ಮೈತ್ರಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟ ಯಡಿಯೂರಪ್ಪ : ಸೇಡಿನ ರಾಜಕಾರಣ ಇಲ್ಲ ಎಂಬ ಕೊಟ್ಟ ಮಾತಿಗೆ ತಪ್ಪಿದ್ದೇಕಪ್ಪ?

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಹೊಸ ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿದೆ. ಸೇಡಿನ ರಾಜಕಾರಣ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದೂ ‘ಬೂಸಿ’ಯೇ?

ಮೈತ್ರಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟ ಯಡಿಯೂರಪ್ಪ : ಸೇಡಿನ ರಾಜಕಾರಣ ಇಲ್ಲ ಎಂಬ ಕೊಟ್ಟ ಮಾತಿಗೆ ತಪ್ಪಿದ್ದೇಕಪ್ಪ?

ಎಚ್ಡಿ ಕುಮಾರಸ್ವಾಮಿ ನೇತೃತ್ವದ (2018-19) ಮೈತ್ರಿ ಸರ್ಕಾರ ಘೋಷಿಸಿದ್ದ 'ಮತ್ತೊಂದು ಕಾವೇರಿ ಯೋಜನೆ'ಯನ್ನು ಈಗಿನ ಬಿಜೆಪಿ ಸರ್ಕಾರ ಕೈ ಬಿಟ್ಟಿದೆ. ಚಲನ ಶೀಲ ಬೆಂಗಳೂರು ಹೆಸರಿನಲ್ಲಿ ಘೋಷಣೆ ಆಗಿದ್ದ ಯೋಜನೆಯನ್ನು ಕೈ ಬಿಟ್ಟಿರುವುದಕ್ಕೆ ಬಿಜೆಪಿ ಸರ್ಕಾರ ಯಾವುದೇ ಕಾರಣಗಳನ್ನೂ ನೀಡಿಲ್ಲ.

ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದೆ ಹೇಳಿಕೆ ನೀಡಿದ್ದಾರಾದರೂ ಮೈತ್ರಿ ಸರ್ಕಾರದ ಅವಧಿಯ ಬಜೆಟ್ನಲ್ಲಿ ಘೋಷಿಸಿದ್ದ ಹಲವು ಹೊಸ ಯೋಜನೆಗಳನ್ನು ಕೈ ಬಿಡುತ್ತಿರುವುದು ಅವರು ತಮ್ಮ ಹೇಳಿಕೆಗೆ ಬದ್ಧರಾಗಿಲ್ಲ ಎಂಬುದನ್ನು ನಿರೂಪಿಸುತ್ತಿದೆ.

ಅದೇ ರೀತಿ ಬಜೆಟ್ನಲ್ಲಿ ಘೋಷಣೆಯಾಗಿದ್ದ ಬೆಂಗಳೂರು ನಗರವನ್ನು ತ್ಯಾಜ್ಯ ಮುಕ್ತಗೊಳಿಸುವ ಯೋಜನೆ ಮತ್ತು ಬೃಹತ್ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 2019-20ರೊಳಗೆ 110 ಹಳ್ಳಿಗಳನ್ನು ಸೇರ್ಪಡೆಗೊಳಿಸುವ ಯೋಜನೆ ಮತ್ತು ಬಿಎಂಆರ್ಸಿಎಲ್ಗೆ ಸಂಬಂಧಿಸಿದ ಹೊಸ ಯೋಜನೆಯನ್ನು ಕೂಡ ಇದೇ ಹಾದಿಗೆ ತಳ್ಳಿದೆ.

2019-20ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದ ಒಟ್ಟು ಯೋಜನೆಗಳ ಪೈಕಿ ಮೂರು ಹೊಸ ಯೋಜನೆಗಳಿದ್ದವು. ಪೈಕಿ ಮತ್ತೊಂದು ಕಾವೇರಿ ಯೋಜನೆಯನ್ನು ಬೃಹತ್ಬೆಂಗಳೂರು ನಗರದ ನೀರಿನ ಬವಣೆ ನಿವಾರಿಸುವ ಉದ್ಧೇಶ ಹೊಂದಿತ್ತು. ಇದನ್ನು ಅರ್ಕಾವತಿ, ದಕ್ಷಿಣ ಪಿನಾಕಿನಿ ನದಿಗಳ ಪುನಶ್ಚೇತನಗೊಳಿಸುವ ಭಾಗವಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯ ಕಣ್ಗಾವಲಿನಲ್ಲಿ ಯೋಜನೆಯನ್ನು ಮುನ್ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಬಜೆಟ್ಭಾಷಣದಲ್ಲಿ ಹೇಳಿದ್ದರು. ಯೋಜನೆ ಆರಂಭಿಕ ಹಂತಕ್ಕೆ 50 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದರು.

ಬೆಂಗಳೂರು ಚಲನಶೀಲತೆಗಾಗಿ (ಮೊಬಿಲಿಟಿ) ಒಂದು ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲು ಪ್ರಸ್ತಾಪಿಸಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಹೆಚ್ಚು ದೂರ ಕ್ರಮಿಸಲು ಮೆಟ್ರೊ ಮತ್ತು ಬಸ್ ಕಾರಿಡಾರ್ಗಳನ್ನು ಹಾಗೂ ಅಲ್ಪ ದೂರ ಕ್ರಮಿಸಲು ಸೈಕಲ್ಬಳಕೆ ಅಥವಾ ನಡಿಗೆಯನ್ನು ಉತ್ತೇಜಿಸುವಂತೆ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಿದ್ದರು.

ಆದರೆ ಹೊಸ  ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಯೋಜನೆ ಮೇಲೆ ಕೈಗೊಂಡ ಕ್ರಮದ ಉತ್ತರದಲ್ಲಿ  'ಕೇವಲ ಭಾಷಣ' (ONLY SPEECH) ಎಂದು ಉದ್ಧರಿಸಿದೆ.

ನಮ್ಮ ಮೆಟ್ರೊ, ಪಾದಚಾರಿ ಮಾರ್ಗ, ಸೈಕಲ್ಪಥ ಮುಂತಾದ ಅಂಶಗಳನ್ನೂ ಯೋಜನೆ ಒಳಗೊಳ್ಳಲಿತ್ತು. ಬಿ.ಎಂ.ಟಿ.ಸಿ. ಬಸ್ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಿದ್ದ ಎಚ್ಡಿ ಕುಮಾರಸ್ವಾಮಿ ಅವರು ಯೋಜನೆಗೆ ಮುಂದಿನ ವರ್ಷಗಳಲ್ಲಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದರು.

ಹಾಗೆಯೇ ಬೆಂಗಳೂರು ಮಹಾನಗರವನ್ನು ತ್ಯಾಜ್ಯಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕೆ.ಪಿ.ಸಿ.ಎಲ್. ವತಿಯಿಂದ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ 400 ಮೆಟ್ರಿಕ್ ಟನ್ ಸಾಮರ್ಥ್ಯದ ಘಟಕ ಸ್ಥಾಪಿಸುವ ಯೋಜನೆ ಕೂಡ ಹಳ್ಳ ಹಿಡಿಯುವ ಲಕ್ಷಣಗಳಿವೆ. ಯೋಜನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಯೋಜನೆ ಮೇಲೆ ಕೈಗೊಂಡ ಕ್ರಮದ ಉತ್ತರದಲ್ಲಿ  'ಕೇವಲ ಭಾಷಣ' ಎಂದು ಉತ್ತರಿಸಿದೆ.ಅದೇ ರೀತಿ 76.55 ಕೋಟಿ ರು.ಮೊತ್ತದ ಅಂದಾಜು ವೆಚ್ಚದಲ್ಲಿ ಬೆಂಗಳೂರಿನ ಒಟ್ಟು 941 ಕಡೆಗಳಲ್ಲಿ ಒಳಚರಂಡಿ ಯೋಜನೆಯನ್ನು ಮುಂದಿನ 2 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಘೋಷಿಸಿದ್ದ ಯೋಜನೆ ಮೇಲೂ ಈವರೆವಿಗೂ ಯಾವುದೇ ಕ್ರಮ ವಹಿಸಿಲ್ಲ. ಯಥಾ ಪ್ರಕಾರ ಯೋಜನೆ ಮೇಲೆ ಕೈಗೊಂಡ ಕ್ರಮದ ಉತ್ತರದಲ್ಲಿ  'ಕೇವಲ ಭಾಷಣಎಂದು ಹೇಳಿದೆ.

ಮೈತ್ರಿ ಸರ್ಕಾರ ಪತನಗೊಳಿಸಿದ್ದ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದೇ ಹೇಳಿದ್ದರು. ಆದರೆ ಮೈತ್ರಿ ಸರ್ಕಾರ ಅನುಮೋದಿಸಿದ್ದ ವಿವಿಧ ಕಾಮಗಾರಿಗಳಿಗೆ ತಡೆಯೊಡ್ಡಿದ್ದರು. ಅಲ್ಲದೆ ಅನುಮೋದಿತ ಕಾಮಗಾರಿ ಪೂರ್ಣಗೊಳಿಸಿದ್ದ ಗುತ್ತಿಗೆದಾರರಿಗೂ ಬಾಕಿ ಮೊತ್ತ ನೀಡದೇ ಸತಾಯಿಸಿದ್ದರು. ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್‌, ಲೋಕೋಪಯೋಗಿ, ನಗರಾಭಿವೃದ್ಧಿ ಇಲಾಖೆಗಳಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.

ಹಾಗೆಯೇ ಮೈತ್ರಿ ಸರ್ಕಾರದ ಅವಧಿಯಲ್ಲಿ ಜೆಡಿಎಸ್ಮತ್ತು ಕಾಂಗ್ರೆಸ್ಶಾಸಕರುಗಳಿರುವ ವಿಧಾನಸಭೆ ಕ್ಷೇತ್ರಗಳಿಗೆ ಹಂಚಿಕೆಯಾಗಿದ್ದ ಅನುದಾನ ರದ್ದುಗೊಳಿಸಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ಮತ್ತು ಸೌಲಭ್ಯಗಳನ್ನೂ ಹಿಂಪಡೆದುಕೊಂಡ ನಿರ್ಧಾರದ ಹಿಂದೆ ಸೇಡಿನ ರಾಜಕಾರಣವಿತ್ತು ಎಂದು ಪ್ರತಿಪಕ್ಷಗಳು ಆರೋಪಿಸಿದ್ದನ್ನು ಸ್ಮರಿಸಬಹುದು.