ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೂ

ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೂ

    "ಯಾರಿಗೆ ಬಂತು....ಎಲ್ಲಿಗೆ ಬಂತು...ನಲ್ವತ್ತೇಳರ ಸ್ವಾತಂತ್ರ,
     ಕೋಟ್ಯಾಧೀಶರ ಕೋಣೆಗೆ ಬಂತು"....
     "ಜನಗಳು ತಿನ್ನುವ ಬಾಯಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ."
     "ರಾಮಗೂ ಜೈ ಎನ್ನುತ ಬಂತು, ದುರ್ಗಾ, ಮಮತಾ, ಅಲ್ಲಾಹು  ಎನ್ನುತ ಬಂತು, 
     ಮೋದಿ, ಯೋಗಿ, ಶಾ, ಜೈಭೀಮ, ಶಿವಾ..ಶಿವಾ, ಹರಹರ ಮಾಹಾದೇವ ಎನ್ನುತ ಬಂತು     
     ನಲ್ವತ್ತೇಳರ ಸ್ವಾತಂತ್ರ್ಯ"..... ಯಾರಿಗೆ ಬಂತು ನಮ್ಮ ಸಂಸತ್ತಿಗೆ ಬಂತು.....

ಲೇ ಲೇ ಕಬರಗೇಡಿ ಬಸ್ಯಾ, ಹಿಂಗ್ಯಾಕಲೇ "ನಮ್ಮ ಸಿದ್ಲೀಂಗಣ್ಣನ ಕ್ರಾಂತಿಹಾಡ್ ಇಷ್ಟಾಕ್ ಕುಲಗೆಡ್ಸಿಮಗ್"್ನ...! "ಸಿದ್ಲೀಂಗಣ್ಣಗ್ ನೀ...ಇಷ್ಟ್ ಕೆಟ್ಟದ್ಯಾಗಿ ಅವ್ರ ಹಾಡ ಹೇಳೋದು ಗೊತ್ತಾದ್ರ... ಅವ್ರು ಬಂದು ನಿನ್ನ ಕಿವಿ ಹಿಂಡ್ತಾರಾ...ಮಗ್ನ"?

ಕಾಕಾರ ನೀವು "ಯಾವ ಸಿದ್ಲೀಂಗಣ್ಣನ ಬಗ್ಗೆ ಹೇಳಾಕ ಹತ್ತೀರೀ"....? ಕ್ರಾಂತಿಕವಿ ಅಂತ್ ಇದ್ದರಲ್ಲ ಸಿದ್ಲೀಂಗಣ್ಣಾವ್ರೂ?, ಇಲ್ಲಾ ನಮ್ಮಮೂಲಿಮನಿ ಸಿದ್ಲೀಂಗಣ್ಣನ ಬಗ್ಗೆ?. ಯಾವ ಸಿದ್ಲೀಂಗಣ್ಣವ್ರೂ ಎಲ್ಲೆಅದಾರ್ರೀ, ನನಗಂತು ಗೊತ್ತಿಲ್ಲ"!

ಲೇ ಲೇ.... ಪಾಪಾ ಮೂಲಿಮನಿ ಸಿದ್ಲೀಂಗಪ್ಪನ ಯಾಕ್ ಇದ್ರಾಗ ಎಳ್ದ್ ತರ್ತೀದಿ?... "ಮೊನ್ನೆರ್ ಇಲೇಕ್ಷನ್ ಒಳಗ ಕಾಂಗ್ರೆಸ್ ಗೆಲ್ತತಿ ಅಂತ್ ಲಕ್ಷಗಟ್ಟಲೆ ಬೆಟ್ಟ್ ಕಟ್ಟಿ ಸೋತು  ಸುಣ್ಣಾಗಿ ಮೂಲಿ ಹಿಡ್ದ ಕುಂತ ಆಸಾಮಿ ಇನ್ನು ಮನಿ ಬಿಟ್ಟು ಹೊರ್ಗ ಬಂದಿಲ"್ಲ!. ನಾ ಹೇಳಾಕ ಹತ್ತಿದ್ದು "ಕ್ರಾಂತಿ ಕವಿ ಸಿದ್ಲೀಂಗಪ್ಪನವ್ರ ಬಗ್ಗೆ". ಮಗ್ನ ನೀ ಹೇಳಾಕ ಹತ್ತಿದ್ದೆಲ್ಲ "ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಅನ್ನೋ ಪದ್ಯಾನ ಬರ್ದೋರಪಾ ಅವ್ರು"....

ಓ ಅವ್ರ....ಅವ್ರೂ "ಮುರ್ನಾಲ್ಕು ವರ್ಷಾತು ನನ್ಗ ಕಂಡಿಲ್ಲ...! ನಾ ಎಲ್ಲೆ ಅವ್ರೂ ನಮ್ಮ ದೇಶಾನ ಬಿಟ್ಟು ಹೋಗೇರಬೇಕು ಅಂತ ಅನಕೊಂಡಿದೆ"್ದ?.
ಅನ್ಕೋಂತೀಪಾ ನೀ ಅನ್ನೋವ್ನ, "ಸಿದ್ಲೀಂಗಣ್ಣವ್ರೂ ತಮ್ಮ ಪದ್ಯಗಳ ಮೂಲ್ಕ ಹೋರಾಟಗಾರರಿಗೆ ಕೊಟ್ಟಕೊಡ್ಗೆ ಸಣ್ಣದೇನಲ್ಪಾ"!. "ಅವ್ರೀಗೂ ವಯಸ್ಸಾತು!. ಹಿಂಗಾಗಿ ಓಡ್ಯಾಡದನ್ನ್ ಅವ್ರೂ ಕಡ್ಮೀ ಮಾಡಿರಬೇಕು? ಹಿಂಗಾಗಿ ಅವ್ರು ನಿನ್ಗ ಕಂಡೀರಾಕಿಲ್ಲ"...? "ಸ್ವದೇಶಾ ಬಿಟ್ಟು ಅವ್ರು ವಿದೇಶಕ್ಕೂ ಹೋಗಿಲ್ಲ...! ತಮ್ಮ ಪಾಡಿಗೆ ತಾವು ಅದ್ನ, ಇದ್ನ ತಗೋಳತಾ ಪದ್ಯಾ ಬರ್ಕೋತಾ ಕುಂತೀರಬೇಕು"..!

ಈ "ಅದ್ನ-ಇದ್ನ ತಗೋಳ್ಳದು ಅಂದ್ರ ಏನ್ರೀ"...?

ನಿನ್ಗ ಎಲ್ಲಾ ಬಿಡ್ಡಿ ಹೇಳಬೇಕು,! "ಬಿಸಿಲಿನ ಝಳಬಾಳೈತಿ, ತಣ್ಣಗ ಆಗಾಕ್ ಎಳನೀರು, ಮಜ್ಜಿಗಿ, ತಣ್ಣನ್ ನೀರು ತಗೋಳ್ಳತಾರ". 

ಹಂಗ್ ಹೇಳ್ರೀ ಮತ್ತ್, ನಾ ಏನೋ ಅನ್ನಕ್ಕೊಂಡಿದ್ದೆ..!

ಅದಿರ್ಲೀ, "ಅದೇನೋ ಒದರಾಕ್ ಹತ್ತೀದ್ದೇಲ್ಲ, ಅದರರ್ಥ ಹೇಳೋ".?

ಏ ಅದ್ರಾಗ ಏನೈತ್ರೀ......ಮೊನ್ನೆ ದಿಲ್ಲಿ ಪಾರ್ಲಿಮೆಂಟ್ ಒಳ್ಗ ರಂಪಾಟಾನ್ ನಡ್ದು ಹೋತು......  ಹೊಸ್ದಾಗಿ ಆರ್ಸಿ ಬಂದ್ "ಸಂಸತ್ ಸದಸ್ಯರು ಪ್ರಮಾಣ ವಚ್ನಾ ಸ್ವೀಕರಿಸೋ ವೇಳ್ಯಾದಾಗ್ ವಿಶ್ವಶ್ರೇಷ್ಠ ನಮ್ಮ ಸಂವಿಧಾನದ್ ಆಶಯಗಳನ್ನ ಗಾಳಿಗೆ ತೂರ್ಯಾರ್" "ರಾಮಗೂ ಜೈ , ರಾವಣನಿಗೂ ಜೈ, ದುರ್ಗಾ, ಮಮತಾ, ಅಲ್ಲಾಹುಗೂ ಸೈ, ಭಾರತ್ ಮಾತಾಕಿ ಜೈ, ಜೈ ಮೋದಿ, ಜೈ ಯೋಗಿ, ಜೈ ಶಾ, ಜೈಭೀಮ, ಶಿವಾ..ಶಿವಾ, ಹರಹರ ಮಾಹಾದೇವ ಅಂತ್" ಹೇಳೋಮೂಲ್ಕ "ತಮ್ಮ ಮುಂದಿನ ಐದ್ ವರ್ಷದ ನಡ್ಗಿ ಹೆಂಗ್ ಇರ್ತಾವು ಅನ್ನೋದನ್ನ ದೇಶದ್ ಜನ್ರಮುಂದ್ ಇಟ್ಟಾರ"...ಅವ್ರ ವರ್ತನೆ ನೋಡಿ   

"ಯಾರಿಗೆ ಬಂತು....ಎಲ್ಲಿಗೆ ಬಂತು...ನಲ್ವತ್ತೇಳರ ಸ್ವಾತಂತ್ರ, ಅನ್ನೋ ಹಾಡು ನೆನ್ಪಾತು ಅದ್ನ ಅನ್ನಾಕ ಹತ್ತಿದ್ದೆ ಅಷ್ಟರಾಗ್ ನೀವು ಬಂದು ಮಾತಿಗೆಳ್ದ್ರೀ...

"ಕಾಲ ಕೆಟ್ಟಹೋತಲೇ ತಮ್ಮ ಕಾಲ ಕೆಟ್ಟ ಹೋತು"?..... "ಬೆಲ್ಲದ ಕಟ್ಟಿ ಕಟ್ಟಿ, ಅದ್ರಾಗ್ ಬೇವಿನ್ ಗಿಡಾ ಬೆಳದ್ದ್ರ.... ಅದ್ರ ಹಣ್ಣು ವಿಷ ಇರ್ತಾವ್ ಹೊರ್ತು, ಸಿಹಿ ಇರಾಕ್ ಸಾಧ್ಯನ್ ಇಲ್ಲ ಅಂತ ಶರಣ್ರು ವಚನದಾಗ ಹೇಳ್ಯಾರ" ಅವ್ರ ಮಾತಿನ ಹಂಗ್ "ರಕ್ತದ ನರನಾಡಿ ತುಂಬಾ ಮತಾಂಧತೆ ಅನ್ನೋ ವಿಷಾ ತುಂಬಿಕೊಂಡಿರೋ ವ್ಯಕ್ತಿಗಳ ಬಾಯಿಂದ ಇಂತಾ ಅಣಿ ಮುತ್ತು ಉದ್ರತಾವು. ಇವುನ್ನೆಲ್ಲಾ ಸಹಿಸ್ಕಾಬೇಕೂ. ಅಲ್ಲಾ ಇವ್ರೂ ನಮ್ಮ ಸಂಸತ್ತನ್ನ ಏನ ಅಂತ್ ತಿಳ್ಕೊಂಡಾರ್"? "ತಮ್ಮ ಮಾವುನ ಮನಿ,ವಾರದ್ ಸಂತಿ ಮಾರ್ಕೆಟ್ ಅಂತ್ ತಿಳ್ಕೋಂಡಾರೇನು."? "ಸಂಸತ್ತು ನಮ್ಮ ದೇಶದ ಆಗೂ ಹೋಗುಗಳನ್ನ ನಿರ್ಧರಿಸೋ ದೇವಾಲಯಾ ಇದ್ದಂಗ್", "ಆದ್ರ ನಮ್ಮ ದುರ್ಧೆವಾ ಅಂದ್ರ ಪ್ರಜಾ ಪ್ರಜಾಪ್ರಭುತ್ವದ ನಿಜವಾದ ಅರ್ಥ ಗೊತ್ತೀಲ್ದ ಯಾರ್ಯಾರದೋ ಹೆಸ್ರಿನ್ಯಾಗ್ ಹೆಂಗ್ಯೆಂಗರ್ ಆರ್ಸಿಬಂದೋರು ಹಿಂಗ್ ಎಡಬಿಡಂಗಿಗಳ ಹಂಗ್ ನಡ್ಕೋತಾರ" ನೋಡು...

ಆತು ಬಿಡ್ಪಾ, "ಇನ್ನೂ ಈಕಣ್ಣಿನ್ಯಾಗ್ ಏನೇನೂ ಕರ್ಮಾ ನೋಡಬೇಕೋ ನೋಡೋಣ. ಎಲ್ಲಿಗೆ ಬಂತ್ಪಾ ನಿಮ್ಮ ಕುಮಾರಣ್ಣನ ಗ್ರಾಮವಾಸ್ತವ್ಯ"..!ನಮ್ಮ  ಕುಮಾರಣ್ಣ ಚಂಡ್ರಕಿ ಗ್ರಾಮಕ್ಕ್ ಬಂದ್ ಹೊತ್ತಿನ್ಯಾಗ್ ಅಲ್ಲಿ ಜನ್ರು ಭಾಜಾ ಭಜಂತ್ರಿ ಮೂಲಕ್ಕ ಸ್ವಾಗತಿಸಿ, ಹಾದಿ ತುಂಬಾ ಹೂವ್ ಹಾಕಿ ಬರಮಾಡಿಕೊಂಡಾರ. ಕುಮಾರಣ್ಣ ಶಾಲಿಒಳ್ಗ ಉಳ್ಕಂಡು ಅಲ್ಲಿ ಜನ್ರ ಕಷ್ಟಕ್ಕ ಕಿವಿಕೊಟ್ಟಾನ. ಜನ್ರು ಕೇಳಿದ್ಕೆಲ್ಲಾ ಹೂ ಅಂದು ಬಂದಾರ. ಕುಮಾರಣ್ಣಾವ್ರ ಗ್ರಾಮ ವಾಸ್ತವ್ಯದ ಪ್ರಯೋಜನ್ನ್ ಅದೇಷ್ಟರ್ ಮಟ್ಟಿಗೆ ಆಕೈತೋ ಆ ದೇವೇಗೌಡ್ರಿಗೆ ಗೊತ್ತು..! 
ಯಾಕ್ ಸಿದ್ದ್ರಾಮಣ್ಣಗ್, ವಿಶ್ವನಾಥಗ್ ಗೊತ್ತಿಲ್ಲನು?

"ಇದ್ರಾಗ್ ಸಿದ್ದ್ರಾಮಣ್ಣ, ವಿಶ್ವನಾಥ್‍ನ್ ಯಾಕ್ ಎಳದ್ ತರ್ತೀರಿ.....ಸಿದ್ದ್ರಾಮಣ್ಣ ದಿಲ್ಲಿಗೆ ಹೋಗ್ಯಾರ, ವಿಶ್ವನಾಥು ನಾ ಜೆಡಿಎಸ್ ಸಾರಥಿ ಆಗ್ಯಾಕ ಒಲ್ಲೆ ಅಂತ್ ಪಟ್ಟಹಿಡ್ದ ಕುಂತಾರ್".

ರಾಜಕೀಯದ ಸುದ್ದಿ ಹಾಳಾಗಿ  ಹೋಗ್ಲಿ ಬಿಡೂ , ಈ ಜಿಂದ್ಯಾಲ್ ಗದ್ಲ್ ಎಲ್ಲಿಗೆ ಬಂತೂ.....?

"ಎಲ್ಗೂ ಬಂದಿಲ್ಲ, ಅದು ನಿಂತಲ್ಲೆ ನಿಂತ್ ಬಿಟೈತಿ", "ಹಿಂದ್ ಬಿಜೆಪಿ-ಜೆಡಿಎಸ್ ಸರ್ಕಾರ ಇದ್ದ ಹೊತ್ತಿನ್ಯಾಗ್, ಜಿಂದ್ಯಾಲ್ ಕಂಪನಿಯವ್ರಿಗೆ ಭೂಮಿನ್ ಲೀಜ್ಗೆ ಕೊಟ್ಟದ್ರೂ". "ಆ ಭೂಮೀನ ಈಗ ಆ ಜಿಂದ್ಯಾಲ್ ಕಂಪನಿಯವ್ರು ಖರೀದಿ ಕೊಡ್ರಿ ಅಂತ್ ಈಮೈತ್ರಿ ಸರ್ಕಾರಕ್ಕ  ಬೇಡ್ಕಿ ಇಟ್ಟಿದ್ರಿಂದಾ ಈಸರ್ಕಾರದವ್ರು ಜಿಂದ್ಯಾಲದವ್ರಿಗೆ ಭೂಮಿಕೊಡ್ಯಾಕ ತುದಿಗಾಲ್ ಮ್ಯಾಲ್ ನಿಂತಾರ್, ಈಬಗ್ಗೆ ಸಚಿವ ಸಂಪುಟದಾಗ್ ನಿರ್ಧಾರ ಕೈಗೊಂಡಾರ್ ನೋಡ್ರೀ"...

ಅಲ್ಲೋ "ಬಡ್ವರು ಇಪ್ಪತ್ತ ವರ್ಷದಿಂದಾ ಎರಡ್ಕೆರ್ರೆ ಭೂಮಿ ಹೊಡ್ಕೊಂಡ ಹೊಟ್ಟಿ ತುಂಬಿಕೊಳ್ಳಾ ಬಂದಿದ್ದು, ನಮ್ಗ ಪಟ್ಟಾಕೊಡ್ರೀ ಅಂತ್ ಹಗ್ಲು ರಾತ್ರಿ ಹೊಯ್ಯಕೊಂಡ್ರು ಸತಗಿ ಈಸರ್ಕಾರಕ್ಕ ಕಣ್ಣ ಇಲ್ದಂಗ್, ಕಿವಿ ಇಲ್ಲದಂಗ್À್ನಡಕೊಳ್ಳತೈತಿ". ಆದ್ರ ಸರ್ಕಾರಕ್ಕ "ಕೋಟಿ ಕೋಟಿ ರೊಕ್ಕಾನ ಟ್ಯಾಕ್ಸ್ ಬಾಕಿ ಉಳ್ಸಿಕೊಂಡಿರೋ ಈ ಜಿಂದ್ಯಾಲ್ ಕಂಪನಿಗೆ ಕೋಟಿ, ಕೋಟಿ ಬೆಲೆಬಾಳೋ ಭೂಮಿನ ಹೆಂಗ್ ಬೇಕು ಹಂಗ್ ಕೊಡಾಕ ಹೊಂಟಿರೋ ಈ ಸರ್ಕಾರಕ್ಕೆ ಎನ್ ಅಂತ್ ಹೆಟ್ಟಬೇಕು."..? "ಬಡವ್ರಿಗೊಂದು ನ್ಯಾಯ್ ಆದ್ರ, ರೊಕ್ಕ ಇದ್ದೋರಿಗೆ ಒಂದ್ ನ್ಯಾಯ ಅನು".?

"ಏನ ಮಾಡೋದ್ರೀ ಎಲ್ಲಾರೂ ಅವ್ರ ಆಗ್ಯಾರ, ಬಡ್ವಾ ನಿ ಮಡಗಿದಂಗೀರೂ ಅನ್ನೋ ಮಾತಿನಹಂಗ್ ನಮ್ಮ ಪಾಡಾಗೇತಿ".

"ಕಲಿಗಾಲೋ ತಮ್ಮ ಇದೂ ಕಲಿಗಾಲ, ಹೊತ್ತ ಬಂದಂಗ್ ಹೊತ್ತಿನಕಡಿಗೆ ನಡೆವಾ ಶ್ಯಾಣ, ಬಂಡಿಗೆ ಗುದ್ದಾಗ ಹೊಂಟವಾ ತಲಿಒಡಕಂತಾನ" ಹೊತ್ತಾತು ಮಳಿಬರಂಗ್ ಆಗೇತಿ ಹುಂಟುಂಟುಲೆ ಮನಿ ಸೇರಿಕೊಳ್ಳೋಣ ನಡಿ ಎನ್ನುತ್ತಾ ಇಬ್ಬರು ಮನಿಕಡೆ ನಡೆದರು.