ನಮ್ಮ ತಂದೆಯ ನಂಬಿಕೆ ಹಾದಿ ಮಾರ್ಚ್ 17 ರಂದೇ ಅಂತ್ಯ: ರಾಜಕೀಯ ಬೆಳವಣಿಗೆ ಬಗ್ಗೆ ಮನೋಹರ್ ಪರಿಕ್ಕರ್ ಪುತ್ರ ವಿಷಾದ

ನಮ್ಮ ತಂದೆಯ ನಂಬಿಕೆ ಹಾದಿ ಮಾರ್ಚ್ 17 ರಂದೇ ಅಂತ್ಯ: ರಾಜಕೀಯ ಬೆಳವಣಿಗೆ ಬಗ್ಗೆ ಮನೋಹರ್ ಪರಿಕ್ಕರ್ ಪುತ್ರ ವಿಷಾದ

ಪಣಜಿ: ಕಳೆದ ರಾತ್ರಿಯಿಂದ ಆರಂಭವಾಗಿರುವ ರಾಜಕೀಯ ಬೆಳವಣಿಗೆ ಕುರಿತು ಗೋವಾ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆಯವರು ರಾಜಕೀಯದಲ್ಲಿ ಉಳಿಸಿಕೊಂಡು ಬಂದಿದ್ದ ನಂಬಿಕೆಯ ಹಾದಿ ಮಾರ್ಚ್ 17 ರಂದೇ ಅಂತ್ಯವಾಯಿತು ಎಂದಿದ್ದಾರೆ.

ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗೋವಾದ ರಾಜೀಯ ಬೆಳವಣಿಗೆಯನ್ನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಸಮಯವೇ ಮಾತ್ರ ಉತ್ತರ ನೀಡುತ್ತದೆ ಎಂದು ಹೇಳಿದರು. ನನ್ನ ತಂದೆಯವರು ನಡೆದು ಬಂದ ರಾಜಕೀಯದ ವಿಶ್ವಾಸದ ಹಾದಿಯನ್ನು ಮತ್ತೆ ಸ್ಥಾಪಿಸಲು ನಾನು ಇಷ್ಟಪಡುತ್ತೇನೆ, ಯಾವುದೇ ಪರಿಣಾಮ ಬಂದರು ಎದುರಿಸಲು ಸಿದ್ಧ ಎಂದು ಉತ್ಪಲ್ ಹೇಳಿದರು.

ಮಂಗಳವಾರ ರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾಂಗ್ರೆಸ್ ನ ಒಟ್ಟು 15(40) ಶಾಸಕರಲ್ಲಿ 10 ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಕಳೆದ ಮಾರ್ಚ್ 17 ರಂದು ವಿಧಿವಶರಾಗಿದ್ದರು.