ದೇಶದ ಆರ್ಥಿಕತೆ ಕುಸಿತ; ಇನ್ನಷ್ಟು ಅಪಾಯದ ಮುನ್ಸೂಚನೆಗೆ ದಾರಿ

ದೇಶದ ಆರ್ಥಿಕತೆ ಕುಸಿತ; ಇನ್ನಷ್ಟು ಅಪಾಯದ ಮುನ್ಸೂಚನೆಗೆ ದಾರಿ

ದೆಹಲಿ : ದೇಶದ ಆರ್ಥಿಕತೆ ಕುಸಿತ, ನಿರುದ್ಯೋಗದಿಂದಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಕೋಪದಲ್ಲಿ ಸ್ಫೋಟಗೊಳ್ಳುವ ಅಪಾಯವಿದೆ ಎಂದು ಮೋದಿ ಸರ್ಕಾರ ವಿರುದ್ದ ಕಾಂಗ್ರೆಸ್ ಹಿರಿಯ ಮುಖಂಡ ಪಿ  ಚಿದಂಬರಂ ಸರಣಿ ಟ್ವೀಟ್ ಮೂಲಕ ದಾಳಿ ನಡೆಸಿದ್ದಾರೆ.

ರಾಷ್ಟ್ರವು ಸಿಎಎ ಮತ್ತು ಎನ್ ಆರ್ ಸಿ ವಿರುದ್ದ ಪ್ರತಿಭಟನೆಗಳಲ್ಲಿ ಮುಳುಗಿದೆ. ಈ ಎರಡೂ ಅಂಶಗಳು ಸ್ಪಷ್ಟ ಮತ್ತು ಪ್ರಸ್ತುತ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಇದಲ್ಲದೆ ದೇಶದಲ್ಲಿ ಆರ್ಥಿಕತೆ ಕುಸಿತವಾಗುತ್ತಿರುವುದರಿಂದ ಇದು ಇನ್ನಷ್ಟು ಅಪಾಯವನ್ನು ಉಂಟು ಮಾಡಬಹುದಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಆಹಾರ ಸಮಸ್ಯೆ, ಶೇ 14,12 ರಷ್ಟು ಹೆಚ್ಚಾಗಿದ್ದು, ತರಕಾರಿ ಬೆಲೆ ಶೇ 60 ರಷ್ಟು ಹೆಚ್ಚಿದೆ ಈರುಳ್ಳಿ ಬೆಲೆ ದಿನೇ ದಿನೆ ಕೆ ಜಿ ಗೆ 100 ರೂ ಗೆ ದಾಟಿದೆ ಇದು ಬಿಜೆಪಿ ಸರ್ಕಾರದ ಅಚ್ಚೇ ದಿನದ ಭರವಸೆಗಳು ಎಂದು ಟ್ವೀಟ್ ಮಾಡಿದ್ದಾರೆ.