ಕೊರೋನಾ ವೈರಸ್‌ ಬಗ್ಗೆ ಜಾಗೃತಿ ವಹಿಸಿ, ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ : ನಟ ದರ್ಶನ್‌ ಮನವಿ

ಕೊರೋನಾ ವೈರಸ್‌ ಬಗ್ಗೆ ಜಾಗೃತಿ ವಹಿಸಿ, ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ : ನಟ ದರ್ಶನ್‌ ಮನವಿ

ಬೆಂಗಳೂರು : ಚೀನಾದ ಮಹಾಮಾರಿ ಕೊರೋನಾ ಸೋಂಕಿಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಡೆಗಟ್ಟಲು ಮುನ್ನೇಚ್ಚರಿಕಾ ಕ್ರಮಗಳನ್ನು ಎಷ್ಟೇ ತಂದರೂ ಜನರು ಮಾತ್ರ  ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮನೆಯಲ್ಲಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಹೇಳಿದರೂ ಜನ ಬೀದಿಗೀಳಿಯುತ್ತಿದ್ದಾರೆ.

ಕರ್ನಾಟಕ ಸರ್ಕಾರವು ಸಹ ಈ ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವುದಕ್ಕಾಗಿ ರಾಜ್ಯವನ್ನು ಒಂದು ವಾರಗಳ ಕಾಲ ಲಾಕ್‌ ಡೌನ್‌ ಮಾಡಿದೆ ಆದರೂ ಜನರು ಯುಗಾದಿ ಹಬ್ಬಕ್ಕೆ ಖರೀದಿಗೆ ಎಂದು ಮಾರುಕಟ್ಟೆಗೆ ಗುಂಪುಗುಂಪಾಗಿ ಲಗ್ಗೆ ಇಡುತ್ತಿದ್ದಾರೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ದರ್ಶನ್‌ ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ ಎಂದು ಸಾರ್ವಜನಿಕರಿಗೆ ಖಡಕ್‌ ಸಂದೇಶ ನೀಡಿದ್ದಾರೆ.

ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕೊರೋನಾ ವೈರಸ್‌ ಇಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು ಈ ವೈರಸ್‌ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸರ್ಕಾರ, ಡಾಕ್ಟರ್ಸ್‌, ಪೊಲೀಸ್‌ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿಗಾಗಿ, ನಿಮ್ಮ ನೆರೆಹೊರೆಯ ಗೆಳಯರಿಗಾಗಿ ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ನಟ ದರ್ಶನ್‌ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

'Common sense is not common' ಎನ್ನುವ ಹಾಗೆ ಮಾಡಬೇಡಿ.

Please behave like a responsible citizen of the country.

ನಿಮ್ಮ ದಾಸ ದರ್ಶನ್ pic.twitter.com/znzoa7bT99

— Darshan Thoogudeepa (@dasadarshan) March 23, 2020

ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ ಇಟಲಿ ಸ್ಪೇನ್‌ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿದೆ ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು ಇದನ್ನು ದಯಮಾಡಿ ನೆರವೇರಿಸಿಕೊಡಿ

ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ Common sense is not common' ಎನ್ನುವ ಹಾಗೆ ಮಾಡಬೇಡಿ.

Please behave like a responsible citizen of the country  ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.