜ್ಜಿ ಕರೆದುಕೊಂಡು ಹೋಗುವ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಚಾಮುಂಡೇಶ್ವರಿದೇವಿ ತನ್ನ ಅಷ್ಟೂ ಕೈಗಳಲ್ಲಿ ಬಗೆ ಬಗೆಯ ಆಯುಧಗಳನ್ನು ಹಿಡಿದು ರಾಕ್ಷಸರನ್ನು ಕೊಚ್ಚಿ ಕೊಚ್ಚಿ ಕೊಲ್ಲುವಾಗ ಭೀತಿಯಿಂದ ಅಜ್ಜಿಯ ಸೆರಗಿನ ಮರೆಗೆ ಅಡಗುತ್ತಿದ್ದೆ! ಎಲ್ಲಕ್ಕಿಂತ ಮಿಗಿಲಾಗಿ ಗುಗ್ಗಳದಲ್ಲಿ ಪುರವಂತರು ಒಡಪುಹೇಳುತ್ತ ವಿವರಿಸುವ ‘ದಕ್ಷಯಜ್ಞದ’ ಕಥೆಯಂತೂ ಕಂಬನಿಯನ್ನು ಕಪಾಳಕ್ಕೆ ಇಳಿಸುತ್ತಿತ್ತು. ದಾಕ್ಷಾಯಿಣಿ  ಯಜ್ಞಕುಂಡದಲ್ಲಿ  ಹಾರಿ ಸುಟ್ಟು ಹೋದದ್ದು, ಶಿವನ ತಾಂಡವಕ್ಕೆ ಕೈಲಾಸ ಭಸ್ಮವಾದದ್ದು, ವೀರಭದ್ರನ ಅಟ್ಟಹಾಸಕ್ಕೆ ದಕ್ಷನ ಸೈನ್ಯ ಧೂಳಿಪಟ ವಾದದ್ದು, ಕೊನೆಗೆ ದಕ್ಷನ ರುಂಡ ಯಜ್ಞಕುಂಡದಲ್ಲಿ ಬಿದ್ದದ್ದು…, ಇವರೆಲ್ಲ ಯಾವ ಲೋಕದ ಜೀವಿಗಳಪ್ಪ?! ಇವರು ನಮ್ಮ ಲೋಕಕ್ಕೆ ಬರದಿದ್ದರೆ ಸಾಕು! ಎನಿಸುತ್ತಿತ್ತು!!

ಅಜ್ಜಿಯೊಡನೆ ‘ಭಕ್ತಕುಂಬಾರ’ ಸಿನಿಮಾ ನೋಡಿ ಒಂದು ವಾರ ಊಟ ಸೇರದೇ, ನಿದ್ದೆ ಬಾರದೇ ಗೋಳಾಡಿದ್ದೆ! ದೇವರ ನಾಮಸ್ಮರಣೆ ಯಲ್ಲಿ ಮೈಮರೆತು ತನ್ನ ಎಳೆಯ ಕಂದನನ್ನು ಕಾಲಿನಡಿ ಕಚಪಚ ತುಳಿದು ಹಾಕುವ ದೃಶ್ಯವೇ ಕಣ್ಮುಂದೆ ಬಂದು ಮೈ ನಡುಗುತ್ತಿತ್ತು. ಬೇಡರ ಕಣ್ಣಪ್ಪ ಭಕ್ತಿಯ ಆವೇಶದಲ್ಲಿ ತನ್ನ ಕಣ್ಣನ್ನೇ ಕಿತ್ತ ದೃಶ್ಯ ಅಸಹನೀಯವಾಗಿತ್ತು. ಮೈಲಾರನ ಭಕ್ತರು ಓಣಿಯಾಚೆಯಿರುವ ಮೈಲಾರ ಲಿಂಗನಗುಡಿಯ ಮುಂದೆ ನಿಂತು ಉದ್ದವಾದ ‘ಚಬಕಿ’ನಂಥ ಹಗ್ಗದಿಂದ ತಮ್ಮ ಮೈಗಳಿಗೆ ‘ಚಪ್ಚಪ್’ ಅಂತ ಹೊಡೆದು ಕೊಳ್ಳುವುದನ್ನು ನೋಡಲಾಗುತ್ತಿರಲಿಲ್ಲ. ಬಿದಿರಿನ ಬುಟ್ಟಿಯಲ್ಲಿ ದೇವಿಯನ್ನು ಕೂಡ್ರಿಸಿಕೊಂಡು, ಕೊರಳಿಗೆ ಚರ್ಮ ವಾದ್ಯವೊಂದನ್ನು ತೂಗು ಹಾಕಿಕೊಂಡು, ‘ಡ.ಡಡ್ರ..ಡಡಡ್ರ..ಡ..ಡಡ್ರ…’ಎಂದು ಕಿವಿಗಡ ಚಿಕ್ಕುವಂತೆ ಬಾರಿಸುತ್ತಾ ಚಬಕಿನಿಂದ ಮೈಗೆ ‘ಚಪ್ಚಪ್’ ಹೊಡೆದುಕೊಳ್ಳುತ್ತ, ಕೇಕೆ ಹಾಕುವ, ಹಣೆಗೆ ಭಂಡಾರ ಬಳಿದುಕೊಂಡ ‘ದುರುಗಮುರುಗಿ’ಯವರು ಓಣಿಯಲ್ಲಿ ಬಂದರೆ  ಚಿಕ್ಕಮಕ್ಕಳು ಓಟಕಿತ್ತಿ ಮನೆಗಳಲ್ಲಿ ಅಡಗಿಕೊಳ್ಳುತ್ತಿದ್ದರು! ಅಜ್ಜಿಯ ಜೊತೆಪೇಟೆಗೆ ಹೋದಾಗ ಮುಖಕ್ಕೆ ಢಾಳಾಗಿ ಈ ಬತ್ತಿ ಬಳಿದುಕೊಂಡು ಕೊರಳಲ್ಲಿ ಜುಪ್ಪಿಜುಪ್ಪಿ ರುದ್ರಾಕ್ಷಿಮಾಲೆಗಳನ್ನು ಹಾಕಿಕೊಂಡು ಮುಳ್ಳಾವುಗೆಯ ಮೇಲೆ ನಿಂತ ಭೈರಾಗಿಗಳನ್ನು ಕಂಡರೆ ಹೆದರಿ ಅಜ್ಜಿಯ ಕೈಹಿಡಿತ ಬಿಗಿಗೊಳಿಸುತ್ತಿದ್ದೆ! ಕ್ಯಾವಿ ವಸ್ತ್ರ ಧರಿಸಿ ತಲೆಗೆ ಕ್ಯಾವಿ ಪೇಟವನ್ನು ಸುತ್ತಿಕೊಂಡು, ಕೊರಳಲ್ಲಿ ರುದ್ರಾಕ್ಷಿಮಾಲೆ ಧರಿಸಿ ಕ್ಯಾವಿ ಬಟ್ಟೆಯ  ಕೊಡೆಯನ್ನು ಹಿಡಿದು ಕೊಂಡು ಬಗಲಲ್ಲಿ ಜೋಳಿಗೆ, ಕೈಯಲ್ಲಿ ಲಾಟೀನು ಹಿಡಿದುಕೊಂಡು ಸಂಜೆಯ ವೇಳೆಗೆ ಸಾಗಿ ಬರುವ ಸಾರು ಐಯ್ನೋರು ಸಾರುವ ಸಂಗತಿಗಳಲ್ಲಿ ಜಗತ್ಪ್ರಳಯದ ಕಥೆ ಕೇಳಿ ಬೆಚ್ಚುವಂತಾಗುತ್ತಿತ್ತು!

ನವರಾತ್ರಿ ಹಬ್ಬದಲ್ಲಿ ಪಟ್ಟೇಗಾರ ಸಮುದಾಯದವರು ಅಂಬಾಭವಾನಿ ದೇವಿಗೆ ಕೊಬ್ಬಿದ ಕುರಿಗಳನ್ನು ಬಲಿ ಕೊಡುತ್ತಿದ್ದರು. ಇವುಗಳನ್ನೆಲ್ಲಾ ಕಂಡು ಇದೆಂತಹ ದೇವರಪೂಜೆ? ದೇವರು ಇಂತಹ ಪೂಜೆಯನ್ನು ಯಾಕಾದರೂ ಬಯಸುತ್ತವೆ?  ಎನಿಸುತ್ತಿತ್ತು.